ದಕ್ಷಿಣ ವಲಯ ಅಂತರ ವಿವಿ ಪಂದ್ಯ: ಗುಲಬರ್ಗಾ ವಿವಿಯ ಖೋಖೋ ಪುರುಷ ತಂಡ ಭಾಗಿ

ದಕ್ಷಿಣ ವಲಯ ಅಂತರ ವಿವಿ ಪಂದ್ಯ:  ಗುಲಬರ್ಗಾ ವಿವಿಯ ಖೋಖೋ ಪುರುಷ ತಂಡ ಭಾಗಿ

ದಕ್ಷಿಣ ವಲಯ ಅಂತರ ವಿವಿ ಪಂದ್ಯ: 

ಗುಲಬರ್ಗಾ ವಿವಿಯ ಖೋಖೋ ಪುರುಷ ತಂಡ ಭಾಗಿ

ಕಲಬುರಗಿ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಾ. 26 ರಿಂದ 29, 2026 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋಖೋ (ಪುರುಷ) ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ತಂಡವು ಭಾಗವಹಿಸಲಿದೆ.   

ತಂಡದ ನಾಯಕ ಮಹೇಶ ಹಾಗೂ ತಂಡದ ಸದಸ್ಯರಾದ ಸಾಗರ್ ಹಾವನೂರ, ಭೂತಾಲಿ, ಮಂಜುನಾಥ, ಸೊಪನ್ನ, ನಾಗರಾಜ, ಭೀರಣ್ಣ ಹೊಸಮನಿ, ಸಂತೋಷ, ನವೀನ್, ರಾಘವೇಂದ್ರ ಮತ್ತು ಮಹದೇವಪ್ಪ ಭಾಗವಹಿಸಲಿದ್ದಾರೆ. ತಂಡದ ವ್ಯವಸ್ಥಾಪಕ/ತರಬೇತಿದಾರರಾಗಿ ಕಲಬುರಗಿಯ ಶ್ರೀ. ಬಿ. ಶ್ಯಾಮಸಂದರ ಸ್ಮಾರಕ ದೈಹಿಕ ಶಿಕ್ಷಣ ಮಹಾವಿದ್ಯಾಲಯದ (ಬಿ.ಪಿ.ಇಡಿ) ಸಹಾಯಕ ಪ್ರಾಧ್ಯಾಪಕ ಶ್ರೀ. ಅಮರೇಶ್ವರ ತೆರಳುವರು.    

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರ, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಪ್ರಾಂಶುಪಾಲ ಡಾ. ಎಸ್.ಹೆಚ್. ಜಂಗೆ, ಡಾ. ಚಂದ್ರಕಾAತ ಬಿರಾದಾರ, ಅರುಣ್ ಕುಮಾರ್ ಎಚ್ ಇವರು ತಂಡಕ್ಕೆ ಶುಭ ಆರೈಸಿದ್ದಾರೆ.   

ಗುವಿವಿ: ಕಾಮರ್ಸ್ ಅಲುಮ್ನಿ ಅಸೋಸಿಯೇಷನ್ ಉದ್ಘಾಟನಾ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಕಾಮರ್ಸ್ ಅಲುಮ್ನಿ ಅಸೋಸಿಯೇಷನ್ (ರಿ) ಉದ್ಘಾಟನಾ ಸಮಾರಂಭ ಮಾ.25 ರಂದು ಬೆಳಿಗ್ಗೆ 11:00 ಗಂಟೆಗೆ ವಾಣಿಜ್ಯ ಅಧ್ಯಯನ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.  

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಕಾರ್ಯಕ್ರಮ ಉದ್ಘಾಟಿಸುವರು. ವಾಣಿಜ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ರಾಜನಾಳ್ಕರ್ ಲಕ್ಷö್ಮಣ ಗೌರವ ಉಪಸ್ಥಿತಿ ವಹಿಸುವರು. ವಾಣಿಜ್ಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಹಾಗೂ ಕಾಮರ್ಸ್ ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷ ಪ್ರೊ. ಬಿ. ವಿಜಯ ಅಧ್ಯಕ್ಷತೆ ವಹಿಸುವರು. ಅಸೋಸಿಯೇಷನ್ ಖಜಾಂಚಿ ಡಾ. ಕೈಲಾಸಪತಿ, ಕಾರ್ಯದರ್ಶಿ ಡಾ. ಕರಿಗೂಳೇಶ್ವರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.