ಅನುದಾನ ಘೋಷಣೆ ಸಾಕಾಗಲ್ಲ, ಕಾಮಗಾರಿ ಲೆಕ್ಕ ಬಹಿರಂಗ ಪಡಿಸಿ: ಕಲ್ಲೂರ

ಅನುದಾನ ಘೋಷಣೆ ಸಾಕಾಗಲ್ಲ, ಕಾಮಗಾರಿ ಲೆಕ್ಕ ಬಹಿರಂಗ ಪಡಿಸಿ: ಕಲ್ಲೂರ

ಅನುದಾನ ಘೋಷಣೆ ಸಾಕಾಗಲ್ಲ, ಕಾಮಗಾರಿ ಲೆಕ್ಕ ಬಹಿರಂಗ ಪಡಿಸಿ: ಕಲ್ಲೂರ 

ಕಲಬುರಗಿ: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಹಾಗೂ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಅನುದಾನ ಘೋಷಿಸಿದೆ. ಆದರೆ ಘೋಷಣೆಯಾದ ಅನುದಾನ ಎಷ್ಟು? ಬಿಡುಗಡೆಯಾದ ಹಣ ಎಷ್ಟು? ನಿಜವಾಗಿ ಕಾಮಗಾರಿ ನಡೆದಿರುವುದು ಎಷ್ಟು? ಎಂಬ ಪ್ರಶ್ನೆಗಳಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟ ಉತ್ತರ ನೀಡಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಅವರು ಆಗ್ರಹಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ನಗರದ ರಸ್ತೆ ಅಭಿವೃದ್ಧಿಗೆ ಸುಮಾರು ರೂ.೩೫೭ ಕೋಟಿ, ವಿದ್ಯುತ್ ಕಂಬಗಳ ಬದಲಾವಣೆಗೆ ರೂ.೪೦೦ ಕೋಟಿ ಹಾಗೂ ೧೯ ವೃತ್ತಗಳ ಅಭಿವೃದ್ಧಿ ಮತ್ತು ಮೂರು ಕೆರೆಗಳ ಪುನಶ್ಚೇತನದ ಬಗ್ಗೆ ಘೋಷಣೆ ಮಾಡಲಾಗಿದೆ. ಆದರೆ ಈ ಕಾಮಗಾರಿಗಳು ಯಾವ ಹಂತದಲ್ಲಿವೆ? ಯಾವ ರಸ್ತೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ? ಯಾವ ವೃತ್ತಗಳ ಅಭಿವೃದ್ಧಿ ಪೂರ್ಣಗೊಂಡಿದೆ? ಯಾವ ಕೆರೆಗಳ ಪುನಶ್ಚೇತನ ಕಾರ್ಯ ನಡೆಯುತ್ತಿದೆ? ಎಂಬ ಮಾಹಿತಿಯನ್ನು ಅಧಿಕಾರಿಗಳು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ಕೇವಲ ಯೋಜನೆಗಳ ಹೆಸರು ಹೇಳುವುದರಿಂದ ನಗರದ ಅಭಿವೃದ್ಧಿಯಾಗುವುದಿಲ್ಲ. ಪ್ರತಿಯೊಂದು ಕಾಮಗಾರಿಯ ಸ್ಥಳ, ವೆಚ್ಚ, ಗುತ್ತಿಗೆದಾರರ ವಿವರ, ಪ್ರಾರಂಭದ ದಿನಾಂಕ ಹಾಗೂ ಪೂರ್ಣಗೊಳ್ಳುವ ಅವಧಿಯನ್ನು ಪ್ರಕಟಿಸಬೇಕು. ಕಲಬುರಗಿ ಮಹಾನಗರ ಪಾಲಿಕೆಯು ೨೦೨೬-೨೭ನೇ ಸಾಲಿಗೆ ರೂ.೨೩೪.೪೪ ಕೋಟಿ ಮೊತ್ತದ ಬಜೆಟ್ ಮಂಡಿಸಿದೆ. ಸ್ವಚ್ಫತೆ, ಒಳಚರಂಡಿ, ರಸ್ತೆ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಅನುದಾನ ಮೀಸಲಿಟ್ಟಿದೆ. ಆದರೆ ಯಾವ ವಾರ್ಡ್ನಲ್ಲಿ ಸ್ವಚ್ಫತಾ ಕಾರ್ಯ ನಡೆಯುತ್ತಿದೆ? ಯಾವ ಬಡಾವಣೆಯಲ್ಲಿ ಒಳಚರಂಡಿ ನಿರ್ಮಾಣವಾಗುತ್ತಿದೆ? ಯಾವ ವಾರ್ಡ್ನಲ್ಲಿ ದೊಡ್ಡ ಚರಂಡಿ ಹಾಗೂ ಸಣ್ಣ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ? ಎಂಬುದರ ವಾರ್ಡ್ವಾರು ಮಾಹಿತಿ ನಗರದ ಜನರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ನಗರದ ಅನೇಕ ಪ್ರದೇಶಗಳಲ್ಲಿ ಸ್ವಚ್ಫತೆ, ಕಸ ವಿಲೇವಾರಿ ಮತ್ತು ಒಳಚರಂಡಿ ಸಮಸ್ಯೆಗಳು ಇನ್ನೂ ಕಂಡುಬರುತ್ತಿವೆ. ಬಜೆಟ್‌ನಲ್ಲಿ ಹಣ ಮೀಸಲಿಡುವುದಷ್ಟೇ ಅಲ್ಲದೆ, ಅದರ ಸಮರ್ಪಕ ಬಳಕೆಯೂ ಆಗಬೇಕು.  

ನೀರಾವರಿ ಮತ್ತು ಕೃಷಿ ಅಭಿವೃದ್ಧಿ:  

ಕಲಬುರಗಿ ಜಿಲ್ಲೆಯ ಎರಡು ಪ್ರಮುಖ ನೀರಾವರಿ ಯೋಜನೆಗಳಿಗೆ ?೧೦೫.೨೦ ಕೋಟಿ ಮೊತ್ತದ ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ತೊಗರಿ ಕಣಜ ಎಂದೇ ಹೆಸರಾದ ಕಲಬುರಗಿ ಜಿಲ್ಲೆಯಲ್ಲಿ ರೈತರ ಆರ್ಥಿಕ ಅಭಿವೃದ್ಧಿಗೆ ಕೃಷಿ ಯಾಂತ್ರೀಕರಣ ಕೇಂದ್ರಗಳು, ಆಹಾರ ಸಂಸ್ಕರಣಾ ಘಟಕಗಳು ಹಾಗೂ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸಬೇಕು.  

ರೈತರಿಗೆ ಈ ಯೋಜನೆಗಳಿಂದ ನೇರವಾಗಿ ದೊರೆಯುವ ಪ್ರಯೋಜನಗಳೇನು? ಎಷ್ಟು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ? ಎಷ್ಟು ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ? ಎಂಬುದನ್ನು ಸ್ಪಷ್ಟಪಡಿಸಬೇಕು.  

ಸಂಪರ್ಕ ವ್ಯವಸ್ಥೆ ಮತ್ತು ವಿಮಾನ ನಿಲ್ದಾಣ:  

ಬೀದರ್-ಕಲಬುರಗಿ ರೈಲು ಸಂಪರ್ಕದ ಅಭಿವೃದ್ಧಿ ಹಾಗೂ ವಿದ್ಯುದೀಕರಣಕ್ಕೆ ವೇಗ ನೀಡಬೇಕು. ಕಲಬುರಗಿ ವಿಮಾನ ನಿಲ್ದಾಣವನ್ನು ಅಂತರರಾಷ್ಟಿöçÃಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಗಮನಹರಿಸಬೇಕು.  

ಬೀದರ್-ಬೆಂಗಳೂರು ಹಾಗೂ ಸೊಲ್ಲಾಪುರ-ಜೇವರ್ಗಿ-ಕಲಬುರಗಿ ಸಂಪರ್ಕ ಮಾರ್ಗಗಳ ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆಗೆ ಆದ್ಯತೆ ನೀಡಬೇಕು. ಇದರಿಂದ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಅನುಕೂಲವಾಗಲಿದೆ.  

ಕಲಬುರಗಿ ಜಿಲ್ಲೆಯ ಜನರು ಅಭಿವೃದ್ಧಿಯನ್ನು ವಿರೋಧಿಸುವುದಿಲ್ಲ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಘೋಷಣೆಗಳು ಮತ್ತು ಅಂಕಿ-ಅAಶಗಳನ್ನು ನೀಡದೆ, ನೆಲಮಟ್ಟದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ಪಾರದರ್ಶಕ ಮಾಹಿತಿ ನೀಡಬೇಕು. ಅನುದಾನದ ಲೆಕ್ಕಕ್ಕಿಂತ ಅಭಿವೃದ್ಧಿಯ ಫಲಿತಾಂಶ ಮುಖ್ಯ. ಜನರಿಗೆ ಭರವಸೆ ಬೇಡ, ಕಣ್ಣಿಗೆ ಕಾಣುವ ಅಭಿವೃದ್ಧಿ ಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಈ ಕುರಿತು ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ದೇವೇಂದ್ರ ದೇಸಾಯಿ ಕಲ್ಲೂರ್ ಆಗ್ರಹಿಸಿದ್ದಾರೆ.