ಐನಾಪೂರ್ ಏತ ನೀರಾವರಿ ಕಾಮಾಗಾರಿ ವಿಳಂಬ : ಕಾಮಾಗಾರಿ ಚುರುಕುಗೊಳಿಸುವಂತೆ ಒತ್ತಾಯಿಸಿ ಸಚಿವ ಖಂಡ್ರೆಗೆ ಅಧ್ಯಕ್ಷ ಶಿವಾನಂದ ಪಾಟೀಲ್ ಮನವಿ

ಐನಾಪೂರ್ ಏತ ನೀರಾವರಿ ಕಾಮಾಗಾರಿ ವಿಳಂಬ :  ಕಾಮಾಗಾರಿ ಚುರುಕುಗೊಳಿಸುವಂತೆ ಒತ್ತಾಯಿಸಿ  ಸಚಿವ ಖಂಡ್ರೆಗೆ ಅಧ್ಯಕ್ಷ ಶಿವಾನಂದ ಪಾಟೀಲ್ ಮನವಿ

ಐನಾಪೂರ್ ಏತ ನೀರಾವರಿ ಕಾಮಾಗಾರಿ ವಿಳಂಬ : 

ಕಾಮಾಗಾರಿ ಚುರುಕುಗೊಳಿಸುವಂತೆ ಒತ್ತಾಯಿಸಿ ಸಚಿವ ಖಂಡ್ರೆಗೆ ಅಧ್ಯಕ್ಷ ಶಿವಾನಂದ ಪಾಟೀಲ್ ಮನವಿ  

ಚಿಂಚೋಳಿ : ತಾಲೂಕಿನ ಐನಾಪೂರ್ ಏತ ನೀರಾವರಿ ಯೋಜನೆಗೆ ಅಧಿಕಾರಿಗಳು ಭೂಮಿ ಪೂಜೆ ನೇರವೇರಿಸಲಾಗಿದೆ.ಆದರೆ ಕಾಮಗಾರಿ ಪ್ರಾರಂಭಕ್ಕೆ ವಿಳಂಬ ಮಾಡಲಾಗುತ್ತಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಶಿವಾನಂದ ಮಾಲಿ ಪಾಟೀಲ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

 ಐನಾಪೂರ್ ಭಾಗದ ರೈತಾಪಿ ವರ್ಗ ಕಳೆದ 18 ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗುತ್ತಿದೆ. ಕಳದಂಡೆ ಮುಲ್ಲಾಮಾರಿ ಜಾಲಾಶಾಯದಡಿ ಐನಾಪೂರ್ ಏತ ನೀರಾವರಿ ಯೋಜನೆ ಪ್ರಾರಂಭವಾದರೆ ಈ ಭಾಗದ ರೈತರ ಹೊಲಗಳಿಗೆ ನೀರು ಹರಿಯಲಿದೆ. 18 ವರ್ಷಗಳ ಹೋರಾಟಕ್ಕೆ ಕಷ್ಟಪಟ್ಟ ರೈತರ ಕನಸು ನನಸುಗೊಳಲಿದೆ. ಈಗಾಗಲೇ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ ಅವರು ಕಲಬುರಗಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಐನಾಪೂರ್ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಅದರಂತೆ ಅಧಿಕಾರಿಗಳು ಕೂಡ ಭೂಮಿ ಪೂಜೆ ನೆರವೇರಿಸಲಾಗಿದ್ದು, ಕಾಮಾಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಕೆಲಸ ಪ್ರಾರಂಭಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ಕೂಡಲೇ ಉದ್ದೇಶಿತ ಕಾಮಾಗಾರಿ ಕೆಲಸ ಪ್ರಾರಂಭಿಸಲು ಆದೇಶದ ಸೂಚನೆ ನೀಡಿ, ರೈತಾಪಿ ವರ್ಗಗಳ ಹಿತಕಾಯುವ ಕೆಲಸ ಮಾಡಬೇಕೆಂದು ಅಧ್ಯಕ್ಷ ಶಿವಾನಂದ ಪಾಟೀಲ್ ಸಚಿವರಿಗೆ ಕಲಬುರಗಿಯಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಾಗಶೆಟ್ಟಿ ಗಾರಂಪಳ್ಳಿ, ನಾಗಶೆಟ್ಟಿ ಮದರಗಿ, ಜಗನ್ನಾಥ ಜಮಾದಾರ, ಅಡೆಪ್ಪ ಚೆನ್ನೂರ್ ಅವರು ಇದ್ದರು.