ಜನ್ಮದಿನವನ್ನು ಸಮಾಜಸೇವೆಯ ಮೂಲಕ ಆಚರಿಸಿದ ವಿಜಯಕುಮಾರ ಚವಾಣ್: ಶ್ರವಣನ್ಯೂನ್ಯತೆ ಮಕ್ಕಳಿಗೆ ನೋಟ್‌ಬುಕ್, ಪೆನ್ನು, ಬಟ್ಟೆ ವಿತರಣೆ
ಜನ್ಮದಿನವನ್ನು ಸಮಾಜಸೇವೆಯ ಮೂಲಕ ಆಚರಿಸಿದ ವಿಜಯಕುಮಾರ ಚವಾಣ್: ಶ್ರವಣನ್ಯೂನ್ಯತೆ ಮಕ್ಕಳಿಗೆ ನೋಟ್‌ಬುಕ್, ಪೆನ್ನು, ಬಟ್ಟೆ ವಿತರಣೆ
ಕಲಬುರಗಿ : ಜನ್ಮದಿನವನ್ನು ಸಂಭ್ರಮಕ್ಕಷ್ಟೇ ಸೀಮಿತಗೊಳಿಸದೆ ಸಮಾಜಮುಖಿ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ ಸಮಾಜ ಸೇವಕ ವಿಜಯಕುಮಾರ ಚವಾಣ್ ಅವರು ನಗರದ ಆಳಂದ ಕಾಲೋನಿಯಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವ್ಯಾಪ್ತಿಯ ಶ್ರವಣನ್ಯೂನ್ಯತೆ ಮಕ್ಕಳ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮಾದರಿಯಾದರು.
ವಿಜಯಕುಮಾರ್ ಚವಾಣ್ ಅವರ ಜನ್ಮದಿನದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ನು ಹಾಗೂ ಬಟ್ಟೆಗಳನ್ನು ವಿತರಿಸಲಾಯಿತು. ಇದೇ ವೇಳೆ ಅನ್ನದಾಸೋಹವೂ ಏರ್ಪಡಿಸಲಾಗಿದ್ದು, ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಯಿತು. ಸಮಾಜ ಸೇವೆಯ ಮೂಲಕ ಜನ್ಮದಿನ ಆಚರಿಸಿರುವ ಈ ಕಾರ್ಯಕ್ಕೆ ಶಾಲೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಮುಖದಲ್ಲಿ ಮೂಡಿದ ಸಂತಸ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ್ ಮಾಲಿ ಪಾಟೀಲ್, ರಾಜಕುಮಾರ್ ಎಸ್. ಪಾಟೀಲ್, ನಾಗೇಂದ್ರಪ್ಪ ಚಿಂಚೋಳಿ, ಶಿವಕುಮಾರ್ ಪದ್ಮಾಜಿ, ಪ್ರಭವ ಪಟ್ಟಣಕರ್, ಶ್ರೀಕಾಂತ್ ಒಂಟಿ, ರಾಜು ಪವರ್, ಸಂತೋಷ್ ಚೌಹಾಣ್, ಅರುಣ್ ಶಿರೋಳ್, ಜಗದೀಶ್ ದುದನಿ, ಚಂದ್ರಶೇಖರ್ ರೇವೂರ್, ಮಹೇಶ್ ದುದನಿ, ಶೇಖರ್ ದುದನಿ, ಟಿ.ಎಸ್. ಸ್ವಾಮಿ, ಮಾಂತೇಶ್ ಉಜಿನಿ, ದೀಪಕ್ ಚೌಹಾಣ್, ಶಿವಕುಮಾರ್ ರಾಜು ಎಂ., ವೀರು, ಲಕ್ಷ್ಮಿಕಾಂತ್ ಹಾಗೂ ಮಂಜು ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿ ವಿಜಯಕುಮಾರ್ ಚವಾಣ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ಗಣ್ಯರು ಮಾತನಾಡಿ, ಸಮಾಜದ ವಂಚಿತ ಮಕ್ಕಳೊಂದಿಗೆ ಜನ್ಮದಿನ ಆಚರಿಸಿ ಅಗತ್ಯ ವಸ್ತುಗಳನ್ನು ವಿತರಿಸಿರುವ ವಿಜಯಕುಮಾರ ಚವಾಣ್ ಅವರ ಸೇವಾಭಾವ ಶ್ಲಾಘನೀಯವಾಗಿದೆ. ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

