ಕರ್ನಾಟಕ ಪ್ರಗತಿಪರ ರೈತಾಪಿ ಸಂಘದಿಂದ ೧೦೧ ಸಾಧಕರಿಗೆ ಕರ್ನಾಟಕದ ಅರ್ಜುನ ಪ್ರಶಸ್ತಿ ಪ್ರದಾನ

ಕರ್ನಾಟಕ ಪ್ರಗತಿಪರ ರೈತಾಪಿ ಸಂಘದಿಂದ ೧೦೧ ಸಾಧಕರಿಗೆ ಕರ್ನಾಟಕದ ಅರ್ಜುನ ಪ್ರಶಸ್ತಿ ಪ್ರದಾನ

ಕರ್ನಾಟಕ ಪ್ರಗತಿಪರ ರೈತಾಪಿ ಸಂಘದಿಂದ ೧೦೧ ಸಾಧಕರಿಗೆ ಕರ್ನಾಟಕದ ಅರ್ಜುನ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕ ಪ್ರಗತಿಪರ ರೈತಾಪಿ ಸಂಘದ ವತಿಯಿಂದ ರೈತ ಜನಜಾಗೃತಿ ಅಂಗವಾಗಿ ೨೦೨೬ನೇ ಸಾಲಿನ ರಾಜ್ಯಮಟ್ಟದ ಕಾರ್ಯಕ್ರಮವನ್ನು ನಗರದ ಡಾ. ಎಸ್.ಎಂ. ಪಂಡಿತ್ ರಂಗಮAದಿರದಲ್ಲಿ ಭಾನುವಾರ ಆಯೋಜಿಸಲಾಯಿತು.

ರೈತನಿದ್ದರೆ ಜಗವೆಲ್ಲ, ರೈತನಿಲ್ಲದಿದ್ದರೆ ಜಗವಿಲ್ಲ ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ರೈತ ಅನ್ನದಾತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ೧೦೧ ಗಣ್ಯರಿಗೆ ಕರ್ನಾಟಕದ ಅರ್ಜುನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅಪ್ಪಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಡಕೋಳ ಮಡಿವಾಳೇಶ್ವರ ಮಹಾಮಠದ ಡಾ. ರುದ್ರಮುನಿ ಶಿವಾಚಾರ್ಯರು, ಯೋಗೇಶ್ವರಿ ಮಾತಾಜಿ, ಗಂಗಾಧರ ಮಹಾಸ್ವಾಮಿಗಳು, ಶಾರದಾಮಾತೆ ಹಾಗೂ ಶಾಂತಮ್ಮ ತಾಯಿ ಮಾತೋಶ್ರೀ ಸಾನ್ನಿಧ್ಯ ವಹಿಸಿದ್ದರು. ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ರೈತ ಬಾವುಟ ಪ್ರದರ್ಶನ ಹಾಗೂ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಬಿಜೆಪಿ ಮುಖಂಡ ಅಂಬಾರಾಯ ಅಪ್ಪಗಿ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ರಾಜು ತೆಗ್ಗಳ್ಳಿ, ಕೆವಿಕೆ ರದ್ದೇವಾಡಿಯ ಡಾ. ಪಿ. ವಾಸುದೇವ ನಾಯಕ ಉದ್ಯಮಿಗಳು, ವೈದ್ಯರು, ಪತ್ರಕರ್ತರು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 ಕರ್ನಾಟಕ ಪ್ರಗತಿಪರ ರೈತಾಪಿ ಸಂಘದ ಸಂಸ್ಥಾಪಕ ಅಧ್ಯಕ್ಷ ಮೋಹನ ಎನ್. ಪಾಟೀಲ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವಣ್ಣಗೌಡ ಎನ್. ಪಾಟೀಲ ಅವರು ಪ್ರಾಸ್ಥಾವಿಕ ಮಾತನಾಡಿದರು. ವಿಶ್ವನಾಥ ಮರತೂರಕರ್ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಆತ್ಮೀಯ ಬಳಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.