ಕನಕದಾಸರ ಕೀರ್ತನೆಗಳು ಹೊರರಾಜ್ಯಕ್ಕೂ ವಿಸ್ತಾರಗೊಂಡಿವೆ - ಡಾ. ಬಸವರಾಜ ಹಿರೇಮಠ
ಕನಕದಾಸರ ಕೀರ್ತನೆಗಳು ಹೊರರಾಜ್ಯಕ್ಕೂ ವಿಸ್ತಾರಗೊಂಡಿವೆ - ಡಾ. ಬಸವರಾಜ ಹಿರೇಮಠ
ಶಹಾಬಾದ : ಮಹಿಳೆಯರಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ನೀಡಿದ್ದು,ಕನ್ನಡದ ಸಂತ ಕವಿ ಕನಕದಾಸರು,ಅವರ ಕೀರ್ತನೆಗಳು ಭಕ್ತಿ ಪಂಥ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ ಅದು ಹೊರ ರಾಜ್ಯಗಳಿಗೂ ವಿಸ್ತಾರಗೊಂಡಿವೆ ಎಂದು ನುಡಿದರು.ಎಸ್.ಎಸ್. ಮರಗೋಳ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ ಹಿರೇಮಠ ಹೇಳಿದರು.
ನಗರದ ಎಸ್.ಎಸ್.ಮರಗೋಳ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ,ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಕನ್ನಡದ ಸಂತ ಕವಿ,ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಕಾರ್ಯಕ್ರಮದ ಗಣ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು ಮನುಷ್ಯತ್ವವೇ ಶ್ರೇಷ್ಠ ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕು ಬೇಕೆಂದು ಪ್ರತಿಪಾದಿಸಿದವರು,ಕನಕದಾಸರ ಕೀರ್ತನೆಗಳು ಜೀವನದಲ್ಲಿ ಒಳ್ಳೆಯ ನಡತೆ ಹೇಗಿರಬೇಕು ಎಂಬುದನ್ನು ತಿಳಿಪಡಿಸುವುದರ ಜೊತೆಗೆ ಬದುಕಿಗೆ ನೈತಿಕತೆ ಮೌಲ್ಯಗಳು ಕಲಿಸಿಕೊಡುತ್ತವೆ ಎಂದು ನುಡಿದರು.
ಪತ್ರಕರ್ತ ಲೋಹಿತ್ ಕಟ್ಟಿ ಮಾತನಾಡಿದ ಅವರು ಪ್ರಸ್ತುತ ದಿನಮಾನಗಳಲ್ಲಿ ಜಾತಿವಾದ, ಧರ್ಮದ ಹೆಸರಿನಲ್ಲಿ ಸಂಘರ್ಷಗಳು ನಿರಂತರವಾಗಿ ನಡೆಯುತ್ತಲೆ ಇವೆ,ಮನುಷ್ಯ ಜನ್ಮಕ್ಕೆ ಯಾವುದೇ ಜಾತಿಯ ಭೇದವಿಲ್ಲ,ಎಲ್ಲರ ರಕ್ತವು ಒಂದೇ ಎಂಬುದು ಕನಕದಾಸರು ಅಂದೆ ಸಾರಿ ಸಾರಿ ಹೇಳಿದ್ದರು,ಇಂದಿನ ಜಾತಿರಹಿತ ಸಮಾಜದ ನಿರ್ಮಾಣಕ್ಕೆ ಕನಕದಾಸರ ಈ ಕೀರ್ತನೆಗಳು ದಾರಿ ದೀಪವಾಗಿವೆ ಎಂದು ಹೇಳಿದರು
ಸಮಾಜದಲ್ಲಿ ಸಮಾನತೆ,ಮಾನವೀಯತೆ ಮತ್ತು ಭಕ್ತಿಯ ಸಂದೇಶವನ್ನು ಸಾರುವುದರ ಜೊತೆಗೆ ಜಾತಿಭೇದವನ್ನು ವಿರೋಧಿಸುವ ಕನಕದಾಸರ ಕೀರ್ತನೆಗಳು ಹಿಡಿದ ಕೈಗನ್ನಡಿಯಾಗಿವೆ ಎಂದು ಸೇಡಂ ನರ್ಮದಾದೇವಿ ಗಿಲಡಾ ಕಾಲೇಜಿನ ಉಪ ಪ್ರಾಂಶುಪಾಲ ಆರತಿ ಕಡಗಂಚಿ ಉಪನ್ಯಾಸ ನೀಡುತ್ತಾ ಮಾತನಾಡಿದರು .
ಈ ಕಾರ್ಯಕ್ರಮವನ್ನು ನಾಗರಾಜ್ ದೇವತ್ಕಲ್ ಉದ್ಘಾಟಿಸಿದರು, ಜೀವಶಾಸ್ತ್ರ ಉಪನ್ಯಾಸಕ ಡಾ. ವೆಂಕಟರಾಜಪ್ಪ,ಕುರುಬ ಸಮಾಜದ ಹಿರಿಯ ಮುಖಂಡರಾದ ನಿಂಗಣ್ಣ ಪೂಜಾರಿ,ಸಾಹಿತಿ,ಲೇಖಕ, ಮರಿಲಿಂಗ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು,ಈ ಕಾರ್ಯಕ್ರಮದಲ್ಲಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಹಾಗೂ ಕನಕ ದರ್ಶನ ಕಾರ್ಯಕ್ರಮದ ಕಲ್ಯಾಣ ಕರ್ನಾಟಕ ಸಂಚಾಲಕರಾದ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳಾಡಿದರು, ಶಿವಕುಮಾರ ಕುಸಾಳೆ ಸ್ವಾಗತಿಸಿದರು,ಶಿವಶಂಕರ ಹಿರೇಮಠ ನಿರೂಪಿಸಿ ವಂದಿಸಿದರು,

