ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಜನ್ಮದಿನದ ನಿಮಿತ್ತ ನ.1ರಂದು ಉಚಿತ ನೇತ್ರ ತಪಾಸಣಾ ಶಿಬಿರ
ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಜನ್ಮದಿನದ ನಿಮಿತ್ತ ನ.1ರಂದು ಉಚಿತ ನೇತ್ರ ತಪಾಸಣಾ ಶಿಬಿರ
ಕಲಬುರಗಿ: ಪೂಜ್ಯ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ಪ್ರಯುಕ್ತ ನವೆಂಬರ್ 1ರಂದು ನಗರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಅನುಗ್ರಹ ಕಣ್ಣಿನ ಆಸ್ಪತ್ರೆ (ಭೋರುಕಾ ನೇತ್ರಾಲಯ), ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಫ್ಯಾಮಿಲಿ ಟ್ರಸ್ಟ್, ಶರಣಬಸವೇಶ್ವರ ಸಂಸ್ಥಾನ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.
ಡಾ. ಪ್ರಭುಗೌಡ ಬಿ.ಎಲ್. ಮತ್ತು ಡಾ. ಮಾಲಿನಿ ಪ್ರಭುಗೌಡ ಅವರ ನೇತೃತ್ವದ ಅನುಗ್ರಹ ಕಣ್ಣಿನ ಆಸ್ಪತ್ರೆಯ ವತಿಯಿಂದ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ.
ನಗರದ ಎರಡು ಸ್ಥಳಗಳಲ್ಲಿ ಶಿಬಿರ ಆಯೋಜಿಸಲಾಗಿದೆ. ಕೊಟನೂರ (ಡಿ) ಪ್ರದೇಶದ ಕೆಸರಟಗಿ ರಸ್ತೆಯಲ್ಲಿ, ಆಕಾಶವಾಣಿಯ ಹಿಂಭಾಗ ಹಾಗೂ ಸಮಾಧಾನ ಮಠದ ಸಮೀಪದಲ್ಲಿರುವ ಅನುಗ್ರಹ ಕಣ್ಣಿನ ಆಸ್ಪತ್ರೆ (ಭೋರುಕಾ ನೇತ್ರಾಲಯ) ಮತ್ತು ಅಶೋಕ ನಗರ ಪೊಲೀಸ್ ಠಾಣೆಯ ಎದುರು, ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ಮಾಡಲಾಗುವುದು. ಕಣ್ಣಿನ ಪೊರೆ (ಕ್ಯಾಟರಾಕ್ಟ್) ಹಾಗೂ ಟೆರಿಜಿಯಂ ಶಸ್ತ್ರಚಿಕಿತ್ಸೆಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಅಲ್ಲದೆ, ನೇತ್ರ ತಜ್ಞರಿಂದ ಕಣ್ಣಿನ ಆರೋಗ್ಯದ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುವುದು.
ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ. ಪ್ರಭುಗೌಡ ಬಿ.ಎಲ್. ಮತ್ತು ಡಾ. ಮಾಲಿನಿ ಪ್ರಭುಗೌಡ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8147100600 ಸಂಪರ್ಕಿಸಬಹುದು.

