ಧಾರ್ಮಿಕ ಸೇವಾಕರ್ತರಿಗೆ ಅ. 26ರಂದು “ಭವಾನಿ ಸೇವಾಶ್ರೀ” ಪ್ರಶಸ್ತಿ ಪ್ರದಾನ
ಧಾರ್ಮಿಕ ಸೇವಾಕರ್ತರಿಗೆ ಅ. 26ರಂದು “ಭವಾನಿ ಸೇವಾಶ್ರೀ” ಪ್ರಶಸ್ತಿ ಪ್ರದಾನ
ಟೆಂಗಳಿ ಅಂಬಾ ಭವಾನಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಕಲಬುರಗಿ: ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಸೀಗಿ ಹುಣ್ಣಿಮೆ ಪ್ರಯುಕ್ತ ಅಂಡಗಿ ಮನೆತನದ ವತಿಯಿಂದ ಆಯೋಜಿಸಲಾಗುವ ಅಂಬಾ ಭವಾನಿಗೆ ಉಡಿ ತುಂಬುವ 49ನೇ ವಾರ್ಷಿಕೋತ್ಸವದ ಅಂಗವಾಗಿ ಅಕ್ಟೋಬರ್ 26ರಂದು “ಭವಾನಿ ಸೇವಾಶ್ರೀ” ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.
ಸಮಾಜ ಸೇವಕರಾದ ಶ್ರೀಮತಿ ಸಂತೋಷಿರಾಣಿ ರಾಜಕುಮಾರ ಪಾಟೀಲ ತೇಲ್ಕೂರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಾಹ್ಯಾಕಾಶ ವಿಜ್ಞಾನಿ ಬಿ.ಎ. ಪಾಟೀಲ ಮಹಾಗಾಂವ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಂತೇಶ್ವರ ಮಠದ ಪರಮಪೂಜ್ಯ ಡಾ. ಶಾಂತ ಸೋಮನಾಥ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಅಂಬಾ ಭವಾನಿ ದೇವಸ್ಥಾನದ ಅಧ್ಯಕ್ಷ ಧನಂಜಯ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ವೀರೇಂದ್ರ ವಾಲಿ ಹಾಗೂ ಸಿದ್ರಾಮಪ್ಪ ಅಂಡಗಿ ಉಪಸ್ಥಿತರಿರುವರು.
ಎಂಟು ಜನರಿಗೆ “ಭವಾನಿ ಸೇವಾಶ್ರೀ” ಪ್ರಶಸ್ತಿ
ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರೇವಶೆಟ್ಟಿ ಮಲಕೂಡ, ಸಂಗಮೇಶ ಬೋದನ, ಶರಣಕುಮಾರ ನೀಲಹಳ್ಳಿ, ಸಿದ್ದು ಜಂಬಗಿ, ಬಸವರಾಜ ಕಡ್ಲಿ, ಸಿದ್ದು ಸಾಲಳ್ಳಿ, ಕಾಶಿಬಾಯಿ ಜೋಗದ ಹಾಗೂ ಮಹಾದೇವ ಮಠಪತಿ ಅವರಿಗೆ “ಭವಾನಿ ಸೇವಾಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ನವರಾತ್ರಿ ನಿಮಿತ್ತ ಒಂಬತ್ತು ದಿನಗಳ ಕಾಲ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಕಾರ್ತಿಕ ಸೇವೆ ಸಲ್ಲಿಸಿದ ಮಹಿಳೆಯರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ಧರ್ಮಪತ್ನಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಅಂಡಗಿ ಪ್ರತಿಷ್ಠಾನ ಟೆಂಗಳಿ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

