ನಯ,ವಿನಯದ,ಅನುಕರಣೆಯ ಶ್ರೀಕೃಷ್ಣ - ಕರಣ ಸುಬೇದಾರ.
ನಯ,ವಿನಯದ,ಅನುಕರಣೆಯ ಶ್ರೀಕೃಷ್ಣ - ಕರಣ ಸುಬೇದಾರ.
ಶಹಪುರ : ಶ್ರೀ ಕೃಷ್ಣನು ತಮ್ಮ ಜೀವನದ ಕಲುಷಿತ ಕಾಳ ರಾತ್ರಿಯಲ್ಲಿ ಜನಿಸಿದ್ದರು,ಇಡೀ ಜಗತ್ತಿನ ಸರ್ವ ಮನುಷ್ಯ ಕುಲವನ್ನು ಪವಿತ್ರರನ್ನಾಗಿ ಮಾಡುವುದೇ ಮುಖ್ಯ ಉದ್ದೇಶವಾಗಿತ್ತು ಎಂದು ಸುಬೇದಾರ ವಿದ್ಯಾಲಯದ ಮುಖ್ಯಸ್ಥರಾದ ಕರಣ ಸುಬೇದಾರ ಹೇಳಿದರು
ತಾಲೂಕಿನ ಸಗರದ ಸುಬೇದಾರ ವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿ ಮಾತನಾಡಿದರು.ಅತ್ಯಂತ ಸಂಭ್ರಮ ಹಾಗೂ ಶ್ರದ್ಧಾ ಪೂರಕವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ಪುಟ್ಟ ಮಕ್ಕಳು ಕೃಷ್ಣ-ರಾಧೆಯರ ಛೇದ್ಮಧಾರಿ ವೇಷದಲ್ಲಿ ರಾರಾಜಿಸುತ್ತಿದ್ದರು.
ಶಾಲೆಯ ಪ್ರಾಂಶುಪಾಲರಾದ ಡಾ. ದತ್ತಾರಾಜ್ ಕುಲಕರ್ಣಿ ಮತ್ತು ಸುಬೇದಾರ ವಿದ್ಯಾಲಯದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

