ನಾ. ಸು ಹಡೀ೯ಕರ್ ಸೇವೆ ಅನನ್ಯ: ನಮೋಶಿ

ನಾ. ಸು ಹಡೀ೯ಕರ್ ಸೇವೆ ಅನನ್ಯ: ನಮೋಶಿ

ನಾ. ಸು ಹಡೀ೯ಕರ್ ಸೇವೆ ಅನನ್ಯ: ನಮೋಶಿ 

ಕಲಬುರಗಿ. ಮೇ. 7- ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತ ಸೇವಾದಳದ ಸಂಸ್ಥಾಪಕರಾದ ಪದ್ಮಭೂಷಣ ಡಾ॥ ನಾ.ಸು ಹಡೀ೯ಕರ್ ಅವರ ಸೇವೆ ಅನನ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷರಾದ ಶಶಿಲ್ ಜಿ. ನಮೋಶಿ ಹೇಳಿದರು.

ಅವರು ಇಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಕಲಬುರಗಿ ಹಾಗೂ ಭಾರತ ಸೇವಾದಳ ತಾಲೂಕ ಸಮಿತಿ ಕಲಬುರಗಿ ಅವರ ವತಿಯಿಂದ ಸೇವಾದಳದ ಕಚೇರಿಯಲ್ಲಿ ಏರ್ಪಡಿಸಿದ ಡಾ. ನಾರಾಯಣರಾವ ಸುಬ್ಬರಾವ ಹಾಡೀ೯ಕರ್ ಅವರ 137ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವಕರನ್ನು ಒಂದೆಡೆ ಸೇರಿಸಿ ರಾಷ್ಟ್ರಪ್ರೇಮ ಮತ್ತು ಹೋರಾಟದ ಹೆಜ್ಜೆಗಳನ್ನು ಡಾ॥ ನಾ.ಸು ಹಡೀ೯ಕರ್ ಅವರು ಸರ್ವರಿಗೂ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಭಾರತ ಸೇವಾ ದಳದ ಜಿಲ್ಲಾ ಸದಸ್ಯರಾದ ಮಂಜುನಾಥ ನಾಲ್ವಾರಕರ್ ಮಾತನಾಡಿ, ಇಂದಿನ ಯುವಕರಿಗೆ ಶಿಸ್ತು, ಸಂಘಟನೆ, ಸೇವಾ ಮನೋಭಾವನೆಯೊಂದಿಗೆ ಯುವಕರಿಗೆ ರಾಷ್ಟ್ರದ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ ಎಂದರು. ಪ್ರಾಸ್ತವಿಕವಾಗಿ ಮಾತನಾಡಿದ ಸೇವಾದಳದ ಜಿಲ್ಲಾ ಸಂಘಟಕರಾದ ಚಂದ್ರಶೇಖರ ಜಮಾದಾರ ಹಡೀ೯ಕರ್ ಅವರ ಜೀವನ ಸಾಧನೆಯ ಹಾಗೂ ಸೇವಾದಳದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಸಮಿತಿ ಸದಸ್ಯರಾದ ಶಿವಶರಣಪ್ಪ ಜಮಾದಾರ, ಭಾರತ ಸೇವಾದಳ ತಾಲೂಕ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ ಕಟ್ಟಿಮನಿ , ತಾಲೂಕ ಸಮಿತಿಯ ಕಾಯ೯ದಶಿ೯ಯಾದ ಗುರುಲಿಂಗಯ್ಯ ವಿಶ್ವನಾಥಮಠ, ಸದಸ್ಯರಾದ ನಾಗರಾಜ ನಂದೂರ, ಸಂಪನ್ಮೂಲ ಶಿಕ್ಷಕರಾದ ಲಕ್ಷೀಪುತ್ರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.