ಜಾನಪದ ಜೀವಂತಿಕೆಗೆ ಯುವಜನೋತ್ಸವಗಳು ಪೂರಕ:ಬಡಿಗೇರ

ಜಾನಪದ ಜೀವಂತಿಕೆಗೆ ಯುವಜನೋತ್ಸವಗಳು ಪೂರಕ:ಬಡಿಗೇರ

ಜಾನಪದ ಜೀವಂತಿಕೆಗೆ ಯುವಜನೋತ್ಸವಗಳು ಪೂರಕ:ಬಡಿಗೇರ 

ಕಲಬುರ್ಗಿ: ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ದೇಸಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆಡಳಿತ ಸರ್ಕಾರಗಳು ನಡೆಸುತ್ತಿರುವ ಯುವಜನೋತ್ಸವಗಳು ಜಾನಪದ ಸಂಸ್ಕೃತಿಯ ಜೀವಂತಿಕೆಗೆ ಪೂರಕವಾಗಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಹೇಳಿದರು. ಕಲಬುರ್ಗಿ ನಗರದ ಶ್ರೀ ಶರಣಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ಕಲಬುರ್ಗಿ ಜಿಲ್ಲಾ ಪಂಚಾಯತ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಮೇರಾ ಯುವ ಭಾರತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕಲಬುರ್ಗಿ ಜಿಲ್ಲಾ ಮಟ್ಟದ ಯುವಜನೋತ್ಸವ- 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸುರೇಶ ನಂದಗಾವ ಅವರು, ಇಂದಿನ ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಮತ್ತು ನಾಡು ನುಡಿ ರಕ್ಷಣೆಗಾಗಿ ಮುಂದೆ ಬರಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನುಶ್ರೀ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರ ದಶರಥ ಮೇತ್ರೆ ಉದ್ಘಾಟಿಸಿದರು.

 ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತ ಅಷ್ಟಗಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಪಿ ಆರ್ ಪಾಂಡು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸುಭಾಷ್ ವಗ್ಗನ್ಕರ, ಬಸವರಾಜ್ ತೋಟದ ಹಾಗೂ ಇಲಾಖೆಯ ಅಧಿಕಾರಿಗಳಾದ ಸಂಜಯ ಬಾಣದ, ರಾಜಕುಮಾರ, ಕ್ಷೀರಸಾಗರ ಯೋಗೇಂದ್ರ ದೇಸಾಯಿ, ಪ್ರವೀಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಜಾನಪದ ಗೀತೆ ಜಾನಪದ ನೃತ್ಯ ಕವನ ರಚನೆ ಚಿತ್ರಕಲೆ ಮತ್ತು ನಾಟಕ ಸೇರಿದಂತೆ ಅನೇಕ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು. ಕಾರ್ಯಕ್ರಮವು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರದ ಶಿವಾನಂದ ಅಣಜಗಿ ಅವರು ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ರೇವಯ್ಯ ವಸ್ತ್ರದಮಠ, ಬಾಬುರಾವ ಕೋಬಾಳ, ಶಿವಶಂಕರ ಬಿರಾದಾರ, ಡಾ. ಮಹೇಶಕುಮಾರ ಬಡಿಗೇರ, ಕಲ್ಪನಾ ಗೋಲ್ಡ್ ಸ್ಮಿತ್, ಪ್ರಿಯಾ ಗಡಾಳೆ, ಶಾಂತಲಿಂಗಯ್ಯ ಮಠಪತಿ, ರಾಜು ಎಸ್ ಕೆ, ಸಮೀರ್ ಸೇರಿದಂತೆ ಅನೇಕರು ಸ್ಪರ್ಧೆಗಳ ನಿರ್ಣಾಯಕರಾಗಿ ಆಗಮಿಸಿದ್ದರು.

  ಯುವಜನೋತ್ಸವದಲ್ಲಿ ವಿಜೇತರಾದ ಯುವಕ ಹಾಗೂ ಯುವತಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದು ಇಲಾಖೆಯ ಪ್ರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.