ಕನ್ನಡ ಉಳಿಸಲು ಕನ್ನಡಿಗರೇ ಹೋರಾಡುವ ಪರಿಸ್ಥಿತಿ..ಡಾ. ಪೂಜಾ ರಮೇಶ್ ಕಳವಳ.
ಕನ್ನಡ ಉಳಿಸಲು ಕನ್ನಡಿಗರೇ ಹೋರಾಡುವ ಪರಿಸ್ಥಿತಿ..ಡಾ. ಪೂಜಾ ರಮೇಶ್ ಕಳವಳ.
ಪಣಜಿ ಗೋವಾ:ಹೊರನಾಡಿನಲ್ಲಿ ಕನ್ನಡಿಗರು ಒಗ್ಗ ಟ್ಟಾಗಿ ಕನ್ನಡ ಭಾಷೆ ನೆಲ,ಜಲ, ಬಗ್ಗೆ ತುಂಬಾ ಪ್ರೀತಿ ಗೌರವದಿಂದ ಇದ್ದರೆ.ನಮ್ಮ ರಾಜ್ಯದಲ್ಲಿ ಕನ್ನಡ ಉಳಿವಿಗಾಗಿ ಕನ್ನಡಿಗರೇ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಾಜ ಸೇವಕಿ ಹೋರಾಟಗಾರ್ತಿ ಚಿತ್ರನಟಿ ಡಾ. ಪೂಜಾ ರಮೇಶ್ ಕಳವಳ ವ್ಯಕ್ತಪಡಿಸಿ ಮಾತನಾಡಿದರು.
ಗೋವಾ ರಾಜ್ಯದ ರಾಜಧಾನಿ ಪಣಜಿಯಲ್ಲಿ ನಡೆದ
ಕದಂಬ ಫೌಂಡೇಶನ್ ಆಯೋಜನೆ ಮಾಡಿದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಡಿಂಡಿಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ರಾಜ್ಯದಲ್ಲಿ ಈಗಾಗಲೇ ವಲಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಬರುತ್ತಿದ್ದು ಇಲ್ಲಿ ಕನ್ನಡ ಮರೆಮಾಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಕನ್ನಡ ಶಾಲೆಗಳು ಕನ್ನಡ ಉಳಿಯುವುದಾಗಿ ನಾವು ನೀವೆಲ್ಲರೂ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಡಾ. ಪೂಜಾ ರಮೇಶ ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂತಾ ಕ್ರೋಜ್ ಶಾಸಕರಾದ
ರೋಡಾಲ್ಫ ಫರ್ನಾಂಡಿಸ್ ಮಾತನಾಡಿ ಕದಂಬ ಫೌಂಡೇಶನ್ ನ ಎಲ್ಲಾ ಕಾರ್ಯಕ್ರಮಗಳು ಮತ್ತು ಈ ಸಂಘಟನೆಯ ಸಾಮಾಜಿಮುಖಿ ಕಾರ್ಯಕ್ರಮಗಳಿಗೆ ನಾನು ಸಹಕಾರ ಮತ್ತು ಬೆಂಬಲ ನಿರಂತರವಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಸಿದ್ದಣ್ಣ ಮೇಟಿ ಅವರು ಮಾತನಾಡಿ ಗೋವಾದಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳಿಗೆ ಬೆಂಬಲಿಸುವ ನಾವು ಕದಂಬ ಫೌಂಡೇಶನ್ ಇನ್ನು ಎತ್ತರಕ್ಕೆ ಬೆಳೆಯಲೆಂದು ಹಾರೈಸುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಲಂಗೂಟ್ ಕನ್ನಡ ಸಂಘದ ಅಧ್ಯಕ್ಷರಾದ ಮುರಳಿ ಮೋಹನ್ ಶೆಟ್ಟಿ. ದೀಪಕ್ ಕಟ್ಟಿಮನಿ.ದೀಪಕ್ಕೂ ಸಿದ್ಧನಾಯಕ ಎಂಎಲ್ಎ, ಪೂಜಾ,ಮುರಳಿ ಮೋಹನ್ ಶೆಟ್ಟಿ.ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಸಿಗ್ಗಾವಿ.ಮಲ್ಲೇಶ್ ಚೌಗಲಿ.ಚಂದ್ರಶೇಖರ ಬೆಳಗಲ. ಇನ್ನಿತರರು ಭಾಗವಹಿಸಿದ್ದರು.
ಹಟ್ಟಿ ಚಿನ್ನದ ಗಣಿಯ ಮೂಕಾಂಬಿಕಾ ನೃತ್ಯಲಯ ತಂಡದಿಂದ ಭರತನಾಟ್ಯವನ್ನು ಪ್ರದರ್ಶನ ಮಾಡಲಾಯಿತು.
9 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕದಂಬ ಫೌಂಡೇಶನ್ ಅಧ್ಯಕ್ಷರಾದ ಬಾಳೇಶ್ ಉಪ್ಪಾರಟ್ಟಿ ಮೊದಲಿಗೆ ಸ್ವಾಗತಿಸಿದರು, ಕಾರ್ಯಕ್ರಮವನ್ನು ಮಾರುತಿ ಬಡಿಗೇರ್ ನಿರೂಪಿಸಿದರು.
ಹಾಗೆ ಕದಂಬ ಫೌಂಡೇಶನ ಪದಾಧಿಕಾರಿಗಳಾದ
ತಬ್ಬು,ಸವಿತಾ,ವಸಂತ,ಸುರೇಶ ಇನ್ನೂ ಹಲವಾರು ಉಪಸ್ಥಿತರಿದ್ದರು

