ಸಿರಿಗನ್ನಡಂ ಬಾಳ್ಗೆಯಾಗಲು ಕನ್ನಡವೇ ಉಸಿರಾಗಬೇಕು : ಪ್ರೊ. ಶಶಿಕಾಂತ ಎಸ್. ಉಡಿಕೇರಿ
ಸಿರಿಗನ್ನಡಂ ಬಾಳ್ಗೆಯಾಗಲು ಕನ್ನಡವೇ ಉಸಿರಾಗಬೇಕು :
ಪ್ರೊ. ಶಶಿಕಾಂತ ಎಸ್. ಉಡಿಕೇರಿ
ಕಲಬುರಗಿ: ಕನ್ನಡ ಭಾಷೆ ಶ್ರೀಮಂತವಾಗಿದೆ. ಕನ್ನಡಿಗರ ಉಸಿರಾಗಿರುವ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು. ‘ಸಿರಿಗನ್ನಡಂ ಗೆಲ್ಗೆಯಂತೆ ಸಿರಿಗನ್ನಡಂ ಬಾಳ್ಗೆಯಾಗಲು ಕನ್ನಡ ಬಾಷೆ ಪತ್ರಿಯೊಬ್ಬರ ಉಸಿರಾಗಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್ ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಕನ್ನಡಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಮಾತನಾಡಿದರು. ಕನ್ನಡ ಶ್ರೇಷ್ಠ ಬಾಷೆಯಾಗಿದ್ದು, ಮನೆಗಳಿಂದಲೇ ಕನ್ನಡ ಮಾತನಾಡಬೇಕು. ಪೂರ್ವ ಪ್ರಾಥಮಿಕ ಶಿಕ್ಷಣ ಹಂತದಿAದಲೇ ಕನ್ನಡ ಅಳವಡಿಕೆ ಆಗಬೇಕು. ಕಾನ್ವೆಂಟ್ ಸಂಸ್ಕೃತಿಯಿAದ ಕನ್ನಡ ಭಾಷೆಗೆ ತೊಡಕಾಗಬಾರದು. ಕೋರಿಯಾ, ಜಪಾನ್, ಜರ್ಮನಿ, ಚೀನಾ ಮುಂತಾದ ದೇಶಗಳು ಅಲ್ಲಿನ ಮಾತೃಭಾಷೆಯಲ್ಲಿ ಶಿಕ್ಷಣ ಬೋಧಿಸುತ್ತಾರೆ. ಆದರೆ, ಕರ್ನಾಟಕದಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುವ ಮತ್ತು ಬರೆಯಲು ಸಾಧ್ಯವಾಗುತ್ತಿಲ್ಲವೇಕೆ? ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದೇ ಕನ್ನಡ ಭಾಷೆಗಿರುವ ವಿಶೇಷತೆ. ಕನ್ನಡ ಉಳಿಸಿ ಬೆಳೆಸಲು ಕನ್ನಡ ಶಿಕ್ಷಕರು ಮಾತ್ರವಲ್ಲ. ಕನ್ನಡಿಗರೆಲ್ಲರು ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿ ಭಾಗವಹಿಸಬೇಕು ಎಂದರು.
ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್. ಟಿ. ಪೋತೆೆ ಮುಖ್ಯ ಅತಿಥಿಯಾಗಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಎಂದರೆ ಸಮಗ್ರ ಕನ್ನಡಿಗರ ಹಬ್ಬ. ಕನ್ನಡ ಪ್ರದೇಶ ಕರ್ನಾಟಕದಲ್ಲಿ ಕನ್ನಡಿಗರ ಬದುಕು, ಸೌಹಾರ್ದ ಮತ್ತು ಸಾಮರಸ್ಯದ ಬೀಡಾಗಿದೆ. ಸ್ವಾಭಿಮಾನದ ಸಂಕೇತವಾಗಿರುವ ಈ ನಾಡು ಶೌರ್ಯ ಸಾಹಸಕ್ಕೆ ಹೆಸರಾಗಿದೆ. ಕನ್ನಡದ ಹಿರಿಮೆಯನ್ನು ಬಾದಾಮಿ ಶಾಸನದಲ್ಲಿ ಗುರುತಿಸಬಹುದು. ಕಾಯಕವೇ ಕೈಲಾಸವೆಂದ ಬಸವಣ್ಣ ದುಡಿವ ವರ್ಗ ಕಟ್ಟಿಕೊಂಡು ಚಳುವಳಿ ರೂಪಿಸಿ ಕನ್ನಡ ಭಾಷೆ ಮೂಲಕ ಸಮೂಹ ಬೆಳೆಸಿದರು. ಭಾಷಾವಾರು ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯವನ್ನು ೧೯೭೩ ನವೆಂಬರ್ ೧ ರಂದು ಕರ್ನಾಟಕವೆಂದು ನಾಮಕರಣ ಮಾಡಲಾಯಿತು. ಈ ನೆಲದ ವಚನಕಾರರು, ದಾಸರು, ತತ್ವಪದಕಾರರು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಶಕ್ತಿಯಾಗಿದ್ದರು ಎಂದು ಕರ್ನಾಟಕ ಏಕೀಕರಣ ಚಳುವಳಿ, ಕನ್ನಡ ಭಾಷೆ ಮಹತ್ವವನ್ನು ವಿವರಿಸಿದರು.
ದೈಹಿಕ ಶಿಕ್ಷಣ ವಿಭಾಗದ ಪ್ರಿನ್ಸಿಪಾಲ್ ಡಾ. ಹನುಮಂತ ಜಂಗೆ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಕುಲಸಚಿವ ಮೊಹಮ್ಮದ್ ಶಕೀಲ್, ಕೆ.ಎ.ಎಸ್., ಮೌಲ್ಯಮಾಪನ ಕುಲಸಚಿವೆ ಪ್ರೊ. ಅಶ್ವಿನಿ ಜಾನೆ, ವಿತ್ತಾಧಿಕಾರಿ ಶ್ರೀಮತಿ. ಜಯಂಬಿಕಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರಾದ ಪ್ರೊ. ಬಾಬಣ್ಣ ಹೂವಿನಬಾವಿ, ಪ್ರೊ. ಟಿ. ಶಂಕರಪ್ಪ, ಪ್ರೊ. ದೇವಿದಾಸ ಮಾಲೆ, ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಪ್ರೊ. ಕೆ. ಸಿದ್ದಪ್ಪ, ಪ್ರೊ. ರಮೇಶ್ ರಾಥೋಡ್, ಪ್ರೊ. ಬಸವರಾಜ ಸಣ್ಣಕ್ಕಿ, ಪ್ರೊ. ಆನಂದ ನಾಯಕ್, ಡಾ. ಎನ್. ಜಿ. ಕಣ್ಣೂರು, ಡಾ. ಟಿ ನಿಂಗಣ್ಣ, ಪ್ರೊ. ಶಶಿಕಾಂತ್ ಮಜಗಿ, ಪ್ರೊ. ವಿಜಯಕುಮಾರ್ ಮಲಶೆಟ್ಟಿ, ಅತಿಥಿ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳಾದ ಬಿ.ಎಂ.ರುದ್ರವಾಡಿ, ಪ್ರಕಾಶ್ ಹದನೂರು, ರಿಷಿಕುಮಾರ್ ಬಸಣ್ಣ ಉದನೂರ, ಅಮೃತ ಜವಳಕರ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಡಾ. ಲಕ್ಷಿö್ಮಶಂಕರ್ ಜೋಷಿ ಮತ್ತು ಡಾ. ಜಯದಾನಮ್ಮ ಸಂಗಡಿಗರು ರಾಷ್ಟçಗೀತೆ, ನಾಡಗೀತೆ ಹಾಗೂ ಕನ್ನಡಪರ ಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ. ಎಂ.ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಬಾಕ್ಸ್: ಅಖಂಡ ಕರ್ನಾಟಕವನ್ನು ಒಗ್ಗೂಡಿಸುವಲ್ಲಿ ಆಲೂರು ವೆಂಕಟರಾಯರು, ಗಂಗಾಧರರಾವ್ ದೇಶಪಾಂಡೆ, ಪಾಟೀಲ ಪುಟ್ಟಪ್ಪ, ಕೆ.ಸಿ. ರೆಡ್ಡಿ, ಹರ್ಡಿಕರ್ ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಕುವೆಂಪು, ಬಿ.ಎಂ.ಶ್ರೀ ಮುಂತಾದವರ ಶ್ರಮವಿದೆ. ಕನ್ನಡ ಅಕ್ಷರ ಸಮೂಹವಲ್ಲ. ಜನಸಾಮಾನ್ಯರ ಬದುಕು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ, ಕನ್ನಡ ನೆಲದ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಸಾರುತ್ತದೆ. ಆದರಿಂದಲೇ ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಅಗ್ರಮಾನ್ಯ. ವಿನೋಬಬಾವೆ ಹೇಳಿರುವಂತೆ ‘ಜಗತ್ತಿನ ಲಿಪಿಗಳ ರಾಣಿ ಕನ್ನಡ ಭಾಷೆಯಾಗಿದೆ. ಕನ್ನಡ ಭಾಷೆ ಮಾತ್ರ ಮಾತನಾಡಿದಂತೆ ಬರೆಯುವ, ಬರೆದಂತೆ ಮಾತನಾಡುವದೇ ಇದರ ವೈಶಿಷ್ಠö್ಯತೆ’ ಎಂದು ಬಣ್ಣಿಸಿದ್ದಾರೆ. ಕನ್ನಡವನ್ನು ಕಲಿಯುವ, ಮಾತನಾಡುವ ಮತ್ತು ಪೋಷಿಸುವುದು ಕನ್ನಡಿಗರ ಜವಾಬ್ದಾರಿ.
ಪ್ರೊ. ಎಚ್. ಟಿ. ಪೋತೆÉ ಡೀನರು, ಕಲಾ ನಿಕಾಯ, ಗುವಿಕ.

