ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಒತ್ತಾಯ
ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಒತ್ತಾಯ
ನಾಗರಾಜ್ ದಂಡಾವತಿ ವರದಿ ಶಹಾಬಾದ: ಕಳೆದ ವರ್ಷ ಅತಿವ್ರಷ್ಟಿಯಿಂದ ತಾಲ್ಲೂಕಿನ ಕಾಗಿಣಾ ಮತ್ತು ಭೀಮಾ ನದಿ ಪಾತ್ರದ ರೈತರ ಹೊಲಗಳು ಪ್ರವಾಹದಿಂದ ಮುಳಿಗಿ ಬೆಳೆ ಹಾನಿಯಾಗಿದೆ ಆದರೆ ರಾಜ್ಯ ಸರ್ಕಾರ ಬೆಳೆ ವಿಮೆ ನೀಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಶಹಾಬಾದ ಬಿಜೆಪಿ ಮಂಡಲದ ರೈತ ಮೋರ್ಚಾದ ವತಿಯಿಂದ ಗ್ರೇಡ್-2 ತಹಶೀಲ್ದಾರ ಗುರುರಾಜ ಸಂಗಾವಿ ಯವರಿಗೆ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಿದರು.
ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೊಳಕರ, ಸಿದ್ರಾಮ ಕುಸಾಳೆ, ಮಹದೇವ ಗೊಬ್ಬರ, ದೇವದಾಸ ಜಾಧವ, ರೈತ ಮೊರ್ಚಾ ಅಧ್ಯಕ್ಷ ತಿರುಮಲ ದೇವಕರ, ಮಹೇಶ ಯಲೇರಿ, ಗೊವಿಂದ ದೊತ್ರೆ, ಬಸವರಾಜ ಬಿರಾದಾರ, ಭೀಮಯ್ಯ ಗುತ್ತೆದಾರ, ನರಸಿಂಗ ಕಾಶಿ ಉಪಸ್ಥಿತರಿದ್ದರು.

