ಸ್ವಾತಂತ್ರ್ಯ ಹೋರಾಟಗಾರ ದಿ. ಮಹಾದೇವಪ್ಪ ಕಡೇಚೂರ್ ನಿವಾಸಕ್ಕೆ ಮಾಜಿ ಸಚಿವ ಸುನಿಲ್ ಕುಮಾರ್ ಭೇಟಿ - ಪುಷ್ಪಾರ್ಚನೆ

ಸ್ವಾತಂತ್ರ್ಯ ಹೋರಾಟಗಾರ ದಿ. ಮಹಾದೇವಪ್ಪ ಕಡೇಚೂರ್ ನಿವಾಸಕ್ಕೆ ಮಾಜಿ ಸಚಿವ ಸುನಿಲ್ ಕುಮಾರ್ ಭೇಟಿ - ಪುಷ್ಪಾರ್ಚನೆ

ಸ್ವಾತಂತ್ರ್ಯ ಹೋರಾಟಗಾರ ದಿ. ಮಹಾದೇವಪ್ಪ ಕಡೇಚೂರ್ ನಿವಾಸಕ್ಕೆ ಮಾಜಿ ಸಚಿವ ಸುನಿಲ್ ಕುಮಾರ್ ಭೇಟಿ - ಪುಷ್ಪಾರ್ಚನೆ

 ಕಲಬುರಗಿ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹೈದರಾಬಾದ್ ಸಂಸ್ಥಾನಾ ವಿಮೋಚನ ಹೋರಾಟಗಾರ ದಿ.ಮಹಾದೇವಪ್ಪ ಕಡೇಚೂರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾಜಿ ಸಚಿವರು ಹಾಗೂ ಬಿಜೆಪಿ ಶಾಸಕರಾದ ವಿ. ಸುನಿಲ್ ಕುಮಾರ್ ಕಾರ್ಕಳ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

     ಕಲಬುರಗಿಗೆ ಸೋಮವಾರ (ನ. 2 ರಂದು) ಮಾಜಿ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಬಿಜೆಪಿಯ ಹಿರಿಯ ನಾಯಕರಾಗಿದ್ದ ಮಹಾದೇವಪ್ಪ ಕಡೇಚೂರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಅವರು ಕಡೆಚೂರು ಬರೆದ ಕೃತಿಯನ್ನು ಯುವ ಮೋರ್ಚಾದ ಅಧ್ಯಕ್ಷನಾಗಿದ್ದ ವೇಳೆ ಕಲಬುರಗಿಯ ಸ್ವಾಮಿ ನಾರಾಯಣ ಶಾಲೆಯಲ್ಲಿ ಬಿಡುಗಡೆ ಮಾಡಿದ್ದು ಹಾಗೂ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವನಾಗಿದ್ದ ವೇಳೆ 2022 ರಲ್ಲಿ ಕಡೇಚೂರ್ ಅವರಂತಹ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ನನಗೆ ಧನ್ಯತೆಯ ಕ್ಷಣವಾಗಿದೆ. ಅವರ ಆದರ್ಶ ನಮ್ಮಂತಹ ಕಾರ್ಯಕರ್ತರಿಗೆ ಸ್ಪೂರ್ತಿ ಮತ್ತು ಪ್ರೇರಣೆ. ಅವರು ನಂಬಿದ ಮೌಲ್ಯಗಳಿಗೆ ಶಕ್ತಿ ತುಂಬುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ. ಮಹಾದೇವಪ್ಪ ಕಡೇಚೂರ್ ಅವರ ಕುರಿತಾದ "ಅನನ್ಯ ಮಹಾದೇವ" ಅಭಿನಂದನಾ ಗ್ರಂಥವು ಅವರ ಸಾಧನೆಯನ್ನು ಹೇಳುವ ಮತ್ತು ಚಿರಕಾಲ ದಾಖಲೆಯಾಗಿ ಉಳಿಯಬಲ್ಲ ಕೃತಿಯಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.

   ಉದ್ಯಮಿ ಹಾಗೂ ಮಹಾದೇವಪ್ಪ ಕಡೇಚೂರ್ ರ ಪುತ್ರ ವೆಂಕಟೇಶ್ ಮಹಾದೇವಪ್ಪ ಕಡೇಚೂರ್ ಅವರು ಸುನಿಲ್ ಕುಮಾರ್ ಅವರನ್ನು ಸ್ವಾಗತಿಸಿ ಮೈಸೂರು ಪೇಟ ತೊಡಿಸಿ,ಶಾಲು ಹಾಗೂಅನನ್ಯ ಮಹಾದೇವ ಕೃತಿ ನೀಡಿ ಗೌರವಿಸಿದರು. ಡಾ. ರಾಜೇಶ್ ಕಡೇಚೂರ್,ದಿನೇಶ್ ಕಡೇಚೂರ್, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಪ್ರಮೀಳಾ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.