ಆರ್ಥಿಕ ಪ್ರಗತಿಯ ಬೆನ್ನೆಲುಬು ಸಣ್ಣ ಕೈಗಾರಿಕಾ ಕ್ಷೇತ್ರದ ನಿಗಮಕ್ಕೆ ಅಲ್ಲಮ ಪ್ರಭು ಪಾಟೀಲ್ ಸಾರಥ್ಯ ಅಭಿನಂದನೆ
ಆರ್ಥಿಕ ಪ್ರಗತಿಯ ಬೆನ್ನೆಲುಬು ಸಣ್ಣ ಕೈಗಾರಿಕಾ ಕ್ಷೇತ್ರದ ನಿಗಮಕ್ಕೆ ಅಲ್ಲಮ ಪ್ರಭು ಪಾಟೀಲ್ ಸಾರಥ್ಯ ಅಭಿನಂದನೆ
ಕಲಬುರಗಿ : ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕಾ ರಂಗದಲ್ಲಿ ಹೊಸ ನೀತಿ ನಿರೂಪಣೆ ಮಾಡಿ ಸಣ್ಣ ಕೈಗಾರಿಕೆದಾರರಿಗೆ ಉತ್ತೇಜನ ಸಿಗಲಿ ಎಂದು ರಾಜ್ಯ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸತ್ಯನಾಥ್ ಶೆಟ್ಟಿ ಹೇಳಿದರು.
ಕರ್ನಾಟಕ ಸಣ್ಣ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷರಾಗಿ ನೇಮಕ ಹೊಂದಿದ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ್ ನೆಲೋಗಿ ಅವರನ್ನು ನ 22ರಂದು ಹೋಟೆಲ್ ಅಸೋಸಿಯೇಷನ್ ವತಿಯಿಂದ ಅಭಿನಂದಿಸಿ ಅವರು ಶುಭಹಾರೈಸಿದರು.
ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿರುವುದಕ್ಕೆ ಸಂತಾದವಾಗಿದೆ. ಸಣ್ಣ ಕೈಗಾರಿಕಾ ವಲಯದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ಅಲ್ಲಮ ಪ್ರಭು ಪಾಟೀಲ್ ಹೇಳಿದರು. ಹೋಟೆಲ್ ವಸತಿ ಮತ್ತು ಬೇಕರಿ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಡಾ. ಸದಾನಂದ ಪೆರ್ಲ, ಮಾಲಾ ಕಣ್ಣಿ, ಮತ್ತು ಸಿದ್ದರಾಮ ತಳವಾರ ಇದ್ದರು.

