371ಜೆ ರೂವಾರಿ ದಿ. ವೈಜಿನಾಥ ಪಾಟೀಲ್ ರವರ 6ನೇ ಪುಣ್ಯಸ್ಮರಣೆ

371ಜೆ ರೂವಾರಿ ದಿ. ವೈಜಿನಾಥ ಪಾಟೀಲ್ ರವರ 6ನೇ ಪುಣ್ಯಸ್ಮರಣೆ

371ಜೆ ರೂವಾರಿ ದಿ. ವೈಜಿನಾಥ ಪಾಟೀಲ್ ರವರ 6ನೇ ಪುಣ್ಯಸ್ಮರಣೆ ಇಂದು ಜರುಗಿತು 

ಪುತ್ರ ಡಾ. ವಿಕ್ರಂ ಪಾಟೀಲ್, ಗೌತಮ್ ಪಾಟೀಲ್, ಡಾ. ಬಸವೇಶ ಪಾಟೀಲ್ ರಿಂದ ಪೂಜೆ ಕೈಂಕರ್ಯಗಳು ಪೂರೈಸಿ ಅನ್ನ ಪ್ರಸಾದ ವಿತರಣೆ 

ಚಿಂಚೋಳಿ : 371ಜೆ ಹೋರಾಟದ ರೂವಾರಿ ಮಾಜಿ ಸಚಿವ ದಿ. ವೈಜಿನಾಥ ಪಾಟೀಲ್ ಅವರ 6ನೇ ವರ್ಷದ ಪೂಣ್ಯ ಸ್ಮರಣೆ ಕಾರ್ಯಕ್ರಮ ಕುಟುಂಬದ ಸದಸ್ಯರುಗಳಿಂದ ಜರುಗಿತು. 

ಪಟ್ಟಣದಲ್ಲಿರುವ ದಿ.ಶ್ರೀಮತಿ ಜ್ಞಾನೇಶ್ವರಿ ದಿ. ವೈಜಿನಾಥ ಪಾಟೀಲ್ ಸ್ಮಾರಕಕ್ಕೆ ಕುಟುಂಬದ ಸದಸ್ಯರು ಪೂಜೆ ಕೈಂಕರ್ಯಗಳು ಜರುಗಿಸಿ ಅನ್ನ ಪ್ರಸಾದ ವಿತರಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಹಾಗೂ ಔಉದ್ಯೋಗಿಕ ಮತ್ತು ಸಮಗ್ರ ಅಭಿವೃದ್ದಿಗೆ 371ಜೆ ಮೀಸಲಾತಿ ಹೋರಾಟಗಳು ನಡೆಸಿ ಈ ಭಾಗಕ್ಕೆ ಮೀಸಲಾತಿ ಕಲ್ಪಿಸಿಕೊಟ್ಟಿದ್ದ ನಾಯಕರು ದಿವಗಂತ ವೈಜಿನಾಥ ಪಾಟೀಲ್ ಆಗಿದರು. ಇಂತಹ ಹೋರಾಟದ ರೂವಾರಿ ಆಗಿರುವ ದಿ. ಪಾಟೀಲ್ ರ ಗರಡಿಯಲ್ಲಿ ಬೆಳೆದು ರಾಜಕೀಯ ಬದುಕು ಕಟ್ಟಿಕೊಂಡಿರುವ ವಿವಿಧ ಜಿಲ್ಲೆಗಳ ಅನೇಕ ರಾಜಕೀಯ ಮುಖಂಡರುಗಳು, ಅಭಿಮಾನಿಗಳು, ಹಿತೈಷಿಗಳು ವಿವಿಧ ಪಕ್ಷಗಳ ರಾಜಕೀಯ ನಾಯಕರುಗಳು ಆಗಮಿಸಿ ಸ್ಮಾರಕಕ್ಕೆ ಪುಷ್ಪ ನಮನಗಳನ್ನು ಅರ್ಪಿಸಿದರು.

ದಿ. ಶ್ರೀಮತಿ ಜ್ಞಾನೇಶ್ವರಿ ದಿ. ವೈಜಿನಾಥ ಪಾಟೀಲ್ ಅವರ ಪುತ್ರಿಯರಾದ ಭಾರತಿ ಉಮೇಶ ಪಾಟೀಲ್, ಆರತಿ ವಿಶ್ವನಾಥ ಪಾಟೀಲ್ ಬುರಗಪಳ್ಳಿ, ಪುತ್ರರರಾದ ಡಾ.ವಿಕ್ರಂ ಪಾಟೀಲ್, ಗೌತಮ್ ಪಾಟೀಲ್, ಡಾ. ಬಸವೇಶ ಪಾಟೀಲ್ ರು ಹಾಗೂ ಸೊಸೆಯಂದಿರು, ಮೊಮ್ಮಕಳು ಮತ್ತು ಕುಟುಂಬದ ಆಪ್ತರು ಆಗಮಿಸಿ ಪೂಜೆ ಸಲ್ಲಿಸಿ ನಮಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಕುಪೇಂದ್ರರಾವ ಫತ್ತೆಪೂರ್, ಕೆ. ಎಂ. ಬಾರಿ, ಅಬ್ದುಲ್ ಬಾಶೀದ್, ಭೀಮಶೆಟ್ಟಿ ಮುರುಡ, ವಕೀಲ ಚಂದ್ರಶೆಟ್ಟಿ ಜಾಧವ್, ಭವಾನಿ ಪಾಟೀಲ್ ಚಂದನಕೇರಾ, ಗೋಪಾಲರೆಡ್ಡಿ ಕಲ್ಲೂರ್, ಶಾಂತವೀರ ಹೀರಾಪೂರ್, ಚಂದ್ರಶೇಖರ ಹರಸೂರ್,ಡಾ. ಮಲ್ಲಿಕಾರ್ಜುನ ಪಾಲಾಮೂರ್,ಉಮೇಶ ಬೆಳಕೇರಿ, ನಾಗೇಶ ಮಲಕೋಡ್, ಲೋಕೇಶ ಶೇಳಗಿ, ಹಣಮಂತ ಪೂಜಾರಿ, ಮುಕುಂದ ದೇಶಪಾಂಡೆ, ಸಂತೋಷ ಗುತ್ತೇದಾರ, ರವಿರಾಜ ಕೊರವಿ ಸಂತೋಷ ಗಡಂತಿ ಅವರು ಇದ್ದರು.