ಈಡಿಗರ ಅಕ್ಕಮ್ಮ, ಶರಣ ಹೆoಡದ ಮಾರಯ್ಯ ಪ್ರಶಸ್ತಿ ಪ್ರದಾನಕ್ಕೆ ನ.2ರಂದು ಮಾಜಿ ಸಚಿವ ಸುನಿಲ್ ಕುಮಾರ್ ಕಲಬುರಗಿಗೆ

ಈಡಿಗರ ಅಕ್ಕಮ್ಮ, ಶರಣ ಹೆoಡದ ಮಾರಯ್ಯ ಪ್ರಶಸ್ತಿ ಪ್ರದಾನಕ್ಕೆ ನ.2ರಂದು ಮಾಜಿ ಸಚಿವ ಸುನಿಲ್ ಕುಮಾರ್ ಕಲಬುರಗಿಗೆ

ಈಡಿಗರ ಅಕ್ಕಮ್ಮ, ಶರಣ ಹೆoಡದ ಮಾರಯ್ಯ ಪ್ರಶಸ್ತಿ ಪ್ರದಾನಕ್ಕೆ ನ.2ರಂದು ಮಾಜಿ ಸಚಿವ ಸುನಿಲ್ ಕುಮಾರ್ ಕಲಬುರಗಿಗೆ

ಕಲಬುರಗಿ : ಚಿತ್ತಾಪುರ ಕರದಾಳ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠ ಹಾಗೂ ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಕೊಡ ಮಾಡುವ ಶಿವಶರಣೆ ಈಡಿಗರ ಅಕ್ಕಮ್ಮ ಹಾಗೂ ಶರಣ ಹೆಂಡದ ಮಾರಯ್ಯ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ಈಗ ಮಹಾ ಮಂಡಳಿಯ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಮಾಜಿ ಸಚಿವರಾದ ಶಾಸಕ ಸುನಿಲ್ ಕುಮಾರ್ ಕಲಬುರಗಿಗೆ ನ. 2 ರಂದು ಸೋಮವಾರ ಆಗಮಿಸಲಿದ್ದಾರೆ ಎಂದು ಶಕ್ತಿ ಪೀಠದ ಪೂಜ್ಯರಾದ ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

     ಕಲಬುರಗಿಯ ಹೋಟೆಲ್ ಬೃಂದಾವನ ಗ್ರಾಂಡ್ ನ ಬಲದೇವ್ ಬ್ಯಾoಕ್ವೆಟ್ ಹಾಲ್ ನಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಶ್ರೀ ದಾಕ್ಷಾಯಿಣಿ ಅಮ್ಮ ಸೇರಿದಂತೆ 9 ಜನ ವಿವಿಧ ಮಹಿಳಾ ಸಾಧಕರಿಗೆ ಶಿವಶರಣೆ ಈಡಿಗರ ಅಕ್ಕಮ್ಮ ಪ್ರಶಸ್ತಿ ಹಾಗೂ ಹನ್ನೊಂದು ಮಂದಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶರಣ ಹೆಂಡದ ಮಾರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಶಿವಶರಣೆ ಈಡಿಗರ ಅಕ್ಕಮ್ಮ ಕುರಿತ ಕೃತಿಯನ್ನು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಬಿಡುಗಡೆ ಮಾಡಲಿದ್ದಾರೆ. ಡಾಕ್ಟರ್ ಸದಾನಂದ ಪೆರ್ಲ ಶಿವಶರಣೆ ಈಡಿಗರ ಅಕ್ಕಮ್ಮನ ಕುರಿತಾಗಿ ಹಾಗೂ ಡಾಕ್ಟರ್ ಶಿವ ರಂಜಾನ್ ಸತ್ಯಂಪೇಟೆ ಶರಣಹೆಂಡದ ಮಾರಯ್ಯ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬನಹಟ್ಟಿಯ ಶಿವಸಿಂಪಿ ಸಮಾಜದ ಪೂಜ್ಯರಾದ ಮಹಾಂತ ದೇವರು 12ನೇ ಶತಮಾನದ ಅನುಭವ ಮಂಟಪದ ಶರಣರ ಪರಿಚಯ ಪ್ರವಚನ ನೀಡಲಿದ್ದಾರೆ 

 ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್, ಮಾಜಿ ಸಚಿವ ಮಾಲಿಕಯ್ಯ ವಿ ಗುತ್ತೇದಾರ್, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಶಾಸಕರಾದ ಬಸವರಾಜ್ ಮತ್ತಿಮೂಡು ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ಯುವ ಮುಖಂಡ ಚಂದು ಪಾಟೀಲ್ ಸತೀಶ್ ಗುತ್ತೇದಾರ್, ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ರಾಜ್ಯ ಅಧ್ಯಕ್ಷ ತಿಪ್ಪೇಸ್ವಾಮಿ ಚಿತ್ರದುರ್ಗ, ಗೌರವಾಧ್ಯಕ್ಷರಾದ ಬಿ ಎಚ್ ಮಂಚೇಗೌಡ, ಪ್ರಧಾನ ಕಾರ್ಯದರ್ಶಿ ಡಿ. ಆರ್ ಹನುಮಂತರಾಜು ಅಶೋಕ್ ಗುತ್ತೇದಾರ್ ಬಡದಾಳ್, ಮಹಾದೇವ ಗುತ್ತೇದಾರ್ ವೆಂಕಟೇಶ್ ಎಂ ಕಡೇಚೂರ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 *ಈಡಿಗರ ಅಕ್ಕಮ್ಮ ಪ್ರಶಸ್ತಿ ಪುರಸ್ಕೃತರು*:

 ಮಾತೋಶ್ರೀ ದಾಕ್ಷಾಯಿಣಿ ಅಮ್ಮ ( ಶಿಕ್ಷಣ- ಧಾರ್ಮಿಕ) ಅಮೂಲ್ಯ ಸಂಗಪ್ಪ ಶೆಟ್ಟಿ( ಶಿಕ್ಷಣ), ಶಿಫಾಲಿ ಅಜಯ್ ಗುತ್ತೇದಾರ್( ವೈದ್ಯಕೀಯ) ವನಿತಾ ಚಂದ್ರಕಾಂತ ಗುತ್ತೇದಾರ್( ಧಾರ್ಮಿಕ ಶಿಕ್ಷಣ ಯೋಗ ಸಮಾಜ ಸೇವೆ ) ಡಾ. ಗೀತಾ ಎಸ್ ತಳವಾರ( ಸಾಹಿತ್ಯ ಕ್ಷೇತ್ರ ), ಕಾಶಿಬಾಯಿ ಸಿ.ಗುತ್ತೇದಾರ್ ಪಾಳಾ (ಮಾಧ್ಯಮ ಕ್ಷೇತ್ರ) , ಲಲಿತಾಬಾಯಿ ಜಿ ಸಿದ್ದಯ್ಯ ಗುತ್ತೇದಾರ್ (ಮಹಿಳಾ ಸಬಲೀಕರಣ )

 *ಶರಣಹೆಂಡದ ಮಾರಯ್ಯ ಪ್ರಶಸ್ತಿ ಪುರಸ್ಕೃತರು* :

 ಕಾಶಿನಾಥ ಗುತ್ತೇದಾರ್ (ಪತ್ರಿಕಾ ಕ್ಷೇತ್ರ ) ಪ್ರವೀಣ ಶಿವಯ್ಯ ಗುತ್ತೇದಾರ್ (ಉದ್ಯಮಿ) ಅಶೋಕ್ ಗುತ್ತೇದಾರ್ ಭೀಮಳ್ಳಿ (ಸಮಾಜ ಸೇವೆ), ಮಹೇಶ್ ಮಹಾದೇವಪ್ಪ ಕಡೇ ಚೂರ್( ಕಸದಿಂದ ರಸ ಕಲಾವಿದ), ಶಂಕರ್ ಎಚ್ ಕಟ್ಟಹಳ್ಳಿ (ಹೋರಾಟಗಾರರು) ಮರಣೋತ್ತರ, ಸಿದ್ದಯ್ಯ ಗುತ್ತೇದಾರ್, ಸಿದ್ದಯ್ಯ ಆರ್. ಗುತ್ತೇದಾರ್ ಯಳವಂತಗಿ (ಸಮಾಜ ಸೇವೆ) ಮರಣೋತ್ತರ, ನಿಂಗಣ್ಣ ವಿಶ್ವಕರ್ಮ ಶಿಲ್ಪಿ ನಡುವಿನಹಳ್ಳಿ (ಶಿಲ್ಪಕಲಾ ಕ್ಷೇತ್ರ) ರುಕ್ಕಪ್ಪ ಕಾಂಬಳೆ ಕಲಬುರಗಿ (ಸಮಾಜ ಸೇವೆ) ಈರಣ್ಣ ಹಡಪದ ಸಣ್ಣೂರ (ಸಮಾಜ ಸೇವೆ), ಬಸವರಾಜ್ ಎಂ ರಾವೂರ್ (ಹಿಂದುಳಿದ ವರ್ಗಗಳ ಸಂಶೋಧನ ಕ್ಷೇತ್ರ) ರವೀಂದ್ರ ಕೃಷ್ಣಯ್ಯ ಗುತ್ತೇದಾರ್ ಕಪನೂರ(ಹೋರಾಟಗಾರರು ), ಶ್ರೀಶೈಲ್ ಮಲ್ಲಯ್ಯ ಗುತ್ತೇದಾರ್ ತೆಲ್ಲೂರು (ಸಂಗೀತ ಕ್ಷೇತ್ರ)