ನಮ್ಮ ಯುವ ಪೀಳಿಗೆಯ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ‌ ಸ್ವಾತಂತ್ರ್ಯ ದ ಪರಿಕಲ್ಪನೆ ಮೂಡಿಸಬೇಕಿದೆ.ಡಾ.ಟಿ.ಎಂ.ಭಾಸ್ಕರ್

ನಮ್ಮ ಯುವ ಪೀಳಿಗೆಯ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ‌ ಸ್ವಾತಂತ್ರ್ಯ ದ ಪರಿಕಲ್ಪನೆ ಮೂಡಿಸಬೇಕಿದೆ.ಡಾ.ಟಿ.ಎಂ.ಭಾಸ್ಕರ್

ನಮ್ಮ ಯುವ ಪೀಳಿಗೆಯ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ‌ ಸ್ವಾತಂತ್ರ್ಯ ದ ಪರಿಕಲ್ಪನೆ ಮೂಡಿಸಬೇಕಿದೆ.ಡಾ.ಟಿ.ಎಂ.ಭಾಸ್ಕರ್

ಕಲಬುರ್ಗಿ:-ನಮ್ಮ ಇಂದಿನ ಯುವ ಪೀಳಿಗೆಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದ ಪರಿಕಲ್ಪನೆ ಮೂಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಡಾ.ಟಿ.ಎಂ.ಭಾಸ್ಕರ್ ವಿಶ್ರಾಂತ ಕುಲಪತಿಗಳು ಕರೆ ನೀಡಿದರು. ಅವರು ಕಲಬುರಗಿಯ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಕಾರ್ಯಕ್ರಮ ಉದ್ಘಾಟಿಸಿ ಈ ಮೇಲಿನಂತೆ ಕರೆ ನೀಡಿದರು.

ಮುಂದುವರಿದ ಅವರು ಬಂಧನದಲ್ಲಿ ಇದ್ದಾಗಲೇ ಮನುಷ್ಯನಿಗೆ ಸ್ವಾತಂತ್ರ್ಯ ಅಂದರೇನು ಅಂಬುದರ ಬೆಲೆ ತಿಳಿಯುತ್ತದೆ.ಎರಡು ನೂರು ವರ್ಷಗಳ ಕಾಲ ಪರಕೀಯರ ಆಡಳಿತದಲ್ಲಿ ಜರ್ಜರಿತ ವಾದ ಭಾರತಾಂಬೆಯ ಸ್ವಾತಂತ್ರ್ಯ ಕ್ಕಾಗಿ ಆಗಿನ ಮಹಾತ್ಮ ಗಾಂಧಿ, ಅಬ್ದುಲ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಹೀಗೆ ನೂರಾರು ಜನ ಎರಡು ರೀತಿಯ ಹೋರಾಟ ಮಾಡಿದರು.ಒಂದು ಶಾಂತಿ ಅಹಿಂಸೆಯ ಮೂಲಕ, ಇನ್ನೊಂದು ಅಸಹಕಾರ ಪ್ರತಿರೋಧ ಕ್ರಾಂತಿಯ ಮೂಲಕ ಎಂದು ತಿಳಿಸಿದರು.ಸ್ವಾತಂತ್ಯ ಬಂದು ೮೦ ವರ್ಷಗಳು ಗತಿಸಿದವು.ಅದನ್ನು ಸುಭದ್ರವಾಗಿ ಕಾಪಾಡಿಕೊಳ್ಳುವ ಹೊಣೆ ಯುವ ಪೀಳಿಗೆಯ ಮೇಲಿದೆ ಎಂದು ಆಗಿನ ಕವಿಗಳು ತಮ್ಮ ಕಾವ್ಯಗಳಲ್ಲಿ ಸ್ವಾತಂತ್ರ್ಯ ಕ್ಕಾಗಿ ಎಂತಹ ಮನೋಜ್ಞ ಕವಿತೆಗಳು ರಚಿಸಿದ್ದರು ಎಂದು ಲೇಖಕ ಸಿದ್ಧರಾಮ ಹೊನ್ಕಲ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಮಂಡಿಸಿದ ಪ್ರಬಂಧ ದ ಅನೇಕ ಕವಿತೆಗಳನ್ನು ಉಲ್ಲೇಖಿಸಿದರು.

ಆಶಯ ನುಡಿ ಆಡಿದ ಸಾಹಿತ್ಯ ಅಕಾಡೆಮಿಯ ಸದಸ್ಯರು ಆದ ಡಾ.ಸಿದ್ಧರಾಮ ಹೊನ್ಕಲ್ ಅವರು ಮಕ್ಕಳಲ್ಲಿಯ ಸುಪ್ತ ಪ್ರತಿಭೆಯನ್ನು ಹೊರತರುವದು ಹಾಗೂ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ ಕೆಲಸ ಈ ಚಕೋರದ ಮೂಲಕ ನಮ್ಮ ಸಾಹಿತ್ಯ ಅಕಾಡೆಮಿಯು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ಸಾಂಸ್ಕೃತಿಕ ಶಿಸ್ತು,ನಾಡು ನುಡಿಯ ಪರಿಕಲ್ಪನೆ ಈ ಮೂಲಕ ಮಾಡಲಾಗುತ್ತದೆ ಎಂದು ತಿಳಿಸಿದರು. ಆರಂಭದಲ್ಲಿ ಕಲಬುರ್ಗಿ ಜಿಲ್ಲೆಯ ಚಕೋರ ಸಂಚಾಲಕರಾದ ಡಾ.ಗವಿಸಿದ್ಧಪ್ಪ ಪಾಟೀಲ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸ್ವಾತಂತ್ರ್ಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀಮತಿ ಸರೋಜಾ ಬಿರಾದಾರ ವಹಿಸಿ ಇಂತಹ ಮಹತ್ವದ ಕಾರ್ಯಕ್ರಮ ತಮ್ಮ ಕಾಲೇಜಿನಲ್ಲಿ ನಡೆಸಿದ್ದಕ್ಕೆ ಅಕಾಡೆಮಿಗೆ ಧನ್ಯವಾದಗಳು ಅರ್ಪಿಸಿದರು.ವೇದಿಕೆಯಲ್ಲಿ ಉಪನ್ಯಾಸಕರಾದ ಡಾ.ಚಂದ್ರಶೇಖರ ದೊಡ್ಡಮನಿ, ಡಾ.ಚವ್ಹಾಣರು, ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಡಾ. ಶಿವಕುಮಾರ್ ಹುಣಸಿಹಾಳ ಅವರು ಅರ್ಥಪೂರ್ಣವಾಗಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಉಪನ್ಯಾಸಕರಾದ ಶಿವಲಿಂಗಪ್ಪ ಪುಜಾರಿ ವಂದಿಸಿದರು. ಅಪಾರ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.