ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಣೆಯಲ್ಲಿ ವಿಶ್ರಾಂತ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಮತ.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಣೆಯಲ್ಲಿ ವಿಶ್ರಾಂತ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಮತ.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಣೆಯಲ್ಲಿ ವಿಶ್ರಾಂತ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಮತ.

ಭಾರತೀಯ ತತ್ವಶಾಸ್ತçವನ್ನು ಜಗತ್ತಿಗೆ ಬೋಧಿಸಿದ ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ 

ಕಲಬುರಗಿ: ಭಾರತೀಯ ತತ್ವಶಾಸ್ತçವನ್ನು ಜಗತ್ತಿಗೆ ಬೋಧಿಸಿದ ಕೀರ್ತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ. ೨೧ನೇ ಶತಮಾನದ ಮಹಾಮನೆಯಾದ ಭಾರತದಲ್ಲಿ ನೈತಿಕ ತತ್ವಶಾಸ್ತçದ ಮೂಲಕ ಐಕ್ಯತೆ, ಪರಸ್ಪರ ಪ್ರೀತಿ ಮತ್ತು ಮಾನವತ್ವ ಬೆಳೆಸುವ ಅಗತ್ಯವಿದೆ ಎಂದು ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು. 

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ ಶ್ರಮಿಕ ಮತ್ತು ಸುಸಂಸ್ಕೃತ ಕುಟುಂಭದಲ್ಲಿ ಹುಟ್ಟಿ ಬೆಳೆದ ಸರ್ವಪಲ್ಲಿ ರಾಧಾಕೃಷ್ಣ ಅವರು ಭಾರತೀಯ ತತ್ವಶಾಸ್ತçದ ಬೆಳಕಾಗಿದ್ದಾರೆ. ಹಿಂದುಧರ್ಮ ಮತ್ತು ತತ್ವಶಾಸ್ತçವನ್ನು ಪೌರಾತ್ಯ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ತತ್ವಶಾಸ್ತçವನ್ನು ಬೋಧಿಸಿದ್ದಾರೆ. ೮೭ ವರ್ಷಗಳ ಕಾಲ ನಿರಂತರ ಅಧ್ಯಯನ ಮಾಡಿ ಜಗತ್ತಿನ ಐವತ್ತು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದರು. 

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಗುರುವಿನ ಮಾರ್ಗದರ್ಶನ ಅಗತ್ಯವಿದೆ. ಮೊಬೈಲ್, ಇಂಟರನೆಟ್, ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬೆಳೆಯುತ್ತಿರುವ ಸಂದರ್ಭಗಳಲ್ಲಿ ಕೂಡ ಸೂಕ್ತ ಸಲಹೆ, ವೈಜ್ಞಾನಿಕ ಜ್ಞಾನ ಗುರುವಿನಿಂದ ಪಡೆಯಬೇಕಿದೆ. ಒಬ್ಬ ಅತ್ಯುತ್ತಮ ಶಿಕ್ಷಕನಲ್ಲಿರುವ ವಿಷಯ ಪ್ರಭುತ್ವ, ವಿದ್ಯಾರ್ಥಿಗಳ ಬಗೆಗಿನ ಸಹಾನುಭೂತಿ, ಮಾನವೀಯ ದೃಷ್ಠಿಕೋನಗಳು ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಪ್ರೇರಣೆ ನೀಡುತ್ತವೆ ಎಂದರು. 

ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರು ಉಪಸ್ಥಿತರಿದ್ದರು. ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಅತಿಥಿ ಪರಿಚಯಿಸಿದರು. ಪ್ರೊ. ರಮೇಶ್ ರಾಠೋಡ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಪರೀಕ್ಷಾ ಅಧೀಕ್ಷಕ ಬಿ. ಎಂ. ರುದ್ರವಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಡೀನರುಗಳು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ನಗರದಿಂದ ಆಗಮಿಸಿದ ಗಣ್ಯರು ಭಾಗವಹಿಸಿದ್ದರು. 

ಬಾಕ್ಸ್ : 

ಜಗತ್ತಿನ ಧರ್ಮಗಳ ಬಗ್ಗೆ ಎಲ್ಲಾ ಭಾಷೆಗಳು ಮಾತನಾಡುತ್ತಿವೆ. ಎಲ್ಲಾ ಧರ್ಮಗಳಲ್ಲಿ ನಾವೆಲ್ಲರೂ ಒಂದೇ ಎಂಬ ಧ್ವನಿಯಿದೆ. ಭಾರತೀಯ ಧರ್ಮಗಳಲ್ಲಿ ಆಂತರಿಕ ಶಕ್ತಿಯಿದೆ. ವಿಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ದೇವನೂರರ ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂಬ ಪರಿಕಲ್ಪನೆ ಕೂಡ ವಿಜ್ಞಾನವೇ, ಒಂದಲ್ಲ ಒಂದು ದಿನ ಫಲ ಕೊಡಲೇಬೇಕು. ಬಸವಣ್ಣ ಅವರ ಎನಗಿಂತ ಕಿರಿಯನಿಲ್ಲ, ಶಿವಭಕ್ತರಿಗಿಂತ ಕಿರಿಯನಿಲ್ಲ. ಬುದ್ಧನ ಶಾಮತಿ ಮತ್ತು ಡಾ, ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ ತತ್ವಗಳು ನಾಗರೀಕ ಪ್ರಜ್ಞೆ ಮೂಡಿಸುತ್ತವೆ. ಕಲುಷಿತ ಸಮಾಜದ ಮೌಡ್ಯದಿಂದ ಹೊರಬಂದು ಮನುಷ್ಯರ ನಡುವೆ ಪರಸ್ಪರ ಪ್ರೀತಿ, ಮಾನವತ್ವ ಬೆಳೆಯಬೇಕಿದೆ. ಸರ್ವಪಲ್ಲಿ ರಾಧಾಕೃಷ್ಣ ಅವರು ಪುರಾತನ ವೇದ, ಉಪನಿಷತ್ತು, ಧರ್ಮಶಾಸ್ತç ಪಂಡಿತರಾಗಿ, ಅತ್ಯುತ್ತಮ ಶಿಕ್ಷಕರಾಗಿ, ರಾಷ್ಟçಪತಿ, ಉಪರಾಷ್ಟçಪತಿಯಾಗಿ ರಾಜಕೀಯ ಮುತ್ಸದ್ಧಿಯಾಗಿ ದೇಶದ ಐಕ್ಯತೆ ಮೂಡಿಸಿದ್ದಾರೆ.