ಬರ ಪರಿಸ್ಥಿತಿ ಹಿನ್ನೆಲೆ: ಶಿರಡಿ ಸಾಯಿ ಬಾಬಾ, ಶನಿ ಶಿಗಣಾಪೂರದಲ್ಲಿ ವಿಶೇಷ ಪೂಜೆ

ಬರ ಪರಿಸ್ಥಿತಿ ಹಿನ್ನೆಲೆ: ಶಿರಡಿ ಸಾಯಿ ಬಾಬಾ, ಶನಿ ಶಿಗಣಾಪೂರದಲ್ಲಿ ವಿಶೇಷ ಪೂಜೆ

ಬರ ಪರಿಸ್ಥಿತಿ ಹಿನ್ನೆಲೆ: ಶಿರಡಿ ಸಾಯಿ ಬಾಬಾ, ಶನಿ ಶಿಗಣಾಪೂರದಲ್ಲಿ ವಿಶೇಷ ಪೂಜೆ

ಔರಾದ(ಬಿ) ಕ್ಷೇತ್ರದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶಿರಡಿ ಸಾಯಿ ಬಾಬಾ ದೇವಸ್ಥಾನ ಹಾಗೂ ಶನಿ ಶಿಂಗಣಾಪೂರದ ಶನೇಶ್ವರ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಹಾಗೂ ಅರ್ಚನೆ ನೆರವೇರಿಸಿದರು.

ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿ ಬರ ಪರಿಸ್ಥಿತಿ ದೂರವಾಗಬೇಕು. ರೈತರು ಸಂಕಷ್ಟದಿಂದ ಹೊರಬಂದು ಉತ್ತಮ ಬೆಳೆ ಪಡೆಯುವಂತಾಗಬೇಕು ಹಾಗೂ ರೈತರ ಕುಟುಂಬಗಳಲ್ಲಿ ನೆಮ್ಮದಿ ನೆಲೆಸಬೇಕು ಎಂದು ಸಾಯಿ ಬಾಬಾ ಹಾಗೂ ಶನೇಶ್ವರನಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ನೋವನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಮರ್ಪಕವಾಗಿ ಧಾವಿಸದೆ, ಅರೆಕಾಸಿನ ಪರಿಹಾರ ಘೋಷಿಸಿ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಸಂಕಷ್ಟಕ್ಕೆ ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದ್ದೇನೆ. ದೇವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ರೈತರ ಕೈ ಬಿಡುವುದಿಲ್ಲ. ರೈತರ ಪರವಾಗಿ ನನ್ನ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.