ಸಂಗೀತವು ಭಾಷೆ, ಜಾತಿ, ಗಡಿಯನ್ನು ಮೀರಿದ ಭಾವನೆ: ಶಿವರಾಜ ಅಂಡಗಿ
ಸಂಗೀತವು ಭಾಷೆ, ಜಾತಿ, ಗಡಿಯನ್ನು ಮೀರಿದ ಭಾವನೆ: ಶಿವರಾಜ ಅಂಡಗಿ
ಕಲಬುರಗಿ:ಸಂಗೀತವು ಭಾಷೆ, ಜಾತಿ ಹಾಗೂ ಗಡಿಗಳನ್ನು ಮೀರಿದ ಸಾರ್ವತ್ರಿಕ ಭಾವನೆಯಾಗಿದೆ. ಯೋಗದಂತೆ ಸಂಗೀತವೂ ಮನುಷ್ಯನಿಗೆ ಆರೋಗ್ಯ, ನೆಮ್ಮದಿ ಹಾಗೂ ಮಾನಸಿಕ ನೀಡುತ್ತದೆ ಎಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.
ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಯಿಂದ ಅಂತರಾಷ್ಟ್ರೀಯ ವಿಭಿನ್ನ ಸಂಗೀತ ದಿನಾಚರಣೆ” ಜೂನ್ 21ರಂದು ವಿಶ್ವ ಸಂಗೀತ ದಿನ ಆಚರಿಸಿ. ಎಲ್ಲರಿಗೂ ಸಂಗೀತ ತಲುಪಿಸುವುದು ಇದರ ಉದ್ದೇಶವಾದರೆ, ಆಗಸ್ಟ್ 24ರಂದು ಆಚರಿಸುವ ವಿಭಿನ್ನವಾಗಿದೆ.
ಭಾರತೀಯ ರಾಗ, ತಾಳ ಹಾಗೂ ವಾದ್ಯಗಳ ಪರಂಪರೆಯನ್ನು ಉಳಿಸುವುದು, ಸಂಗೀತ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಹೊಸ ತಲೆಮಾರಿಗೆ ಸಂಗೀತದ ಮಹತ್ವವನ್ನು ಪರಿಚಯಿಸುವುದು ಇಂತಹ ದಿನಾಚರಣೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಶಿವಕುಮಾರ ಹಿರೇಮಠ ಜಾಲಹಳ್ಳಿ ಹಾಗೂ ಅಡಿವೇಶಕುಮಾರ ಗೋಕಾಕ ಅವರನ್ನು ಸನ್ಮಾನಿಸಲಾಯಿತು. ಈ ಮೂಲಕ ವಿಭಿನ್ನ ಸಂಗೀತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಮಹಾಕ್ಷತ್ರಿಯ ಚಲನಚಿತ್ರದ ಹಂಸಲೇಖ ಅವರ ಸಂಗೀತ ಸಂಯೋಜನೆಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ “ಈ ಭೂಮಿ ಬಣ್ಣದ ಬುಗುರಿ” ಗೀತೆಯನ್ನು ಹಾಡಿ ಕಲಾವಿದ ಶಿವಕುಮಾರ ಜಾಲಹಳ್ಳಿ ಅವರು ಪ್ರೇಕ್ಷಕರನ್ನು ರಂಜಿಸಿದರು. ಅವರ ವಿಭಿನ್ನ ಸಂಗೀತ ಪ್ರದರ್ಶನಕ್ಕೆ ಭಕ್ತರು ಹಾಗೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ವೀರಯ್ಯ ಶಾಸ್ತ್ರೀ ಗದಗ, ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಆಡಳಿತ ಮಂಡಳಿ ಸದಸ್ಯರಾದ ಗುರುಲಿಂಗಯ್ಯ ಮಠಪತಿ, ಸುಭಾಷ ಮಂಠಾಳೆ, ನಾಗಭೂಷಣ ಹಿಂದೊಡ್ಡಿ, ವಿಶ್ವನಾಥ ರಟಕಲ್, ಬಸವಂತರಾವ ಜಾಬಶೆಟ್ಟಿ, ಉದಯಕುಮಾರ ಪಡಶೆಟ್ಟಿ, ಶಾಂತಯ್ಯ ಬೀದಿಮನಿ, ವಿರುಪಾಕ್ಷಪ್ಪ ಕಿರಣಗಿ, ವಿನೋದಕುಮಾರ ಗೋರೆ, ಬಸವರಾಜ ಸಜ್ಜನ್, ಅಶೋಕ ಬಿರಾದಾರ್, ಮಡಿವಾಳಪ್ಪ ಸಜ್ಜನ್, ಶರಣಯ್ಯ ಮಠಪತಿ, ಅಭಿಷೇಕ್ ಅನದಕರ್, ನಿಖಿಲ್, ಸಮರ್ಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

