ಉಡಿ ತುಂಬುವ ಕಾರ್ಯ ಸ್ತ್ರೀ ಶಕ್ತಿ ಪೂಜೆ ಸಂಕೇತ....... - ಡಾ. ಶಾಂತ ಸೋಮನಾಥ ಶಿವಾಚಾರ್ಯ
ಉಡಿ ತುಂಬುವ ಕಾರ್ಯ ಸ್ತ್ರೀ ಶಕ್ತಿ ಪೂಜೆ ಸಂಕೇತ.......
- ಡಾ. ಶಾಂತ ಸೋಮನಾಥ ಶಿವಾಚಾರ್ಯ
ಉಡಿ ತುಂಬುವುದು ಕೇವಲ ಆಚರಣೆಯಲ್ಲ ಹೆಣ್ಣಿನ ಶಕ್ತಿ, ತ್ಯಾಗ ಮತ್ತು ಮಮತೆಯನ್ನು ಗೌರವಿಸುವ ಸಂಸ್ಕೃತಿ ಪ್ರತಿಬಿಂಬ ಹೆಣ್ಣನ್ನು ಲಕ್ಷ್ಮೀ, ಗೌರಿ, ಪಾರ್ವತಿ ಅಂಶವೆಂದು ಭಾವಿಸಿ ಪೂಜಿಸುವ ಹಿನ್ನೆಲೆಯಲ್ಲಿ ಅವರಿಗೆ ಉಡಿ ತುಂಬಿಸಿ ದೇವರ ಕೃಪೆಗೆ ಪಾತ್ರರಾಗುವ ಒಂದು ಧಾರ್ಮಿಕ ಸಂಸ್ಕೃತಿ ಮತ್ತು ಧಾರ್ಮಿಕ ಸೇವೆ ಮಾಡಿದವರಿಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು.
ದೇವಸ್ಥಾನದಲ್ಲಿ ಭಕ್ತರು ಹರಕೆ ರೂಪದಲ್ಲಿ ಉಡಿ ತುಂಬಿದರೆ ಟೆಂಗಳಿ ಅಂಡಗಿ ಪ್ರತಿಷ್ಠಾನ ವತಿಯಿಂದ ಅಂಭಾ ಭವಾನಿ ದೇವಸ್ಥಾನದಲ್ಲಿ ಸೀಗಿ ಹುಣ್ಣಿಮೆ ಪ್ರಯುಕ್ತ ಅಂಡಗಿ ಮನೆತನದ ವತಿಯಿಂದ ಅಂಬಾ ಭವಾನಿಗೆ ಉಡಿ ತುಂಬುವ ಕಾರ್ಯಕ್ರಮದ ೪೯ನೇ ವಾರ್ಷಿಕೋತ್ಸವದ ನಿಮಿತ್ಯ ೯ ದಿನಗಳ ಕಾಲ ರಾತ್ರಿ ಭಜನೆ ಮಾಡುವ ಮೂಲಕ ಜಾಗರಣೆ ಮಾಡುತ್ತ ಕಾರ್ತಿಕ ಸೇವೆ ಮಾಡಿದ ಮಹನೀಯರಾದ ರೇವಶೆಟ್ಟಿ ಮಲಕೂಡ, ಸಂಗಮೇಶ ಬೋದನ, ಶರಣಕುಮಾರ ನೀಲಹಳ್ಳಿ, ಸಿದ್ದು ಜಂಬಗಿ, ಬಸವರಾಜ ಕಡ್ಲಿ, ಸಿದ್ದು ಸಾಲಳ್ಳಿ, ಕಾಶೀಬಾಯಿ ಜೋಗದ, ಮಹಾದೇವ ಮಠಪತಿ, ಇವರಿಗೆ “ಭವಾನಿ ಸೇವಾಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ನಂತರ ದೇವಸ್ಥಾನದಲ್ಲಿ ಕಾರ್ತಿಕ ಸೇವೆ ಮಾಡಿದ ಸದಸ್ಯರ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರ ಧರ್ಮಪತ್ನಿಯರಿಗೆ ಹೀಗೆ ಒಟ್ಟು ೩೫ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ಅಂಡಗಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ವೀರಭದ್ರಯ್ಯ ಸಾಲಿಮಠ ಪ್ರಾಸ್ತಾವಿಕ ಮಾತನಾಡಿದರು.
ಬಾಹ್ಯಕಾಶ ವಿಜ್ಞಾನಿ ಬಿ.ಎ. ಪಾಟೀಲ ಮಹಾಗಾಂವ ಪ್ರಶಸ್ತಿ ಪ್ರದಾನ ಮಾಡಿದರು. ರೇಖಾ ಅಂಡಗಿ ಪ್ರಾರ್ಥಿಸಿದರು, ವಿನೋದ ಜನೇವರಿ ಸ್ವಾಗತಿಸಿದರು. ದೇವಸ್ಥಾನದ ಅಧ್ಯಕ್ಷ ಧನಂಜಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದರು. ಅಮೃತರಾವ ಅಣ್ಣೋರು ಕವಿಗಳು ತತ್ವಪದ ಹಾಡಿ ಜನರ ಮನಸೆಳೆದರು ಎಂದು ಅಂಡಗಿ ಪ್ರತಿಷ್ಠಾನ ಟೆಂಗಳಿ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಶ್ವನಾಥ ಬಾಳದೆ, ಚಂದ್ರಶೇಖರ ಎಲೆರಿ, ಮಡಿವಾಳಯ್ಯ ಸಾಲಿಮಠ, ಬೀರಣ್ಣ ಪೂಜಾರಿ, ವೀರಭದ್ರಪ್ಪ ಚೇಂಗಟಿ, ವಿಜಯಕುಮಾರ ತುಪ್ಪದ, ಬಸವರಾಜ ಘಂಟಿ, ನಾಗರಾಜ ಮಹಾಗಾಂವ, ಮನೋಹರ ವಿಶ್ವಕರ್ಮ, ವಿಶ್ವನಾಥ ಹಿಲ್ಲಾ, ಬಸವರಾಜ ಹಿಲ್ಲಾ, ಗುರುರಾಜ ಹಡಪದ, ರೇವಶೆಟ್ಟಿ ತುಪ್ಪದ, ರಾಜು ಪಟೇದ, ಬಸವರಾಜ ಕೋಳಕೂರ ವಿಶ್ವನಾಥ ಕುದರಿಕಾರ ಹಾಗೂ ಇತರರು ಉಪಸ್ಥಿತರಿದ್ದರು.

