ನ. 24ರಂದು "ಅಯ್ಯನ ಕಥೆಗಳು" ಪುಸ್ತಕ ವಿತರಣಾ ಅಭಿಯಾನ -5
ನ. 24ರಂದು "ಅಯ್ಯನ ಕಥೆಗಳು" ಪುಸ್ತಕ ವಿತರಣಾ ಅಭಿಯಾನ -5
ಕಲಬುರಗಿ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ, ಹೈದರಾಬಾದ್ ಸಂಸ್ಥಾನ ವಿಮೋಚನ ಹೋರಾಟಗಾರ ದಿ. ಮಹಾದೇವಪ್ಪ ಕಡೇಚೂರ್ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ "ಅಯ್ಯನ ಕಥೆಗಳು" ಕೃತಿಗಳನ್ನು ಶಾಲಾ ಗ್ರಂಥಾಲಯಕ್ಕೆ ಹಸ್ತಾಂತರಿಸುವ ಪುಸ್ತಕ ವಿತರಣಾ ಅಭಿಯಾನದ ಐದನೇ ಕಾರ್ಯಕ್ರಮವು ನವೆಂಬರ್ 24ರಂದು ಶರಣಸಿರಸಗಿ ಗ್ರಾಮೀಣ ಕ್ರೀಡಾ ವಸತಿ ಶಾಲೆಯಲ್ಲಿ ನಡೆಯಲಿದೆ.
ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ಹಾಗೂ ಗ್ರಾಮೀಣ ಕ್ರೀಡಾ ವಸತಿ ಶಾಲೆ ಶರಣ ಸಿರಸಿಗಿ ಆಡಳಿತ ಮಂಡಳಿಯ ವತಿಯಿಂದ ನವೆಂಬರ್ 24 ರಂದು ಬೆಳಗ್ಗೆ 11.30 ಕ್ಕೆ ಪುಸ್ತಕ ವಿತರಣಾ ಅಭಿಯಾನವನ್ನು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ ತೇಗಳತಿಪ್ಪಿ ಉದ್ಘಾಟಿಸಲಿದ್ದಾರೆ. ಗ್ರಾಮೀಣ ಕ್ರೀಡಾ ವಸತಿ ಶಾಲೆಯ ಅಧ್ಯಕ್ಷರಾದ ಸಿ. ಎನ್ ಬಾಬಳಗಾoವ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿಗಳು ಹಾಗೂ ಹಿರಿಯ ಚಿಂತಕರಾದ ಎ.ಕೆ ರಾಮೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಶಾಲೆಯ ಮುಖ್ಯ ಗುರುಗಳಾದ ಸಿದ್ಧರಾಮ ಮುಗಳಿ, ಟ್ರಸ್ಟಿ ಮಹೇಶ್ ಕಡೇಚೂರ್ ಭಾಗವಹಿಸಲಿದ್ದಾರೆ ಎಂದು ಸಿ.ಎನ್ ಬಾಬಳಗಾoವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

