ರೇವಣಸಿದ್ದೇಶ್ವರ ಜಾತ್ರಾರ್ಥಿಗಳಿಗೆ ಅನ್ನದಾಸೋಹ

ರೇವಣಸಿದ್ದೇಶ್ವರ ಜಾತ್ರಾರ್ಥಿಗಳಿಗೆ  ಅನ್ನದಾಸೋಹ

ರೇವಣಸಿದ್ದೇಶ್ವರ ಜಾತ್ರಾರ್ಥಿಗಳಿಗೆ ಅನ್ನದಾಸೋಹ 

ಕಮಲಾಪೂರ:ತಾಲೂಕಿನ ರಟಕಲ್ ಗ್ರಾಮದ ರೇವಗ್ಗಿ ರೇವಣಸಿದ್ದೇಶ್ವರ ಜಾತ್ರೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ತಾಲೂಕಿನ ಹೇರೂರ ಕ್ರಾಸ್ ಬಳಿ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಭಾರತೀಯ ಜನತಾ ಪಾರ್ಟಿಯ ಕೈಗಾರಿಕಾ ಪ್ರಕೋಷ್ಠಕ ಸಹ ಸಂಚಾಲಕ ಮಲ್ಲಿಕಾರ್ಜುನ ಮರತೂರಕರ್ ನೇತೃತ್ವದಲ್ಲಿ ನಡೆದ ದಾಸೋಹಕ್ಕೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜಕುಮಾರ ಮಂಠಾಳೆ,ಶರಣಗೌಡ ಹರಕಂಚಿ,ಹಾಗೂ ಹೇರೂರ್ ಕ್ರಾಸ್ ನ ಗ್ರಾಮಸ್ಥರಾದ ಅನೀಲ ಗುತ್ತೇದಾರ, ಸುನೀಲ ಗುತ್ತೇದಾರ,ಜಿಲಾನಿ ಮುತ್ಯಾ, ಭೀಮಾಶಂಕರ ಹರಸೂರಕರ್ ಸೇರಿದಂತೆ ಇತರರು ಇದ್ದರು.