ಸಂಸ್ಕಾರಯುತ ಸಮಾಜ ನಿರ್ಮಾಣವಾಗಲಿ
ಸಂಸ್ಕಾರಯುತ ಸಮಾಜ ನಿರ್ಮಾಣವಾಗಲಿ
ಕಲಬುರಗಿ: ನಾಡಹಬ್ಬವಾದ ದಸರಾ ನಾವೆಲ್ಲರೂ ಹೆಮ್ಮೆಯಿಂದ ಆಚರಿಸುವ ಹಾಗೂ ಕರ್ನಾಟಕದ ಗತವೈಭವ ಸಾರುವ ಹಬ್ಬವಾಗಿದ್ದು, ನಾಡಿನೆಲ್ಲೆಡೆ ಇದು ಬನ್ನಿ ಬಂಗಾರ ಒಬ್ಬರಿಂದೊಬ್ಬರು ಪರಸ್ಪರ ವಿನಿಮಯ ಮಾಡಿಕೊಂಡು ಸಂತೋಷ ಹಂಚಿಕೊಳ್ಳುವ ಸಂಭ್ರಮ ಇದಾಗಿದೆ, ಇದರಿಂದ ಮಕ್ಕಳು ಉತ್ತಮ ಸಂಸ್ಕಾರ ಕಲಿತುಕೊಳ್ಳುತ್ತ ಸಂಸ್ಕಾರಯುತ ಸಮಾಜ ನಿರ್ಮಾಣವಾಗಬೇಕು ಎಂದು ಗುರುಜೀ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಕಲ್ಯಾಣಕುಮಾರ ಶೀಲವಂತ ಮಾತನಾಡಿದರು.
18 ರಂದು ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ವಸತಿ ಗೃಹದಲ್ಲಿ ಶಿವಬಸವ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ದಸರಾ ಸಿರಿ ಸಂಭ್ರಮ ಹಾಗೂ ಆದಿಶಕ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಕೆ. ಗಿರಿಮಲ್ಲ ಮಾತನಾಡಿ,ಸ್ತ್ರೀಶಕ್ತಿ ಸಮಾಜಕ್ಕೆ ಪೂರಕವಾಗಿದೆ. ಒಂದು ಜೀವಕ್ಕೆ ಜೀವ ಕೊಡುವ ಹೆಣ್ಣು ಸಮಾಜದ ಕಣ್ಣಾಗಿದ್ದಾರೆ. ದುಷ್ಟ ಸಂಹಾರ ಶಿಷ್ಠ ರಕ್ಷಣೆಗೆ ಪ್ರತೀಕವಾದ ದಸರಾ ಉತ್ಸವದಲ್ಲಿ ಹೆಣ್ಣು ಮಕ್ಕಳು ತೋರುವ ಉತ್ಸಾಹ ಕಣ್ಮನ ಸೆಳೆಯುತ್ತದೆ, ಮದುವಿಗೆ ಜನ್ಮನೀಡುವ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ತಂದೆ-ತಾಯಿಯರ ಮೇಲಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ “ಆದಿಶಕ್ತಿ ಪ್ರಶಸ್ತಿ”ಯನ್ನು ಮಾತೋಶ್ರೀ ಸುಶಿಲಾಬಾಯಿ, ರೇಷ್ಮಾ ಹಾಗರಗುಂಡಗಿ, ಜ್ಯೋತಿ ಅಕ್ಷಯ್, ವಿಶಾಲಾಕ್ಷಿ ಮಾಯಣ್ಣನವರ, ರೇಣುಕಾ ಶ್ರೀಕಾಂತ, ಗುರುಬಾಯಿ ಸಂತೋಷ, ರುಕ್ಮೀಣಿ ಪೂಜಾರಿರವರು ಮುಡಿಗೇರಿಸಿಕೊಂಡರು.
ಕಾರ್ಯಕ್ರಮದ ಅತಿಥಿಗಳಾಗಿ ಕುಪೇಂದ್ರ ಬರಗಾಲಿ, ವಿಜಯಕುಮಾರ ಕೆಂಗಲ್,ಪುಷ್ಪಾ ಡೆಂಗಿ,ಶರಣಕುಮಾರ ಹಾಗರಗುಂಡಗಿ,ವಂದನಾ ದಂಡೋತಿ,ಶರಣು ಗಾಣಗಾಪೂರ, ಅಶೋಕ ಬಬಲಾದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ತೋಟ್ನಳ್ಳಿ ನೆರೆವೇರಿಸಿದರು, ಸ್ವಾಗತವನ್ನು ಸಂತೋಷ ಬಿರಾದಾರ ಹಾಗೂ ಜಯಶ್ರೀ ತೋಟ್ನಳ್ಳಿ ವಂದಿಸಿದರು.

