ಕನ್ನಡ ಭಾಷೆ ಶ್ರೀಮಂತವಾದದ್ದು : ಶರಣು ಗದ್ದುಗೆ

ಕನ್ನಡ ಭಾಷೆ ಶ್ರೀಮಂತವಾದದ್ದು : ಶರಣು ಗದ್ದುಗೆ

ಕನ್ನಡ ಭಾಷೆ ಶ್ರೀಮಂತವಾದದ್ದು : ಶರಣು ಗದ್ದುಗೆ 

ಶಹಪುರ : ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ, ಕವಿರಾಜಮಾರ್ಗನ ಕಾಲದಿಂದ ಇಂದಿನ ಶ್ರೇಷ್ಠ ಸಾಹಿತಿಗಳು ಕನ್ನಡ ಸಾಹಿತ್ಯ ಶ್ರೀಮಂತ ಗೊಳಿಸಿದ್ದಾರೆ ಎಂದು ಚರಬಸವೇಶ್ವರ ಸಂಸ್ಥಾನದ ಶರಣು ಬಿ.ಗದ್ದುಗೆ ಹೇಳಿದರು 

ಶಹಾಪೂರ ನಗರದಲ್ಲಿರುವ ಹೋಟೆಲ್ ಮಾತೋಶ್ರೀ ಸಭಾಂಗಣದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಕರ್ನಾಟಕದ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರು,ಕುವೆಂಪು,

ಸೇರಿದಂತೆ ಅನೇಕ ಮಹನೀಯರು ಹಗಲಿರುಳು ಶ್ರಮಿಸಿದ್ದಾರೆ ಅವರೆಲ್ಲ ತ್ಯಾಗ ಮತ್ತು ಹೋರಾಟವನ್ನು ನಾವು ಇಂದು ಸ್ಮರಿಸಲೇ ಬೇಕಾಗಿದೆ ಎಂದು ನುಡಿದರು.

ಕನ್ನಡ ಭಾಷೆ ನಮ್ಮ ಮಾತೃ ಭಾಷೆಯಾಗಿದ್ದು ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ಸಾಹಿತ್ಯದ ಹಿರಿಮೆಗೆ ಸಾಕ್ಷಿಯಾಗಿದೆ,ಈ ನಾಡು ಕೇವಲ ಒಂದು ಭೂ ಪ್ರದೇಶವಲ್ಲ ಅದು ನಮ್ಮ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ಮತ್ತು ಸಂಸ್ಕೃತಿಗಳ ಪರಂಪರೆಯ ಪ್ರತೀಕ ಎಂದು ಹಿರಿಯ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ ಸಂತೋಷ ವ್ಯಕ್ತಪಡಿಸಿ ಮಾತನಾಡಿದರು.

ಇನ್ನೊರ್ವ ಮುಖ್ಯ ಅತಿಥಿಗಳಾದ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಸಂಸ್ಕೃತಿ ಮತ್ತು ಬದುಕು ಆದ್ದರಿಂದ ಈ ನಮ್ಮ ಕರುನಾಡಿನ ಸಾಂಸ್ಕೃತಿಕ ವೈಭವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ಪ್ರವೃತ್ತರಾಗುವುದು ನಮ್ಮ ಯುವ ಪೀಳಿಗೆಯ ಮೇಲಿದೆ ಎಂದು ಹೇಳುತ್ತಾ.ಕಲಾನಿಕೇತನ ಟ್ರಸ್ಟಿಗೆ ನನ್ನ ವಯಕ್ತಿಕವಾಗಿ 25,ಸಾವಿರಗಳ ದತ್ತಿ ನಿಧಿ ಉಪನ್ಯಾಸಕ್ಕೆ ಮೀಸಲಿಟ್ಟಿದ್ದೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಹಿರಿಯ ಸಾಹಿತಿಗಳದ ಲಿಂಗಣ್ಣ ಪಡಿಶೆಟ್ಟಿ ಮಾತನಾಡಿ ಕಲಾನಿಕೇತನ ಟ್ರಸ್ಟ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಎಲೆ ಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ.ಸಿದ್ದರಾಮ ಹೊನ್ಕಲ್,ಜಾನಪದ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಜಾನಪದ ಕಲಾವಿದ ಶರಣಪ್ಪ ಪೂಜಾರಿ ಮಾಡ್ನಾಳ,ಚಿತ್ರಕಲಾ ಕ್ಷೇತ್ರದಲ್ಲಿ ವರ್ಣಶ್ರೀ ಪ್ರಶಸ್ತಿ ಪಡೆದ ಮೇಘನಾಥ್ ಬೆಳ್ಳಿ ಅವರಿಗೆ ಹೃದಯಸ್ಪರ್ಶಿಯಾಗಿ ಅಭಿನಂದಿಸಲಾಯಿತು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು

ಈ ಸಮಾರಂಭದ ವೇದಿಕೆಯ ಮೇಲೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಸನಗೌಡ ಸುಬೇದಾರ,ಸಗರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ದೇವೇಂದ್ರಪ್ಪ ಹಡಪದ,ಡಾ,ಜಾಫರ್ ಷರೀಫ್ ನಿಡಗುಂದಿ ಯುವ ಮುಖಂಡರಾದ ದೇವೇಂದ್ರಪ್ಪ ತೋಟಗೇರ,ಗುರು ಕಾಮಾ, ಸೇರಿದಂತೆ ಇತರರು ಉಪಸ್ಥಿತರಿದ್ದರು,

ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕ ನುಡಿಗಳಾಡಿದರು.ಕವಯತ್ರಿ ಸುವರ್ಣ ರಾಠೋಡ್ ಹಾಗೂ ಮಡಿವಾಳಪ್ಪ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು,ಮಲ್ಲಿಕಾರ್ಜುನ್ ಸಜ್ಜನ್ ಸ್ವಾಗತಿಸಿದರು ಸಾಯಿಬಣ್ಣ ಜಿಎಸ್ಟಿ ವಂದಿಸಿದರು.