ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳ ಸಭೆ ಹಿರಿಯರ ಸಲಹೆಯಂತೆ ಕಾಲ್ನಡಿಗೆ ಹೋರಾಟ ಕೈಬಿಟ್ಟು ಶಾಂತಿಯುತ ಚರ್ಚೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳ ಸಭೆ ಹಿರಿಯರ ಸಲಹೆಯಂತೆ ಕಾಲ್ನಡಿಗೆ ಹೋರಾಟ ಕೈಬಿಟ್ಟು ಶಾಂತಿಯುತ ಚರ್ಚೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳ ಸಭೆ

ಹಿರಿಯರ ಸಲಹೆಯಂತೆ ಕಾಲ್ನಡಿಗೆ ಹೋರಾಟ ಕೈಬಿಟ್ಟು ಶಾಂತಿಯುತ ಚರ್ಚೆ

ಜೇವರ್ಗಿ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜೇವರ್ಗಿ–ಯಡ್ರಾಮಿ ತಾಲೂಕುಗಳಿಗೆ ಅನ್ಯಾಯವಾಗುತ್ತಿದೆ ಹಾಗೂ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಜೇವರ್ಗಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಕೆ. ಬಿರಾದಾರ ಅವರ ನಡೆ ಖಂಡಿಸಿ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಹಿರಿಯರ ಸಲಹೆಯ ಮೇರೆಗೆ ಪ್ರತಿಭಟನೆಯನ್ನು ಕೈಬಿಟ್ಟು ಪ್ರವಾಸಿ ಮಂದಿರದಲ್ಲಿಯೇ ಶಾಂತಿಯುತವಾಗಿ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಜೇವರ್ಗಿ–ಯಡ್ರಾಮಿ ತಾಲೂಕುಗಳ ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಕೆ. ಬಿರಾದಾರ ಅವರು ಜೇವರ್ಗಿ–ಯಡ್ರಾಮಿ ತಾಲೂಕುಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಸ್ಥಳೀಯ ಸಾಹಿತಿಗಳನ್ನು ಕಡೆಗಣಿಸಿ ಬೇರೆ ಜಿಲ್ಲೆಯ ಸಾಹಿತಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸರಿಯಲ್ಲ. ಅಲ್ಲದೆ, ತಮ್ಮದೇ ನಿರ್ಧಾರವೇ ಅಂತಿಮ ಎಂಬಂತೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಶ್ನಿಸುವವರಿಗೆ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವುದು ಖಂಡನೀಯ. ಕನ್ನಡ ನಾಡು, ನುಡಿ ಹಾಗೂ ಭಾಷೆಯ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಹೋರಾಟಗಾರರಿಗೆ ಇಂತಹ ವರ್ತನೆ ತೋರುವುದು ಎಷ್ಟು ಸರಿ ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು.

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇತೃತ್ವದಲ್ಲಿ ಅಧ್ಯಕ್ಷ ಎಸ್.ಕೆ. ಬಿರಾದಾರ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಲಾಯಿತು. ಈ ವೇಳೆ ಬಿರಾದಾರ ಅವರು ಕ್ಷಮೆ ಕೋರಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಮುಂದಿನ ದಿನಗಳಲ್ಲಿ ಅವರ ನಡೆ ಹೇಗಿರಲಿದೆ ಎಂಬುದನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೋರಾಟಗಾರರು ತಿಳಿಸಿದರು.

ಐತಿಹಾಸಿಕ ಸಭೆಗೆ ಸಹಕಾರ ನೀಡಿದ ಸ್ವಾಭಿಮಾನಿ ಕನ್ನಡಪರ ಹೋರಾಟಗಾರರು ಹಾಗೂ ಜೇವರ್ಗಿ–ಯಡ್ರಾಮಿ ವಿವಿಧ ಸಂಘಟನೆಗಳ ಮುಖಂಡರಿಗೆ ಪತ್ರಿಕಾ ಹೇಳಿಕೆ ಮೂಲಕ ಬಸವರಾಜ ಬಿ. ಬಾಗೇವಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಚೆನ್ನಮಲ್ಲಯ್ಯ ಹಿರೇಮಠ, ಗೌರವ ಕಾರ್ಯದರ್ಶಿಗಳಾದ ಕಲ್ಯಾಣರಾವ ಸಂಗಾವಿ, ಶ್ರೀಹರಿ ಕರಕಿಹಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ಜೇವರ್ಗಿ ಗೌರವ ಅಧ್ಯಕ್ಷ ಶಂಕರಗೌಡ ಹಾಲಗಡ್ಲಾ, ಕಾಶಿನಾಥ ಮಂದೇವಾಲ, ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ಅಧ್ಯಕ್ಷ ಬಸವರಾಜ ಬಿ. ಬಾಗೇವಾಡಿ, ನಮ್ಮ ಕಲ್ಯಾಣ ಕರ್ನಾಟಕ ಸೇನೆ ಕಲಬುರಗಿ ಸಂಸ್ಥಾಪಕ ಅಧ್ಯಕ್ಷ ಶಿವಲಿಂಗ ಹಳ್ಳಿ, ಜಯ ಕರ್ನಾಟಕ ಸಂಘಟನೆ ಜೇವರ್ಗಿ ಅಧ್ಯಕ್ಷ ಭೀಮಾಶಂಕರ ಬಿಲ್ಲಾಡ, ಕಾರ್ಯಾಧ್ಯಕ್ಷ ಈರಣ್ಣಗೌಡ ಗುಳ್ಯಾಳ, ರಾಜಶೇಖರ ಬಂಟನೂರ, ಕಲಬುರಗಿ ತಳವಾರ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಕಂಕಿ ನೆಲೋಗಿ, ಕಟ್ಟಡ ಕಾರ್ಮಿಕ ಸಂಘಟನೆ ಜೇವರ್ಗಿ ಅಧ್ಯಕ್ಷ ಕಾಂತಪ್ಪ, ಕಲ್ಯಾಣ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಿಕ್ರಂ ಪಿ. ದೊಡ್ಮನಿ, ನಮ್ಮ ಕರ್ನಾಟಕ ಸೇನೆ ಜೇವರ್ಗಿ ಅಧ್ಯಕ್ಷ ರವಿ ಪಾಟೀಲ, ಟಿಪ್ಪು ಸುಲ್ತಾನ್ ಕಮಿಟಿ ಜೇವರ್ಗಿ ಅಧ್ಯಕ್ಷ ಮೊಹಿದ್ದೀನ್ ಇನಾಮದಾರ, ಭೋವಿ (ವಡ್ಡರ) ಸಮಾಜ ಯುವ ಘಟಕದ ಅಧ್ಯಕ್ಷ ಗುಂಡು ಡಿ. ಗುತ್ತೇದಾರ, ಹಂಸವಾಹಿನಿ ಸಂಗೀತ ಶಾಲೆ ಜೇವರ್ಗಿ ಅಧ್ಯಕ್ಷ ಸಿದ್ದಲಿಂಗ ಮಾಹೂರ, ತಳವಾರ ಸಮಾಜ ಜೇವರ್ಗಿ ಅಧ್ಯಕ್ಷ ಗಿರೀಶ್ ತುಂಬಗಿ, ಸಿದ್ದು ಗಜ, ಅಂಬೇಡ್ಕರ್ ಸೇನೆ ಜೇವರ್ಗಿ ಅಧ್ಯಕ್ಷ ಸಾಗರ ನೆಲೋಗಿ, ಜಯ ಕರ್ನಾಟಕ ಸಂಘಟನೆ ಕಲಬುರಗಿ ಜಿಲ್ಲಾ ವಕ್ತಾರ ಮಹಾಂತೇಶ ಹಾದಿಮನಿ, ಜಯ ಕರ್ನಾಟಕ ಸಂಘಟನೆ ಜೇವರ್ಗಿ ಉಪಾಧ್ಯಕ್ಷ ಮುನ ಕಳ್ಳಿ, ಕನ್ನಡಪರ ಹೋರಾಟಗಾರ ಮಕಾಶಿ ನಂದಿಹಳ್ಳಿ, ಜಯ ಕರ್ನಾಟಕ ಜನಪರ ವೇದಿಕೆ ಯಡ್ರಾಮಿ ಅಧ್ಯಕ್ಷ ಜಗದೀಶ ಮಡಿವಾಳಕರ, ಕನ್ನಡಪರ ಹೋರಾಟಗಾರರಾದ ರಾಜು ನಾಯಕ್, ಬಿ.ಎಚ್. ಮಾಲಿ ಪಾಟೀಲ, ಆದಿಜಾಂಭವ ಸಂಘಟನೆ ಜೇವರ್ಗಿ ಅಧ್ಯಕ್ಷ ಪರಶುರಾಮ ಮುದ್ದವಾಳ, ವೀರ ಕನ್ನಡಿಗರ ಸೇನೆ ಜೇವರ್ಗಿ ಅಧ್ಯಕ್ಷ ಶಿವಲಿಂಗ ರಾಸುಣಗಿ, ಸಿದ್ದು ಕೇರೂರ, ಭೀಮ್ ಆರ್ಮಿ ನಗರ ಘಟಕದ ಅಧ್ಯಕ್ಷ ಬಸವರಾಜ ಇಂಗಳಗಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.