ಪೇಜಾವರ ಶ್ರೀಗಳು ಕಲಬುರಗಿ ಭೇಟಿ
ಪೇಜಾವರ ಶ್ರೀಗಳು ಕಲಬುರಗಿ ಭೇಟಿ
ಕಲಬುರಗಿ : ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕಲಬುರಗಿಗೆ ಆಗಮಿಸಿ ನ. 3.ಮತ್ತು 4 ರಂದು ಬುಧವಾರ ಭೇಟಿಯಾಗಿ ಆಶೀರ್ವದಿಸಲಿದ್ದಾರೆ
ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು, ವಿಜಯಪುರದಿಂದ ನವಂಬರ್ 3ರಂದು ಸಂಜೆ ಕಲಬುರಗಿ ಜೇವರ್ಗಿ ರಸ್ತೆಯಲ್ಲಿರುವ ರಾಮಮಂದಿರಕ್ಕೆ ಆಗಮಿಸಲಿದ್ದು ಸಂಜೆ 6 ಗಂಟೆಯ ನಂತರ ಭಕ್ತರು ಭೇಟಿಯಾಗಬಹುದು.
ಕಲಬುರಗಿಯ ವಿದ್ಯಾನಗರದ ಶ್ರೀಕೃಷ್ಣಗುಡಿಯಲ್ಲಿ ನವೆಂಬರ್ 4 ರಂದು ಸಾಯಂಕಾಲ 4.30 ರಿಂದ ಭಕ್ತರಿಗೆ ದರ್ಶನ ಹಾಗೂ ಮಂತ್ರಾಕ್ಷತೆ ಆಶೀರ್ವಾದ ನೀಡಲಿದ್ದಾರೆ. ಪೂಜ್ಯರ ಪಾದ ಪೂಜೆ ಸಲ್ಲಿಸ ಲಿಚ್ಚಿಸುವವರು ಕಿಶೋರ್ ದೇಶಪಾಂಡೆ (ಮೊಬೈಲ್ 944 9 7 3 1 7 2 8) ಕೊತ್ತೂರು ನಿಖಿಲ್ ಆಚಾರ್ (ಮೊಬೈಲ್ 80 8 8 2 4 0 8 4 5 ) ಇವರನ್ನು ಸಂಪರ್ಕಿಸಬಹುದು ಎಂದು ಕೃಷ್ಣ ಗುಡಿಯ ಅಧ್ಯಕ್ಷರಾದ ರಂಗನಾಥ ದೇಸಾಯಿ ಮತ್ತು ಕಾರ್ಯದರ್ಶಿಗಳಾದ ಕಿಶೋರ್ ದೇಶಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

