ಹಿರೇಮಠದ ಜಾತ್ರಾ ಮಹೋತ್ಸವ ನ.29ರಿಂದ

ಹಿರೇಮಠದ ಜಾತ್ರಾ ಮಹೋತ್ಸವ ನ.29ರಿಂದ

ಹಿರೇಮಠದ ಜಾತ್ರಾ ಮಹೋತ್ಸವ ನ.29ರಿಂದ

ನರೇಗಲ್ಲ: ಸ್ಥಳೀಯ ಹಿರೇಮಠದ ಜಾತ್ರಾ ಮಹೋತ್ಸವವು ನವೆಂಬರ್ 29ರಿಂದ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ನಡೆಯಲಿದೆ ಎಂದು ಮಠದ ಪೀಠಾಧ್ಯಕ್ಷರಾದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಜರುಗಿದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಧಾರ್ಮಿಕ ಆಚರಣೆಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗದೆ, ಸಮಾಜದಲ್ಲಿ ನೈತಿಕತೆ, ಸದಾಚಾರ, ಭಕ್ತಿ ಹಾಗೂ ಮಾನವೀಯ ಮೌಲ್ಯ ಬೆಳೆಸುವಂತಾಗಬೇಕು. ಮುಂದಿನ ವರ್ಷದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಿರೇಮಠದ ಪರಂಪರೆ ಹಾಗೂ ಶ್ರೀಗಳ ಸೇವಾ ಕಾರ್ಯ ಸ್ಮರಿಸುವ ಪುಣ್ಯಸ್ಮರಣೋತ್ಸವ ದಶಮಾನೋತ್ಸವ, ತಮ್ಮ ಜನೋತ್ಸವದ ಸುವರ್ಣ ಮಹೋತ್ಸವ ಹಾಗೂ ಪಟ್ಟಾಧಿಕಾರದ ರಜತ ಮಹೋತ್ಸವ ಆಚರಣೆಯೂ ಜರುಗಲಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಭಕ್ತರು, ಸಾರ್ವಜನಿಕರು ಹಾಗೂ ಮಠದ ಅಭಿಮಾನಿಗಳು ಸಹಕರಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಈ ಸಂದರ್ಭದಲ್ಲಿ ಗ್ರಂಥವೊಂದನ್ನು ಹೊರ ತರಲು ಉದ್ದೇಶಿಸಿದ್ದು, ಆ ಕಾರ್ಯವು ಬಹಳಷ್ಟು ಬೇಗನೆ ಪ್ರಾರಂಭಗೊಳ್ಳಲಿದೆ. ಜಾತ್ರಾ ಮಹೋತ್ಸವ ಧಾರ್ಮಿಕ ಚಿಂತನೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯೊಂದಿಗೆ ಸಮಾಜದಲ್ಲಿ ಸೌಹಾರ್ದತೆ ಹಾಗೂ ಭಕ್ತಿಭಾವ ವೃದ್ಧಿಸುವಂತಾಗಲಿ ಎಂದರು. ಈ ವರ್ಷ ಜಾತ್ರಾ ಮಹೋತ್ಸವ ಅತ್ಯಂತ ಸರಳ, ಸಂಕ್ಷಿಪ್ತ ರೀತಿಯಲ್ಲಿ ಆಚರಿಸಬೇಕು. ನಿತ್ಯವೂ ಅನ್ನದಾನವಿರುತ್ತದೆ. ವಿದ್ವಾಂಸರನ್ನು ಕರೆ ತಂದು ಅನೇಕ ವಿಷಯಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗುತ್ತಿದೆ.

ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಏರ್ಪಡಿಸಿ, ಸಿದ್ಧಾಂತ ಶಿಖಾಮಣಿ ಪ್ರವಚನದ ಮೂಲಕ ಜಾತ್ರೆ ಸಂಪನ್ನಗೊಳಿಸಬೇಕೆಂದು ಸಭೆ ನಿರ್ಧರಿಸಿತು. ಡಾ. ರಾಜೇಂದ್ರ ಗಚ್ಚಿನಮಠ, ಎಂ.ಎಸ್ ಧಡೇಸೂರಮಠ, ಹುಚ್ಚೀರಪ್ಪ ಈಟಿ, ಮುತ್ತಣ್ಣ ಪಲ್ಲೇದ, ಅರುಣ ಕುಲಕರ್ಣಿ, ಡಿ.ಎ ಅರವಟಗಿಮಠ, ಮೈಲಾರಪ್ಪ ಚಳ್ಳಮರದ, ಕಳಕಪ್ಪ ಕಳಕೊಣ್ಣವರ, ಈಶ್ವರ ಬೆಟಗೇರಿ, ಸೇರಿದಂತೆ ಸುತ್ತಮುತ್ತಲಿನ ಹಾಗೂ ಮಜಿರೆ ಹಳ್ಳಿಗಳ ಭಕ್ತರು ಇದ್ದರು.

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ