ಕೂಡಲಹಂಗರಗಾದ ಅಂಬಾರಾಯ ನಡಗೇರಿ ನಿಧನ
ಕೂಡಲಹಂಗರಗಾದ ಅಂಬಾರಾಯ ನಡಗೇರಿ ನಿಧನ
ಆಳಂದ:ಕೂಡಲಹಂಗರಗಾ:ಗ್ರಾಮದ ಹಿರಿಯರಾದ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅಂಬಾರಾಯ ನಡಗೇರಿ (75) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಅ.1ರಂದು ನಿಧನರಾದರು.
ಮೃತರು ಸಮಾಜದಲ್ಲಿ ಸರಳ, ಸಜ್ಜನಿಕೆ ಹಾಗೂ ಸ್ನೇಹಭಾವದಿಂದ ಜೀವನ ನಡೆಸಿದ್ದು, ಬಂಧು-ಬಳಗ ಹಾಗೂ ಗ್ರಾಮದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇವರ ನಿಧನದಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮದ ಜನರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಮೃತರಿಗೆ ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಮಗಳು ಸೇರಿದಂತೆ ಅಪಾರ ಬಂಧು-ಬಳಗವಿದೆ.
ಅವರ ಅಂತ್ಯಕ್ರಿಯೆಯು ಅ.2ರಂದು ಬೆಳಿಗ್ಗೆ 11 ಗಂಟೆಗೆ ಆಳಂದ ತಾಲೂಕಿನ ಕೂಡಲಹಂಗರಗಾ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ
ಅಂಬಾರಾಯ ನಡಗೇರಿ ಅವರ ನಿಧನಕ್ಕೆ ಬಂಧು-ಬಳಗ ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

