ಸೆ.7ಕ್ಕೆ ದಸರಾ ಕ್ರೀಡಾಕೂಟ : ಆನ್ ಲೈನ್ ನೋಂದಣಿ ಕಡ್ಡಾಯ

ಸೆ.7ಕ್ಕೆ ದಸರಾ ಕ್ರೀಡಾಕೂಟ : ಆನ್ ಲೈನ್ ನೋಂದಣಿ ಕಡ್ಡಾಯ

ಸೆ.7ಕ್ಕೆ ದಸರಾ ಕ್ರೀಡಾಕೂಟ : ಆನ್ ಲೈನ್ ನೋಂದಣಿ ಕಡ್ಡಾಯ 

ಚಿಂಚೋಳಿ : 2026-27ನೇ ಸಾಲಿನ ತಾಲೂಕ ಮಟ್ಟದ ದಸರಾ ಕ್ರೀಡಾಕೂಟನ್ನು ಸೆ.7 ರಂದು ತಾಲೂಕ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾಂಗಣದ ವ್ಯವಸ್ಥಾಪಕ ಮಲ್ಲಿಕಾರ್ಜುನ್ ನೆಲ್ಲಿ ತಿಳಿಸಿದ್ದಾರೆ. 

ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್, ವಾಲಿಬಾಲ್, ಫುಟಬಾಲ್, ಖೋಖೋ, ಕಬಡ್ಡಿ, ಥ್ರೋಬಾಲ್ ಮತ್ತು ಯೋಗ ಕ್ರೀಡೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಭಾಗವಹಿಸುವ ಕ್ರೀಡಾಪಟುಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿದ್ದವರು ಸ್ವ ಇಚ್ಚೆಯಿಂದ ಭಾಗವಹಿಸುವವರು ರಕ್ಷಣಾ ಪಡೆ ಹಾಗೂ ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳಾಗಿರಬಾರದು. 

ಸ್ಪರ್ಧೆಗಳ ವಿವರ : 

100, 200, 400, 800, 1500, 5000 ಮತ್ತು 10000 ಮೀ. ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್ ಹಾಗೂ ರಿಲೇಗಳಲ್ಲಿ ಪುರುಷ ಮತ್ತು ಮಹಿಳೆಯರು ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಕಡ್ಡಾಯವಾಗಿದ್ದು, https://dasaracmcup.in/ ಲಿಂಕ್ ಬಳಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳದ ಕ್ರೀಡಾಪಟುಗಳಿಗೆ ಯಾವುದೇ ಕಾರಣಕ್ಕೂ ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ ಎಂದು ಕ್ರೀಡಾಂಗಣದ ವ್ಯವಸ್ಥಾಪಕ ನೆಲ್ಲಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಆಸಕ್ತ ಕ್ರೀಡಾಪಟುಗಳು 9945750794 ನಂಬರಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.