ಹೋರಾಟದ ಇತಿಹಾಸ ಅರಿತುಕೊಳ್ಳಿ - ಡಾ : ಚಂದ್ರಶೇಖರ ಸುಬೇದಾರ.

ಹೋರಾಟದ ಇತಿಹಾಸ ಅರಿತುಕೊಳ್ಳಿ - ಡಾ : ಚಂದ್ರಶೇಖರ ಸುಬೇದಾರ.

ಹೋರಾಟದ ಇತಿಹಾಸ ಅರಿತುಕೊಳ್ಳಿ - ಡಾ : ಚಂದ್ರಶೇಖರ ಸುಬೇದಾರ.

ಶಹಪುರ:ಸ್ವಾತಂತ್ರ್ಯ,ಸಮಾನತೆಯ ಜೊತೆಗೆ ಹಕ್ಕುಗಳಿಗಾಗಿ ನಡೆದ ಹೋರಾಟಗಳು ತ್ಯಾಗ ಮತ್ತು ಬಲಿದಾನಗಳು ಕುರಿತಾದ ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ ಎಂದು ಡಾ.ಚಂದ್ರಶೇಖರ್ ಸುಬೇದಾರ ಹೇಳಿದರು.

ತಾಲೂಕಿನ ಸಗರ ಗ್ರಾಮದ ಚಾವಡಿ ಕಟ್ಟೆಯಲ್ಲಿ 79 ನೇ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ದೇಶಭಕ್ತಿ ಜವಾಬ್ದಾರಿಯ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಬೂದೆಪ್ಪ ಉಳ್ಳಿ ಮಾತನಾಡಿ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರಾದ ಅಚ್ಚಪ್ಪಗೌಡ ಸುಬೇದಾರ ಅವರಆದರ್ಶ,ತತ್ವ,ಸಿದ್ಧಾಂತಗಳು

ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿವೆ ಎಂದು ನುಡಿದರು,ಹೈದರಾಬಾದ್ ಕರ್ನಾಟಕ ಹೋರಾಟಕ್ಕಾಗಿ ಹಗಲಿರುಳು ಶ್ರಮಿಸಿದ ಅಚ್ಚಪ್ಪ ಗೌಡ ಸುಬೇದಾರ ಅವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು.

ಈ ಸಂದರ್ಭದಲ್ಲಿ ವರ್ತಕರಾದ ಬಾಪೂಜಿ ಹೊನಕಲ್,ಸಂಗಣ್ಣ ತುಂಬಗಿ,ಪಿಡ್ಡಪ್ಪ ನಂದಿಕೋಲ್,ಸಾಹೇಬಣ್ಣ ಜಾಯಿ,ಪ್ರಕಾಶ್ ದೇಸಾಯಿ,ನಿಂಗನಗೌಡ ಮಾಲಿ ಪಾಟೀಲ್,ಸಂತೋಷಗೌಡ ಸುಬೇದಾರ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.