ಪ್ರಿಯಾಂಕ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಅಲ್ಲಮಪ್ರಭು ಪಾಟೀಲ ಅಭಿಮಾನಿ ಬಳಗದಿಂದ ಅನ್ನ ಸಂತರ್ಪಣೆ
ಕಲಬುರಗಿ: : ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರ ೪೮ನೇ ಜನ್ಮದಿನದ ಪ್ರಯುಕ್ತ ಶ್ರೀ ಅಲ್ಲಮಪ್ರಭು ಪಾಟೀಲ ಅಭಿಮಾನಿ ಬಳಗದ ವತಿಯಿಂದ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ಯುವ ಮುಖಂಡ ವೆಂಕಟೇಶ್ ಭಜಂತ್ರಿ ಅವರ ನೇತೃತ್ವದಲ್ಲಿ ಅನ್ನದಾಸೋಹ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನಿಡಿದರು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತರಫೈಲ್, ಪಾಲಿಕೆ ಸದಸ್ಯರಾದ ಸಚಿನ ಶಿರವಾಳ, ರಾಜೀವ ಜಾನೆ, ರೇಣುಕಾ ಹೋಳ್ಕರ್, ಶೇಖ ಹುಸೇನ್, ಮುಖಂಡರಾದ ಅಭಿಷೇಕ್ ಪಾಟೀಲ, ಈರಣ ಝಳಕಿ, ಪರಶುರಾಮ ನಾಟೀಕಾರ, ಚನ್ನು ಮರಬ, ಮಹೇಶಕುಮಾರ ತೇಲೂರಕರ್, ಮೋದಿನ ಪಟೇಲ್, ರಾಜಕ ಚೌಧರಿ, ಗೌಡಪ್ಪಗೌಡ, ಸಂಜು ಬಿರಾದಾರ, ಮಂಜುನಾಥ ಬಿರಾದಾರ ಸೇರಿದಂತೆ ಕಾಂಗ್ರೆಸ್ ಕಾರ್ಯಕತರು, ಅಭಿಮಾನಿಗಳು ಉಪಸ್ಥಿತರಿದ್ದರು.

