ನಗರದಲ್ಲಿ ಇಂದು ಕರೋಕೆ ಗೀತ ಗಾಯನ ಕಾರ್ಯಕ್ರಮ

ನಗರದಲ್ಲಿ ಇಂದು ಕರೋಕೆ ಗೀತ ಗಾಯನ ಕಾರ್ಯಕ್ರಮ

ನಗರದಲ್ಲಿ ಇಂದು ಕರೋಕೆ ಗೀತ ಗಾಯನ ಕಾರ್ಯಕ್ರಮ

ಕಲಬುರಗಿ: ‘ಸಂಗೀತವೇ ಜೀವನ, ಗಾನವೇ ಆನಂದ’ ಎಂಬ ಧ್ಯೇಯದೊಂದಿಗೆ ಅಕ್ಟೋಬರ್ 25ರಂದು ನಗರದ ಕನ್ನಡ ಭವನದಲ್ಲಿ ಕರೋಕೆ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಭಾನುವಾರ ಸಂಜೆ 5ರಿಂದ ರಾತ್ರಿ 10.30ರವರೆಗೆ ನಂದಿನಿ ಸ್ವಾಮಿ ಮ್ಯೂಸಿಕಲ್ ಗ್ರೂಪ್ ಹಾಗೂ ನಂದಿನಿ ಸ್ವಾಮಿ ಕರೋಕೆ ಸ್ಟುಡಿಯೊ ವತಿಯಿಂದ ಕಾರ್ಯಕ್ರಮ ನಡೆಯಲಿದೆ.

ಆಂದೋಲದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ನೀಲಕಂಠ ಮುಲಗೆ, ಕಾಂಗ್ರೆಸ್ ಮುಖಂಡ ಖಲೀಲ್ ಖಾನ್ ಸಾಹೇಬ್, ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಸಾರ, ಸಿವಿಲ್ ಎಂಜಿನಿಯರ್ ಅನಿಲಕುಮಾರ ಎಸ್. ಗಣಗಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ, ಹಿರಿಯ ನ್ಯಾಯವಾದಿ ವಿನೋದಕುಮಾರ ಜನವೇರಿ, ಬಿಜೆಪಿ ಮುಖಂಡ ರೇವಣಸಿದ್ಧಪ್ಪ ಭೂಸನೂರ ಹಾಗೂ ಬೆಂಗಳೂರಿನ ಕೆಪಿಸಿಸಿಐ ಸದಸ್ಯ ಇ.ಆರ್. ಮುರಳೀಧರ ಜಿ. ಕರಲಗಿಕರ್ ಪಾಲ್ಗೊಳ್ಳುವರು.

ಸಂಗೀತಾಸಕ್ತರಿಗೆ ಇಂಪಾದ ಗೀತೆಗಳನ್ನು ಆಲಿಸುವ ಅವಕಾಶ ಕಲ್ಪಿಸುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಹೈಕೋರ್ಟ್ ನ್ಯಾಯವಾದಿ ಜಯಾನಂದಯ್ಯ ಸ್ವಾಮಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9449689881, 9036556412 ಸಂಪರ್ಕಿಸಬಹುದು.