ವಾಲ್ಮೀಕಿ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠ : ಸಂಗೀತ ಬಡಿಗೇರ.

ವಾಲ್ಮೀಕಿ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠ : ಸಂಗೀತ ಬಡಿಗೇರ.

ವಾಲ್ಮೀಕಿ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠ : ಸಂಗೀತ ಬಡಿಗೇರ.

ಶಹಾಪುರ : ವಾಲ್ಮೀಕಿ ಅವರು ರಚಿಸಿದ ರಾಮಾಯಣ ಕೇವಲ ಒಂದು ಕಥೆಯಲ್ಲ,ಅದು ಮನುಷ್ಯನ ಉತ್ತಮ ಬದುಕಿಗೆ ಪೂರಕವಾಗಿರುವ ಹಾಗೂ ಧರ್ಮದ ಹಾದಿಯನ್ನು ತೋರಿಸುವ ದಿಕ್ಸೂಚಿಯಾಗಿದೆ.ಆದ್ದರಿಂದ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಮತ್ತು ತತ್ವಗಳು ಸಾರ್ವಕಾಲಿಕ ಶ್ರೇಷ್ಠ ಹಾಗೂ ಪ್ರಸ್ತುತವಾಗಿವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗೀತ ಬಡಿಗೇರ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ರಾಮಾಯಣ ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥವಾಗಿದ್ದು ಅದರಿಂದ ಸತ್ಯ,ಕರುಣೆ ಕಲಿಯುವುದರ ಜೊತೆಗೆ ಕೆಟ್ಟ ಗುಣಗಳನ್ನು ಬಿಟ್ಟು ಸತ್ಪಥಕ್ಕೆ ಮರಳುವುದು ಎಂಬ ಮಹಾನ್ ಸಂದೇಶ ಇದರಲ್ಲಿ ಅಡಗಿದೆ ಎಂದು ವಿವರಿಸಿದರು.

ಸಾಹಿತಿ,ಸಂಶೋಧಕ ಹಾಗೂ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಕಮ್ ಡಾಟಾ ಆಪರೇಟರ್ ಸಾಯಿಬಾಬಾ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಉತ್ಸವಗಳಿಗೆ ಸೀಮಿತಗೊಳಿಸದೆ ನಮ್ಮ ದಿನನಿತ್ಯದ ಬದುಕಿನಲ್ಲಿ ಅವರ ತತ್ವದಾರ್ಶಗಳು ಅಳವಡಿಸಿಕೊಂಡಾಗ ಮಾತ್ರ ನಾವು ನೀವೆಲ್ಲರೂ ಬದುಕಿನಲ್ಲಿ ಯಶಸ್ವಿ ಕಾಣಲು ಸಾಧ್ಯ,ಅಲ್ಲದೆ ಸಮಾಜದಲ್ಲಿ ಪರಸ್ಪರ ಗೌರವ ಸಮಾನವತೆ ಮತ್ತು ಸೌಹಾರ್ದತೆ ಬೆಳೆಯಲು ಸಾಧ್ಯ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಗೌಡ ಸುಬೇದಾರ,ಮಾನಪ್ಪ ವಠಾರ,ಸೋಪಣ್ಣ ಊರಕಾಯಿ,ಶಿವಣ್ಣ ನಾಯ್ಕೋಡಿ,ಗ್ರಂಥ ಪಾಲಕ ವಿಶ್ವರಾಧ್ಯ ದೇಸಾಯಿ ಮಠ,ಚಂದಪ್ಪ ಹಳ್ಳಿ,ಈಶ್ವರ ಮಹಲ್ ರೋಜಾ,ಅಲಮಯ್ಯ ಪಡಶೆಟ್ಟಿ,ಕಲೀಮ್,ಶಂಭುಲಿಂಗಮ್ಯಾಗೇರಿ,ಭಾಗಣ್ಣ ಹೊಸಳ್ಳಿ,ಅಮರಪ್ಪ ಹೇರುಂಡಿ, ಭೀಮಣ್ಣ ಕಕ್ಕೇರಿ,ಅಂಬು ಮದರಿ,ಶಿವು ಮದರಿ,ಈರಪ್ಪ ಮೊರೆ,ಬಸಪ್ಪ ಪುರ್ಲೆ,ಹೊನ್ನಪ್ಪ ಪಣಿ,ಮಲ್ಲಿಕಾರ್ಜುನ ಹಂದಿಗನೂರ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.