ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ನಿಂದ ಕಾಕೋಳು ಸರ್ಕಾರಿ ಶಾಲೆಗೆ ಶಾಲಾ ಬಸ್ ಕೊಡುಗೆ ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಮಹತ್ವದ ಹೆಜ್ಜೆ – ದೂರದ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲ
ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ನಿಂದ ಕಾಕೋಳು ಸರ್ಕಾರಿ ಶಾಲೆಗೆ ಶಾಲಾ ಬಸ್ ಕೊಡುಗೆ
ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಮಹತ್ವದ ಹೆಜ್ಜೆ – ದೂರದ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲ
ಬೆಂಗಳೂರು: ಮಕ್ಕಳ ಸುರಕ್ಷತೆ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಾಮಾಜಿಕ ಕಳಕಳಿಯೊಂದಿಗೆ ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್ಆರ್ (CSR) ಉಪಕ್ರಮದಡಿ ರಾಜಾನುಕುಂಟೆ ಸಮೀಪದ ಕಾಕೋಳಿನ ಪಿಎಂ ಶ್ರೀ ಸರ್ಕಾರಿ ಸಂಯುಕ್ತ ಪ್ರೌಢಶಾಲೆಗೆ ಶಾಲಾ ಬಸ್ ಕೊಡುಗೆಯಾಗಿ ನೀಡಿದೆ. ಸಂಸ್ಥೆಯ ಸಹಸಂಸ್ಥಾಪಕ ಹಾಗೂ ನಿರ್ದೇಶಕ ಕೃಷ್ಣರಾಜ ಶರ್ಮ ಅವರು ಶಾಲೆಗೆ ಬಸ್ ಹಸ್ತಾಂತರಿಸಿ ಮಾತನಾಡುತ್ತ ಮಕ್ಕಳ ಶಿಕ್ಷಣದ ಹಾದಿಯನ್ನು ಸುಗಮಗೊಳಿಸುವುದರ ಜೊತೆಗೆ ಅವರ ಸುರಕ್ಷತೆಗೆ ಆದ್ಯತೆ ನೀಡಿರುವ ಈ ಕೊಡುಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪೂರಕವಾದ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು .
ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ದೊರೆತಿರುವ ಈ ಕೊಡುಗೆಯು ವಿಶೇಷ ಉಡುಗೊರೆಯಾಗಿದೆ. ಶಾಲಾ ಬಸ್ನಿಂದ ವಿದ್ಯಾರ್ಥಿಗಳಿಗೆ ಸುರಕ್ಷಿತ, ಸುಗಮ ಹಾಗೂ ಅನುಕೂಲಕರ ಪ್ರಯಾಣದ ವ್ಯವಸ್ಥೆ ದೊರೆಯಲಿದ್ದು, ವಿಶೇಷವಾಗಿ ದೂರದ ಗ್ರಾಮಗಳಿಂದ ಶಾಲೆಗೆ ಆಗಮಿಸುವ ಮಕ್ಕಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷ ವಿಜೇತ ಆರ್. ಸಂತಸ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳ ಬಲವರ್ಧನೆಗೆ ಖಾಸಗಿ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕೈಜೋಡಿಸಿದಾಗ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂಬುದಕ್ಕೆ ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ ಸಂಸ್ಥೆಯ ಈ ಕೊಡುಗೆ ಉತ್ತಮ ನಿದರ್ಶನವಾಗಿದೆ ಎಂದು ಪಾಂಚಜನ್ಯ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ಮುರಳಿ ಕಾಕೋಳು ಅಭಿಪ್ರಾಯಪಟ್ಟರು. ಶಾಲೆಯ ಮುಖ್ಯೋಪಾಧ್ಯಾಯ ದೀಕ್ಷಿತ್ ಕುಮಾರ್ , ಹಿರಿಯ ಶಿಕ್ಷಕ ನಾರಾಯಣ ಸ್ವಾಮಿ , ವರ್ಧಮಾನ್ ಮೆಡಿ ಸೇಲ್ಸ್ ಪ್ರಿ.ಲಿ ನ್ ಮಹೇಂದ್ರ ಚೌಹಾಣ್ , ಕಾಫಿ & ಟೀ ಮಾಸ್ಟರ್ ಸಿಇಒ ನಂಜರಾಜ ಅರಸ್ ಉಪಸ್ಥಿತರಿದ್ದರು

