ನಾಡು ನುಡಿಗಾಗಿ ಎಲ್ಲರೂ ಶ್ರಮಿಸೋಣ - ಸಾಯಿಬಾಬಾ ಅಣಬಿ.
ನಾಡು ನುಡಿಗಾಗಿ ಎಲ್ಲರೂ ಶ್ರಮಿಸೋಣ - ಸಾಯಿಬಾಬಾ ಅಣಬಿ.
ಶಹಾಪುರ : ನಾಡಿನ ನೆಲ, ಜಲ,ಕಲೆ,ಸಾಹಿತ್ಯ,ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗಾಗಿ ನಾವು ನೀವೆಲ್ಲರೂ ಶ್ರಮಿಸೋಣ ಎಂದು ಯುವ ಸಾಹಿತಿ ಸಾಯಿಬಾಬಾ ಅಣಬಿ ಹೇಳಿದರು.
ಸಗರ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಒಗ್ಗೂಡಿಸಲು ಒಂದು ದೊಡ್ಡ ಹೋರಾಟವೇ ನಡೆಯಿತು, ಹೋರಾಟದ ಪ್ರತಿಫಲವೇ ಇಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದು ಸ್ಮರಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಭೀಮಾಶಂಕರ್ ಹುಲಕಲ್ ಮಾತನಾಡಿ, ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಕಾಲದ ಶ್ರೀಮಂತಿಕೆ ಭಾಷೆಗಳಲ್ಲಿ ಪ್ರಮುಖವಾಗಿದ್ದು ನಮಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು,ಬೇಂದ್ರೆ,ಮಾಸ್ತಿ, ಅಯ್ಯಂಗಾರ್,ಮುಂತಾದ ಮಹಾನ್ ಸಾಹಿತಿಗಳು ನಮ್ಮ ನಾಡಿನ ಹೆಮ್ಮೆಯ ಕುವರರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷಗೌಡ ಸುಬೇದಾರ, ಸಂಗಮೇಶ್ ಕನಗುಂಡ,ಈಶ್ವರ್ ರೋಜಾ,ಭೀಮರಾಯ ಉಮರದೊಡ್ಡಿ,ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಅಮರಪ್ಪ ಹೇರುಂಡಿ,ಭೀಮಣ್ಣ ಕಕ್ಕೇರಿ,ಗ್ರಂಥಪಾಲಕ ಈಶ್ವರ ರಾಜ ದೇಸಾಯಿಮಠ, ಸೇರಿದಂತೆ ಎನ್,ಆರ್,ಎಲ್,ಎಂ ಸಿಬ್ಬಂದಿಯವರು ಉಪಸಿತರಿದ್ದರು.

