ಯುವ ಸಚಿವ ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನ ಒದಗಲು ಆನಂದ ಟೈಗರ್ ನೇತೃತ್ವದಲ್ಲಿ ಬುದ್ಧನಿಗೆ ವಿಶೇಷ ಪ್ರಾರ್ಥನೆ ಸಲ್ಲಿಕೆ

ಯುವ ಸಚಿವ ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನ ಒದಗಲು ಆನಂದ ಟೈಗರ್ ನೇತೃತ್ವದಲ್ಲಿ ಬುದ್ಧನಿಗೆ ವಿಶೇಷ ಪ್ರಾರ್ಥನೆ ಸಲ್ಲಿಕೆ

ಯುವ ಸಚಿವ ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನ ಒದಗಲು ಆನಂದ ಟೈಗರ್ ನೇತೃತ್ವದಲ್ಲಿ ಬುದ್ಧನಿಗೆ ವಿಶೇಷ ಪ್ರಾರ್ಥನೆ ಸಲ್ಲಿಕೆ 

ಚಿಂಚೋಳಿ : ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಒದಗಲಿ ಎಂದು ಚಿಂಚೋಳಿ ಪುರಸಭೆ ಮಾಜಿ ಅಧ್ಯಕ್ಷ ಆನಂದಕುಮಾರ ಟೈಗರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಚಿಂಚೋಳಿ ಬುದ್ಧ ವಿಹಾರದಲ್ಲಿ ಬುದ್ದನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

ಬಳಿಕ ಮಾತನಾಡಿದ ಆನಂದ ಟೈಗರ್, ಸಚಿವ ಪ್ರಿಯಾಂಕ್ ಖರ್ಗೆ ಅವರು ತಮದೇ ವರ್ಚಸಿನಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ನಡೆಸಿದ್ದಾರೆ. ಹೀಗಾಗಿ ಅವರು ಇಂದಿನ ಯುವ ಪೀಳಿಗೆಗೆ ಮಾದರಿ ನಾಯಕ ಎನ್ನಿಸಿದ್ದಾರೆ. ಸಚಿವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಿದೆಯಾದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಪಕ್ಷದ ಸಂಘಟನೆ ಗಟ್ಟಿಯಾಗಿ ಬಲವರ್ಧನೆಗೊಳಲಿದೆ. ಇನ್ನೂ ಸಚಿವರು ಎಲ್ಲಾ ಜಾತಿ ಜನಾಂಗದವರನ್ನು ಒಂದೇ ರೀತಿಯಲ್ಲಿ ಕಾಣುವ ಸಹೃದಯಿ ನಾಯಕ ಎನ್ನಿಸಿಕೊಂಡಿದ್ದಾರೆ. ಅಲ್ಲದೇ ಪ್ರಿಯಾಂಕ್ ಖರ್ಗೆ ಅವರು ತಮ್ಮನ್ನು ಭೇಟಿಯಾಗಲು ಬಂದ ಚಿಕ್ಕವರು, ದೊಡ್ಡವರು ಅನ್ನದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆ ಆಲಿಸುವುದಲ್ಲದೆ ಎಲ್ಲರನ್ನು ಅಪ್ಪಿಕೊಂಡು ವಿಶ್ವಾಸಕ್ಕೆ ತೆಗೆದುಕೊಂಡು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಮೈಗೂಡಿಸಿಕೊಂಡು ಪಾಲನೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರದ ಕಾಂಗ್ರೆಸ್ ಪಕ್ಷದ ವರಿಷ್ಠರು ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಿ ನೀಡಿ, ಕಲ್ಯಾಣ ಕರ್ನಾಟಕ ಭಾಗದ ಯುವ ಕಾರ್ಯಕರ್ತರು ಮತ್ತು ಪಕ್ಷದ ಕಾರ್ಯಕರ್ತ ಅಭಿಮಾನಿಗಳದ ಆಸೆಯಾಗಿದ್ದು, ವರಿಷ್ಠರು ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಒದಗಿಸಬೇಕೆಂದು ಪಕ್ಷದ ವರಿಷ್ಠರಲ್ಲಿ ಟೈಗರ್ ಮನವಿ ಮಾಡಿದ್ದಾರೆ.

ಹಿರಿಯ ಮುಖಂಡ ಬಾಬುರಾವ್ ಪಾಟೀಲ್, ಮಾಜಿ. ಜಿ. ಪಂ. ಅಧ್ಯಕ್ಷ ದೀಪನಾಗ ಪುಣ್ಯಶೆಟ್ಟಿ, ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ, ನಾಗೇಶ ಗುಣಾಜಿ, ಅಬ್ದುಲ್ ಬಾಶೀದ್, ಕಾಶಿನಾಥ ಶಿಂಧೆ, ಲಕ್ಷ್ಮಣ ಆವಂಟಿ,ರಾಮಶೆಟ್ಟಿ ಪವಾರ, ಡಾ. ತುಕಾರಾಮ ಪವಾರ, ಹಾಜಿ ಸಾಬ್, ವೀರಶೆಟ್ಟಿ ಪಾಟೀಲ್, ಆರ್ ಗಣಪತರಾವ, ವಿಶ್ವನಾಥ ಹೊಡೆಬಿರನಳ್ಳಿ,ಅನಿಲ ಜಮಾದಾರ್ ಹುಡದಳ್ಳಿ, ಲೋಕೇಶ ಐನೋಳಿ ಅವರು ಇದ್ದರು.