ಕಲಬುರಗಿ ಜಂಟಿ ಕೃಷಿ ನಿರ್ದೇಶಕರಿಂದ ಬೆಳೆ ಸಮೀಕ್ಷೆ ಬಳಿಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಿರ್ದೇಶಕ ಸಮದ್ ಪಟೇಲ್

ಕಲಬುರಗಿ  ಜಂಟಿ ಕೃಷಿ ನಿರ್ದೇಶಕರಿಂದ  ಬೆಳೆ ಸಮೀಕ್ಷೆ  ಬಳಿಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಿರ್ದೇಶಕ ಸಮದ್ ಪಟೇಲ್

ಕಲಬುರಗಿ ಜಂಟಿ ಕೃಷಿ ನಿರ್ದೇಶಕರಿಂದ ಬೆಳೆ ಸಮೀಕ್ಷೆ 

ಬಳಿಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಿರ್ದೇಶಕ ಸಮದ್ ಪಟೇಲ್ 

ಚಿಂಚೋಳಿ : ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ತಾಲ್ಲೂಕಿಗೆ ಭೇಟಿ ನೀಡಿ, ಬೆಳೆ ಸಮೀಕ್ಷೆ ನಡೆಸಿದರು.

ನೀಮಹೊಸಳ್ಳಿ ಗ್ರಾಮದಲ್ಲಿ ಬೆಳೆ ಸಮೀಕ್ಷೆ (Crop Survey) ಪ್ಲಾಟ್ ಹಾಗೂ ಹನಿ ನೀರಾವರಿ (Drip Irrigation) ಅಳವಡಿಸಿರುವ ಕಬ್ಬಿನ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದಲ್ಲದೆ ಚಿಂಚೋಳಿ ಪಟ್ಟಣದ ರೈತರ ವಿವಿಧ ಕೃಷಿ ಬೆಳೆಗಳನ್ನು ವೀಕ್ಷಿಸಿ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿದರು. ಸುಲೇಪೇಟ ರೈತ ಸಂಪರ್ಕ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ, ವೀಕ್ಷಿಸಿದರು.

ಬಳಿಕ ಚಿಂಚೋಳಿ ಸಹಾಯಕ ಕೃಷಿ ನಿರ್ದೇಶಕರ (ADA) ಕಛೇರಿಯಲ್ಲಿ ಅಧೀನದ ಎಲ್ಲಾ ಕೃಷಿ (AOS) ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ , ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ಕೃಷಿ ಅಧಿಕಾರಿ ಇಮ್ರಾನ್ ಅಲಿ ಹಾಗೂ ಅಭಿಲಾಷ್, ಬಿಟಿಎಂ ವೀರೇಶ್ ಅವರು ಉಪಸ್ಥಿತರಿದ್ದರು.