ಭಾರತೀಯ ಕಲೆಗಳಲ್ಲಿ ಯಕ್ಷಗಾನ ಶ್ರೇಷ್ಠ ಕಲೆ : ದೇಶಮುಖ್
ಭಾರತೀಯ ಕಲೆಗಳಲ್ಲಿ ಯಕ್ಷಗಾನ ಶ್ರೇಷ್ಠ ಕಲೆ : ದೇಶಮುಖ್
ಕಲಬುರಗಿ : ಭಾರತೀಯ ಕಲೆಗಳಲ್ಲಿ ಯಕ್ಷಗಾನ ಶ್ರೇಷ್ಠ ಕಲೆಯಾಗಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿಗಳಾದ ಬಸವರಾಜ್ ದೇಶಮುಖ್ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಆಶ್ರಯದಲ್ಲಿ ಸೆಪ್ಟೆಂಬರ್ ಒಂದರಂದು ರಾತ್ರಿ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿಕಲಬುರಗಿ ಜಿಲ್ಲಾ ಹೋಟೆಲ್ ವಸತಿ ಹಾಗೂ ಬೇಕರಿ ಮಾಲೀಕರ ಸಂಘ ಹಾಗೂ ದಕ್ಷಿಣ ಕನ್ನಡ ಸಂಘವು ಏರ್ಪಡಿಸಿದ "ಕಾಂತಾರ ಮಣಿ " ಯಕ್ಷಗಾನ ಪ್ರದರ್ಶನ ವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ನಂತರ ಮಾತನಾಡಿ ಕರಾವಳಿಯಲ್ಲಿ ಹುಟ್ಟಿಕೊಂಡ ಈ ಕಲೆ ಅದರ ವೈಶಿಷ್ಟ್ಯಗಳಿಂದಾಗಿ ಇವತ್ತು ಜಗತ್ತಿನಾದ್ಯಂತ ಹೆಸರು ಪಡೆದಿದೆ.ಇಂತಹ ಕಲಾ ಪ್ರಕಾರವನ್ನು ಕಳೆದ ನಾಲ್ಕು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಶರಣರ ಭೂಮಿಯ ಸಂಸ್ಥಾನದಲ್ಲಿ ಪ್ರದರ್ಶನ ಮಾಡುವ ಅವಕಾಶ ದೊರೆತದ್ದು ನಮ್ಮೆಲ್ಲರ ಭಾಗ್ಯ. ಇಂತಹ ಕಲೆಯನ್ನು ನಾವೆಲ್ಲರೂ ಪ್ರೋತ್ಸಾಹಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರೇಶ ನಂದಗಾವ್, ಡಾ ನೀಲಾಂಬಿಕಾ ಪೊಲೀಸ್ ಪಾಟೀಲ್ ನರಸಿಂಹ ಮೆಂಡನ್ ಚಂದ್ರಶೇಖರ ಶೆಟ್ಟಿ, ವಿದ್ಯಾಧರ ಭಟ್, ಜೀವನ್ ಕುಮಾರ್ ಜತ್ತನ್, ಸುರೇಶ ಬಡಿಗೇರ್,
ಡಾ.ಆನಂದ ಸಿದ್ಧಾಮಣಿ ,ಮಾಲಾ ಕಣ್ಣಿ, ಸತ್ಯನಾಥ ಶೆಟ್ಟಿ, ಪ್ರಶಾಂತ ಶೆಟ್ಟಿ, ಅಮಿತ್ ಶೆಟ್ಟಿ, ಸಿದ್ದರಾಮ ತಳವಾರ ಸಂತೋಷ್ ಪೂಜಾರಿ ಇದ್ದರು. "ಕಾಂತಾರ ಮಣಿ" ಪ್ರಸಂಗ ಕರ್ತೃ ಹಾಗೂ ಭಾಗವತರಾದ ನಡೂರ್ ಸದಾಶಿವ ಅಮೀನ್ ಮಂದಾರ್ತಿ ಅವರನ್ನು ಸಂಸ್ಥಾನದ ವತಿಯಿಂದ ಬಸವರಾಜ್ ದೇಶಮುಖ್ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಯಕ್ಷಗಾನ ಪ್ರಧಾಶನ ವ್ಯವಸತೇ ಮಾಡಿದ ಕಲಬುರಗಿ ಜಿಲ್ಲಾ ಹೋಟೆಲ್, ವಸತಿ ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಹಾಗೂ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಅವರನ್ನು ಸಂಸ್ಥಾನದ ವಾಯಿಯಿಂದ ಈ ಸನ್ಮಾನಿಸಲಾಯಿತು.ನಂತರ ಮಂದಾರ್ತಿ ನಡೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಐತಿಹಾಸಿಕ ಯಕ್ಷಗಾನ "ಕಾಂತಾರ ಮಣಿ" ಪ್ರದರ್ಶಿಸಿದರು. ಶ್ರಾವಣ ಮಾಸದ ಪರ್ವ ಕಾಲದಲ್ಲಿ ಅಸಂಖ್ಯ ಭಕ್ತರು ಹಾಗೂ ಕಲಾಭಿಮಾನಿಗಳ ಸಮ್ಮುಖದಲ್ಲಿ ಜನಮೆಚ್ಚುಗೆ ಪಡೆಯಿತು.

