ನ.20 ರಂದು ಕನ್ನಡ ನಾಡಹಬ್ಬ ಪ್ರಯುಕ್ತ ಹಂಸಜ್ಯೋತಿ ಟ್ರಸ್ಟ್ನಿಂದ ಕಿದ್ವಾಯಿ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು, ಬನ್ನು, ವಿತರಣೆ ವಿಶೇಷ ಸಾಂಸ್ಕೃತಿಕ–ಸಾಮಾಜಿಕ ಚಿಂತನ ಕಾರ್ಯಕ್ರಮ
ನ.20 ರಂದು ಕನ್ನಡ ನಾಡಹಬ್ಬ ಪ್ರಯುಕ್ತ ಹಂಸಜ್ಯೋತಿ ಟ್ರಸ್ಟ್ನಿಂದ ಕಿದ್ವಾಯಿ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು, ಬನ್ನು, ವಿತರಣೆ
ವಿಶೇಷ ಸಾಂಸ್ಕೃತಿಕ–ಸಾಮಾಜಿಕ ಚಿಂತನ ಕಾರ್ಯಕ್ರಮ
ಬೆಂಗಳೂರು: ಹಂಸಜ್ಯೋತಿ ಟ್ರಸ್ಟ್ (ರಿ.), ಬೆಂಗಳೂರು ವತಿಯಿಂದ ಸಂಸ್ಥೆಯ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ 71ನೇ ಕನ್ನಡ ನಾಡಹಬ್ಬದ ಪ್ರಯುಕ್ತ ನವೆಂಬರ್ 20ರ ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ವೆಂಕಟೇಶ್ವರ ಧರ್ಮಶಾಲೆಯ ಕಪೂರ್ ವಾರ್ಡ್ ಮುಂಭಾಗದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು, ಬನ್ನು ಹಾಗೂ ಸಿಹಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾ .ಬಿ.ಎಸ್ . ಪಾಟೀಲ್ ಅವರು ಉದ್ಘಾಟಿಸಲಿದ್ದು, ಬೆಂಗಳೂರಿನ ನಿವೃತ್ತ ಜಿಲ್ಲಾಧಿಕಾರಿ ಶ್ರೀ ವಿ. ಶಂಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ಆರ್. ಕೃಷ್ಣಪ್ಪ, ಮಂಡ್ಯ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತ ಡಾ. ಬಿ.ಆರ್. ಹಿರೇಮಠ, ಕರ್ನಾಟಕ ಲೋಕಾಯುಕ್ತದ ಆಡಳಿತ ವಿಭಾಗದ ಉಪನಿಬಂಧಕ ಎಸ್. ಸರವಣನ್, ಚಲನಚಿತ್ರ ನಟ ಹಾಗೂ ಖ್ಯಾತ ಶಾಸ್ತ್ರೀಯ ನೃತ್ಯಗುರು ಡಾ. ಶ್ರೀಧರ್, ವಿದ್ಯಾರ್ಥಿ ಭವನದ ಮಾಲೀಕ ಎಸ್. ರಾಮಕೃಷ್ಣ ಅಡಿಗ, ಹಂಸಜ್ಯೋತಿ ಟ್ರಸ್ಟ್ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಬಾಲರಾಜ್, ಹಿರಿಯ ರಂಗ ಸಂಘಟಕ ಮತ್ತು ಸಂಸ್ಕೃತಿ ಚಿಂತಕ ಶ್ರೀನಿವಾಸ ಜಿ. ಕಪ್ಪಣ್ಣ, ನಮ್ಮ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ವಿಶ್ವ ವೆಂಕಟೇಶ್ವರ ಇಂಟರ್ನ್ಯಾಷನಲ್ ಸ್ಕೂಲ್ನ ವ್ಯವಸ್ಥಾಪಕ ನಿರ್ದೇಶಕ ಕೆ . ಬಾಲಾಜಿ ಬಾಬು, ಬೆಂಗಳೂರಿನ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಮೋಹನ್ ಕುಮಾರ್, ಉದ್ಯಮಿ ಹಾಗೂ ಸಮಾಜಸೇವಕ ಎಸ್ .ಟಿ. ಉದಯಕುಮಾರ್, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಮತ್ತು ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ಕನ್ನಡ ಗೀತೆಗಳ ಗಾಯನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಶ್ರೀಮತಿ ಸ್ವಪ್ನ, ಮಂಜುನಾಥ್, ನಾಗಶ್ರೀ, ಸವಿಗಾನ ಮಂಜುನಾಥ್, ಸದಾನಂದ ಜಿ. ಕುರುಡಿಕೆರೆ ಮತ್ತು ಶ್ರೀನಿವಾಸಮೂರ್ತಿ ಅವರು ಗಾಯನ ಪ್ರಸ್ತುತಪಡಿಸುವರು .
ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯ ಆಶಯಗಳನ್ನು ಒಗ್ಗೂಡಿಸುವ ಉದ್ದೇಶದಿಂದ 'ಹಂಸ ಸಾಂಸ್ಕೃತಿಕ–ಸಾಮಾಜಿಕ ಚಿಂತನ' ಎಂಬ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮಾನವೀಯ ಕಾಳಜಿ ಮತ್ತು ಸಾಂತ್ವನ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಕನ್ನಡಾಭಿಮಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹಂಸಜ್ಯೋತಿ ಟ್ರಸ್ಟ್ನ ಕಾರ್ಯನಿರ್ವಹಣಾ ಟ್ರಸ್ಟಿ ವಿಜಯ್ ಮುರಳೀಧರ್ ಮತ್ತು ಸಂಸ್ಥಾಪಕ–ವ್ಯವಸ್ಥಾಪಕ ಟ್ರಸ್ಟಿ ಎಂ. ಮುರಳೀಧರ್ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ವಿವರ:
ದಿನಾಂಕ: 20 ನವೆಂಬರ್ 2026, ಶುಕ್ರವಾರ,ಸಮಯ: ಬೆಳಿಗ್ಗೆ 9.00 ಗಂಟೆ
ಸ್ಥಳ: ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ, ವೆಂಕಟೇಶ್ವರ ಧರ್ಮಶಾಲೆ, ಕಪೂರ್ ವಾರ್ಡ್ ಮುಂಭಾಗ, ಬೆಂಗಳೂರು.
ಸಂಪರ್ಕ: 9448093409 / 8310468615 / 7760771823

