ಲೋಕೋಪಯೋಗಿ ಭವನದಲ್ಲಿ 80ನೇ ಸ್ವಾತಂತ್ರ್ಯೋತ್ಸವ, ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ
ಲೋಕೋಪಯೋಗಿ ಭವನದಲ್ಲಿ 80ನೇ ಸ್ವಾತಂತ್ರ್ಯೋತ್ಸವ, ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ
ಕಲಬುರಗಿ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಲಬುರಗಿಯ ಲೋಕೋಪಯೋಗಿ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡ ಈಶಾನ್ಯ ವಲಯ, ಕಲಬುರಗಿಯ ಮುಖ್ಯ ಇಂಜಿನಿಯರ್ ಸುಭಾಷ್ ಎಲ್. ಶಿಕ್ಷಣಕರ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ 110 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೇ ವೇಳೆ ಇಲಾಖೆಯ ಮಹಿಳಾ ಸಿಬ್ಬಂದಿಗಾಗಿ ನೂತನವಾಗಿ ನಿರ್ಮಿಸಲಾದ ವಿಶ್ರಾಂತಿ ಕೋಣೆಯನ್ನು ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ರಾಹುಲ್ ಕಾಂಬಳೆ, ಶ್ರೀಧರ್ ಸರ್ವಾಡ್, ಶ್ರೀಮಂತ ಬೆನ್ನೂರ್ ಹಾಗೂ ಮೊಹಮ್ಮದ್ ಇಬ್ರಾಹಿಂ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಶಿವರಾಜ್ ಪಾಟೀಲ್, ಬಸವರಾಜ್ ಹಾಗೂ ಉಷಾ ರಾಣಿಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಖುಷಿದ್ ಬಾನು ಹಾಗೂ ಜಯರಾಜ್ ಆರ್.ಎನ್., ತಾಂತ್ರಿಕ ಸಹಾಯಕ ನಾಗರಾಜ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘದ ಕಲಬುರಗಿ ಘಟಕದ ಅಧ್ಯಕ್ಷ ಕಾಳಪ್ಪ ಹಾಗೂ ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಘದ ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದ್ ಖಾನ್, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿಟೇಂದ್ರ, ಸಹಕಾರ್ಯದರ್ಶಿಗಳಾದ ಶಶಿನಾಥ ಸೊನೆ ಹಾಗೂ ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಕ್ಟರ್ ಪಾಶಾ ಹಾಗೂ ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕೃಷ್ಣ ಸಿಂಗ್, ಸಲಹೆಗಾರರಾದ ಶರಣಗೌಡ ಪಾಟೀಲ್ ಹಾಗೂ ಮಂಜುನಾಥ್ ಧೂಳೆ ಹಾಗೂ ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಅಕ್ಷತ ಜಮ್‌ಶೆಟ್ಟಿ, ಪಾಂಡುರಂಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ್ ಮಜಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ ನೆರವೇರಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ, ಪರಿಸರ ಸಂರಕ್ಷಣೆ ಹಾಗೂ ಸಿಬ್ಬಂದಿ ಕಲ್ಯಾಣಕ್ಕೆ ಒತ್ತು ನೀಡಿದ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು.

