ಮನೆ,ಅಂಗಡಿ ಮಳಿಗೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಮನವಿ

ಮನೆ,ಅಂಗಡಿ ಮಳಿಗೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಮನವಿ

ಮನೆ,ಅಂಗಡಿ ಮಳಿಗೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಮನವಿ

ಕಲಬುರಗಿ: ನವೆಂಬರ್ ಒಂದನೇ ತಾರೀಖಿನಂದು ಜಿಲ್ಲೆಯ ಜನತೆ ತಮ್ಮ ಮನೆ ಹಾಗೂ ಅಂಗಡಿ ಮಳಿಗೆಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸುವಂತೆ ಕರವೇ(ಶಿವರಾಮೇಗೌಡ ಬಣದ) ಗೌರವಾಧ್ಯಕ್ಷ ರುದ್ರಪ್ಪ ಎಸ್ ವಾಲೀಕಾರ(ರವಿ ವಾಲಿ) ಅವರು ಮನವಿ ಮಾಡಿದ್ದಾರೆ. 

          ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು,ನಮ್ಮ ರಾಜ್ಯದ ಹರಿದು ಹಂಚಿಹೋಗಿದ್ದ ಹಲವು ಭಾಗಗಳು ಮುಂಬೈ ಹೈದರಾಬಾದ್ ಮದ್ರಾಸ್ ರಾಜ್ಯಗಳಲ್ಲಿ ಸೇರ್ಪಡೆಗೊಂಡಿದ್ದವು, ಚದುರಿ ಹೋಗಿದ್ದ ಕನ್ನಡ ಮಾತನಾಡುವ ಭಾಷೆಗಳ ಪ್ರಾಂತ್ಯವನ್ನು ಒಂದುಗೂಡಿಸಿ ಅದಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣವನ್ನು 1956 ನವೆಂಬರ್ ಒಂದರಂದು ಮಾಡಿ ಮೈಸೂರು ರಾಜ್ಯ ಎಂದು ಗುರುತಿಸಿಕೊಂಡಿದ್ದು ನಮಗೆಲ್ಲಾ ತಿಳಿದಿರುವ ವಿಚಾರವಾಗಿದೆ.ಈ ಬಾರಿ ರಾಜ್ಯ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ವನ್ನು ನಡೆಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಅಂಗವಾಗಿ ರಾಜ್ಯದ ಪ್ರತಿ ಮನೆಯ ಮೇಲೆ ಕನ್ನಡ ಧ್ವಜಗಳನ್ನು ಹಾರಿಸುವಂತೆ ಮನವಿ ಮಾಡಿಕೊಂಡರು.    

         ನಮ್ಮ ನಾಡು ನುಡಿ ಜಲ ಇತ್ಯಾದಿ ವಿಷಯಗಳ ಬಗ್ಗೆ ಗಮನ ಹರಿಸಿ ತಮ್ಮ ನಾಡದು ಸಂರಕ್ಷಿಸಬೇಕಾಗುತ್ತದೆ. ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಆದ್ದರಿಂದ, ಸಮಸ್ತ ಕನ್ನಡಿಗರು ನಾವೆಲ್ಲ ಒಟ್ಟಾಗಿ ನಮ್ಮ ಮನೆಯ ಮೇಲೆ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ನಮ್ಮ ನಾಡು, ಭಾಷೆಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಇಡೀ ಜಗತ್ತಿಗೇ ಸಾರೋಣ ಎಂದು ಅವರು ಮನವಿ ಮಾಡಿದ್ದಾರೆ.