ಕೃಷ್ಣ-ಸುಧಾಮನ ಸ್ನೇಹದ ಮಿಲನಕ್ಕೆ ಸಾಕ್ಷಿಯಾದ ಶ್ರೀ ಕೃಷ್ಣ ಜಯಂತಿ ಉತ್ಸವ

ಕೃಷ್ಣ-ಸುಧಾಮನ ಸ್ನೇಹದ ಮಿಲನಕ್ಕೆ ಸಾಕ್ಷಿಯಾದ ಶ್ರೀ ಕೃಷ್ಣ ಜಯಂತಿ ಉತ್ಸವ

ಕೃಷ್ಣ-ಸುಧಾಮನ ಸ್ನೇಹದ ಮಿಲನಕ್ಕೆ ಸಾಕ್ಷಿಯಾದ ಶ್ರೀ ಕೃಷ್ಣ ಜಯಂತಿ ಉತ್ಸವ

ಕಲಬುರಗಿ, ಸೆ. 4: ನಗರದ ನಡೆದ ಶ್ರೀ ಕೃಷ್ಣ ಜಯಂತಿ ಉದ್ಘಾಟನಾ ಕಾರ್ಯಕ್ರಮವು ಅಪರೂಪದ ಸ್ನೇಹ ಸಮ್ಮಿಲನ ಹಾಗೂ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಸುಮಾರು 30 ವರ್ಷಗಳ ನಂತರ ಭೇಟಿಯಾದ ಕಲ್ಲಪ್ಪ ಯಾದವ್ (ಕೃಷ್ಣ) ಹಾಗೂ ವಿನೋದ್‌ಕುಮಾರ್ ಜೇನವೇರಿ (ಸುಧಾಮ) ಪರಸ್ಪರ ಆತ್ಮೀಯತೆ ಹಂಚಿಕೊಂಡ ಕ್ಷಣವು ಪೌರಾಣಿಕ ಕೃಷ್ಣ–ಸುಧಾಮರ ಸ್ನೇಹದ ಮರುಮಿಲನವನ್ನು ನೆನಪಿಸಿತು.

ಜಾತಿ–ಮತಗಳ ಭೇದವಿಲ್ಲದೆ ಬೆಳೆದ ಇವರ ಅಪರೂಪದ ಸ್ನೇಹವು ಸಮಾಜಕ್ಕೆ ಉತ್ತಮ ಸಂದೇಶ ನೀಡಿತು. ಸಮಾಜದ ಅಭಿವೃದ್ಧಿ ಹಾಗೂ ಶಿಕ್ಷಣ ಪ್ರಸಾರವನ್ನು ತಮ್ಮ ಜೀವನದ ಮುಖ್ಯ ಕಾಯಕವನ್ನಾಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಕಲ್ಲಪ್ಪ ಯಾದವ್ ಅವರ ಕಾರ್ಯವನ್ನು ವಿನೋದ್‌ಕುಮಾರ್ ಜೇನವೇರಿ ಅಭಿನಂದಿಸಿ, ಆತ್ಮೀಯವಾಗಿ ಆಲಂಗಿಸಿಕೊಂಡರು.

ಈ ಸಂದರ್ಭದಲ್ಲಿ ಜಗದೀಶ್ವರಿ ನಾಶಿ, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಉದನೂರು, ಜಿಲ್ಲಾ ಯಾದವ ಸಮಾಜದ ಗೌರವಾಧ್ಯಕ್ಷ ರವಿ ಉದನೂರು, ಜಿಲ್ಲಾ ಅಧ್ಯಕ್ಷ ಹಾಗೂ ಉತ್ಸವ ಸಮಿತಿಯ ಉಪಾಧ್ಯಕ್ಷ ಕುಮಾರ ಯಾದವ್, ಹಿರಿಯರಾದ ಶ್ರೀಮಂತ ಯಾದವ್, ಪ್ರೊ. ಎಸ್.ಎಲ್. ಪಾಟೀಲ್ ರೆಡ್ಡಿ, ನ್ಯಾಯವಾದಿ ಮಲ್ಲೇಶಿ ಯಾದವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಮಾಧ್ಯಮ ಕ್ಷೇತ್ರದ ಹಿರಿಯ ಛಾಯಾಚಿತ್ರಗ್ರಾಹಕ ಹಾಗೂ ಸಂಜೆವಾಣಿ ಪತ್ರಿಕೆಯ ಮುಷ್ತಾಕ್ ಅಹ್ಮದ್ ಅಬ್ಬಾಸಿ ಮತ್ತು ಹಿರಿಯ ಕಲಾವಿದ ಬಡದಾಳ ಶಿವಶರಣಪ್ಪ ಅವರನ್ನು ಶ್ರೀ ಕೃಷ್ಣ ಜಯಂತಿ ಉತ್ಸವ ಸಮಿತಿ ಹಾಗೂ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.