ಕಲಾ ಮಂಡಳದಲ್ಲಿ ಹಾಯಿಕು ಸಂಕಲನ ಲೋಕಾರ್ಪಣೆ, ಪ್ರಶಸ್ತಿ, ಹಾಯಿಕು ಕವಿಗೋಷ್ಠಿ - ೨೨ ರಂದು

ಕಲಾ ಮಂಡಳದಲ್ಲಿ ಹಾಯಿಕು ಸಂಕಲನ ಲೋಕಾರ್ಪಣೆ, ಪ್ರಶಸ್ತಿ, ಹಾಯಿಕು ಕವಿಗೋಷ್ಠಿ - ೨೨ ರಂದು

ಕಲಾ ಮಂಡಳದಲ್ಲಿ ಹಾಯಿಕು ಸಂಕಲನ ಲೋಕಾರ್ಪಣೆ, ಪ್ರಶಸ್ತಿ, ಹಾಯಿಕು ಕವಿಗೋಷ್ಠಿ - ೨೨ ರಂದು

ಕಲಬುರಗಿ: ಹಿರಿಯ ಸಾಹಿತಿ,ಕವಿ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಅವರ ಕೆಂಪು ಗುಲಾಬಿಯ ಹಾಯಿಕು ಕವನ ಸಂಕಲನ ಲೋಕಾರ್ಪಣೆ, ಹಾಯಿಕು ಸಿರಿ ಪ್ರಶಸ್ತಿ ಪ್ರದಾನ,ಮತ್ತು ಕವಿಗೋಷ್ಠಿ ಸಮಾರಂಭವು ಅನ್ನಪೂರ್ಣ ಕ್ರಾಸ್ ದ ಕಲಾ ಮಂಡಳದಲ್ಲಿ ೨೨-೦೩-೨೦೨೬ ರಂದು ಸಂಜೆ ೫ ಗಂಟೆಗೆ ಜರುಗಲಿದೆ.

 ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಿರಿಯ ಸಾಹಿತಿ ಡಾ.ಸಿದ್ಧರಾಮ ಹೊನ್ಕಲ್ ಉದ್ಘಾಟಿಸುವರು.ಕೃತಿಯ ನ್ನು ಪ್ರಖ್ಯಾತ ಕವಿ,ಅನುವಾದಕ ಪ್ರೊ.ವಿಕ್ರಮ ವಿಸಾಜಿ ಲೋಕಾರ್ಪಣೆ ಮಾಡುವರು,ಕೃತಿ ಕುರಿತು ಖ್ಯಾತ ಹೊಸ ಪ್ರಕಾರದ ಕವಿ ಮಹಿಪಾಲರೆಡ್ಡಿ ಮುನ್ನೂರು ಮಾತನಾಡುವರು,ಪ್ರಶಸ್ತಿ ಪ್ರದಾನವನ್ನು ಪ್ರಸಿದ್ಧ ಪ್ರಕಾಶಕ ಡಾ.ಬಸವರಾಜ ಕೊನೇಕ ಮಾಡುವರು,ಅತಿಥಿಗಳಾಗಿ ಸಾಹಿತಿ ಬಾಬುರಾವ್ ಜಮಾದಾರ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಹನುಮಂತರಾವ್ ದೊಡ್ಡಮನಿ ವಹಿಸುವರು.

ಹಾಯಿಕು ಸಿರಿ ಪ್ರಶಸ್ತಿ ಪುರಸ್ಕೃತರು: ಶ್ರೀ ಪ್ರಭಾಕರ ಜೋಶಿ,ಡಾ.ವಿಜಯಕುಮಾರ ಪರುತೆ,ಡಾ.ಜಯದೇವಿ ಗಾಯಕವಾಡ,ಡಾ.ಮಲ್ಲಿನಾಥ ತಳವಾರ,ಆರತಿ ಕಡಗಂಚಿ

ಶೀವಲೀಲಾ ಡೆಂಗಿ,ಉತ್ತಮ ದೊಡ್ಮನಿ

ಹಾಯಿಕು ಕಾವ್ಯವಾಚಿಸುವ ಕವಿಗಳು: ಡಾ.ಶೀಲಾದೇವಿ ಬಿರಾದಾರ,ಸಿದ್ಧರಾಮ ಸರಸಂಬಿ,ಭೀಮಸೇನ ಗಾಯಕವಾಡ,ಡಾ.ಸಿದ್ಧಪ್ಪ ಹೊಸಮನಿ, ಡಾ.ಕಪಿಲ್ ದೇವ ಚಕ್ರವರ್ತಿ (ಕಚ),ಡಾ.ಬಿ.ಆರ್. ಅಣ್ಣಾಸಾಗರ,ಲಲಿತಾ ಪಾಟೀಲ,ವೀರಭದ್ರಪ್ಪ ಗುರುಮಿಟಕಲ್, ಹಣಮಂತರಾಯ ಸಲಗರ,ರೇಣುಕಾಚಾರ್ಯ ಸ್ಥಾವರಮಠ ಸ್ವರಚಿತ ಹಾಯಿಕು ವಾಚಿಸುವರು.ಪ್ರಾರ್ಥನೆ ಯನ್ನು ಕಿರಣ ಪಾಟೀಲ ನೆರವೇರಿಸುವರು.ಸ್ವಾಗತವನ್ನು ಸಾಹಿತಿ ಡಾ.ಚಿ.ಸಿ.ನಿಂಗಣ್ಣ ,ಪ್ರಾಸ್ತಾವಿಕ ನುಡಿಯನ್ನು ಕಲಬುರಗಿ ಪ್ರತಿಷ್ಠಾನ ಅಧ್ಯಕ್ಷ ಬಿ.ಎಚ್.ನಿರಗುಡಿ ಆಡುವ ರು.ಡಾ.ರಾಜಕುಮಾರ ಮಾಳಗೆ ನಿರೂಪಿಸುವರು,ಡಾ.ನಾಗಪ್ಪ ಗೋಗಿ ವಂದಿಸುವರು.