ನೈಜ ಗಾಂಧೀಜಿಯನ್ನು ಅರಿಯರಿ: ಡಾ. ಕಿರಣ ಗಾಜನೂರು
ನೈಜ ಗಾಂಧೀಜಿಯನ್ನು ಅರಿಯಿರಿ ಡಾ.ಕಿರಣ್ ಗಾಜನೂರು
ನಗರದ ದೊಡ್ಡಪ್ಪ ಅಪ್ಪ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಕಲಬುರ್ಗಿಯ ಗಾಂಧಿ ವಿಚಾರ ವೇದಿಕೆ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ ಕಿರಣ್ ಗಾಜನೂರು ಅವರು ಮಾತನಾಡಿ
ಗಾಂಧೀಜಿಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಬಿಡಲಾಗುತ್ತಿದೆ . ರಾಜಕೀಯ ದುರುದ್ದೇಶಕ್ಕಾಗಿ ಈ ರೀತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ . ಗಾಂಧೀಜಿಯನ್ನು ಅರಿಯಬೇಕೆಂದರೆ ಅವರ ಮೂಲ ಕೃತಿಗಳನ್ನು ನಾವು ಓದಬೇಕು ಆಗ ಮಾತ್ರ ನೈಜ ಗಾಂಧೀಜಿ ನಮಗೆ ಅರ್ಥವಾಗುತ್ತಾರೆ ಎಂದು ನುಡಿದರು .
ಇನ್ನೋರ್ವ ಮುಖ್ಯ ಅತಿಥಿಗಳಾದ ಪ್ರಜಾವಾಣಿ ವರದಿಗಾರ ಮನೋಜಕುಮಾರ ಗುದ್ದಿ ಅವರು ಮಾತನಾಡಿ ಸತ್ಯ ಅಹಿಂಸೆ ಪ್ರಾಮಾಣಿಕತೆ ಗಾಂಧೀಜಿಯವರ ಮೂಲ ಮಂತ್ರವಾಗಿತ್ತು . ನ್ಯಾಯಮಾರ್ಗದಲ್ಲಿ ನಡೆಯಬೇಕು ಸೌಹಾರ್ದತೆಯಿಂದ ಬದುಕಬೇಕೆಂಬುದು ಅವರ ಸಂದೇಶವಾಗಿತ್ತು ಎಂದು ನುಡಿದರು .
ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿಗಳಾದ ಗಿರೀಶ ಪಾಟೀಲ್ ಅವರು ಮಾತನಾಡಿ ಗಾಂಧಿ ಎಂದರೆ ಇಂದಿನ ಯಾವುದೋ ಅಡ್ಡ ಹೆಸರಿನ ನಕಲಿ ಗಾಂಧಿಗಳಲ್ಲ ಗಾಂಧಿ ಪಕ್ಷಾತೀತವಾಗಿದ್ದಾರೆ ಧರ್ಮಾತೀತವಾಗಿದ್ದಾರೆ ಎಂದು ನುಡಿದರು .
ಅಧ್ಯಕ್ಷೀಯ ನುಡಿಗಳನ್ನಾಡಿದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಮಕೃಷ್ಣ ರೆಡ್ಡಿ ಅವರು ವಿಜ್ಞಾನ ತಂತ್ರಜ್ಞಾನದ ಇಂದಿನ ಯುಗದಲ್ಲಿಯೂ ಗಾಂಧೀಜಿ ಪ್ರಸ್ತುತವಾಗಿದ್ದಾರೆ . ಗಾಂಧೀಜಿಯ ಬದುಕಿನ ಮೌಲ್ಯಗಳು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿವೆ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂದೇಶ ನೀಡಿದರು .
ಪೂರ್ವಿ ಮತ್ತು ಗೌರಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯರ ವಿನೋದಕುಮಾರ್ ಎಲ್ ಪತಂಗೆ ಅವರು ಸ್ವಾಗತಿಸಿದರೆ ಉಪನ್ಯಾಸಕ ಶಿವರಾಜ ದಂಡೋತಿಯವರು ವಂದನಾರ್ಪಣೆಗೈದರು. ಗಾಂಧಿ ವಿಚಾರ ವೇದಿಕೆಯ ಬಸವಪ್ರಭು ಶಾಂತರಸ , ಕಿರಣ ಪಾಟೀಲ, ಸುರೇಶ್ ಬಡಿಗೇರ, ಡಾ.ಸಂಗನಗೌಡ ಮತ್ತು ಕಾಲೇಜಿನ ಸಿಬ್ಬಂದಿ ಹಾಜರಿದ್ದರು .ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು .

