ಪತ್ರಕರ್ತರ ಧ್ವನಿ ಸಂಘ ಬಲವರ್ಧನೆಗೆ ಸಜ್ಜು: ಗಜೇಂದ್ರಗಡದಲ್ಲಿ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆ

ಪತ್ರಕರ್ತರ ಧ್ವನಿ ಸಂಘ ಬಲವರ್ಧನೆಗೆ ಸಜ್ಜು: ಗಜೇಂದ್ರಗಡದಲ್ಲಿ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆ

ಪತ್ರಕರ್ತರ ಧ್ವನಿ ಸಂಘ ಬಲವರ್ಧನೆಗೆ ಸಜ್ಜು: ಗಜೇಂದ್ರಗಡದಲ್ಲಿ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆ

ಗಜೇಂದ್ರಗಡ ತಾಲೂಕಿನ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳ ಆಯ್ಕೆ ಕುರಿತು ಶ್ರೀ ಕೋಡಿಕೊಪ್ಪದ ವಿರಪ್ಪಜ್ಜನ ಮಠದಲ್ಲಿ ಗದಗ್ ಜಿಲ್ಲೆಯ ಕಾರ್ಯನಿರ್ತಾ ಪತ್ರಕರ್ತರ ದ್ವನಿ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಸಭೆ ಜರುಗಿತು 

ಪ್ರಾರಂಭದಲ್ಲಿ ಗಜೇಂದ್ರಗಡ ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ್ ಗೋಬಿ ರವರು ಎಲ್ಲ ಪದಾಧಿಕಾರಿಗಳನ್ನು ಸ್ವಾಗತ ಮಾಡಿಕೊಳ್ಳಲಾಯಿತು 

ನಂತರ ಗದಗ ಜಿಲ್ಲಾ ಕಾ ನಿ ಪ ಧ್ವನಿ ಸಂಘದ ಸಹ ಕಾರ್ಯದರ್ಶಿಯಾದ ಎಚ್ ವಿ ಈಟಿ ಸಭೆ ಕುರಿತು ಸಂಘಟನೆಯು ಎಲ್ಲರ ಒಂದು ಅಭಿಪ್ರಾಯದ ಮೇರೆಗೆ ನಮ್ಮ ಸಂಘಟನೆಯನ್ನು ಬಲಪಡಿಸೋಣ ಜೊತೆಗೆ ಗಜೇಂದ್ರಗಡ ಭಾಗದ ಸಂಘಟನೆಯನ್ನು ವಿಶೇಷವಾಗಿ ಇತಿಹಾಸ ಪುಟದಲ್ಲಿ ಬರೆಯುವಂತೆ ಸಂಘಟನೆಯನ್ನು ಆಯೋಜಿಸಬೇಕು ಅದೇ ರೀತಿಯಾಗಿ ಪದಾಧಿಕಾರಿಗಳಾಗಿ ನೇಮಕಾಗುವವರು ಸಂಘದ ಎಲ್ಲಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದು ಸುದೀರ್ಘವಾಗಿ ಮಾತನಾಡಿದರು 

ಇದೇ ಸಮಯದಲ್ಲಿ ಗದಗ ಜಿಲ್ಲಾ ಕಾ ನಿ ಪ ಧ್ವನಿ ಸಂಘದ ಜಿಲ್ಲಾ ನಿರ್ದೇಶಕರಾದ ಎಂ ಎಸ್ ಮಲ್ಲನಗೌಡ್ರ ಸಭೆ ಕುರಿತು 

“ಸಭೆಗಳು ಕೇವಲ ಚರ್ಚೆಗೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಬೇಕು. ಸಂಘದ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ತಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಂಘದ ಬಲವರ್ಧನೆ, ಸದಸ್ಯರ ಸಮಸ್ಯೆಗಳ ಪರಿಹಾರ ಹಾಗೂ ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಸದೃಢಗೊಳಿಸಿ, ಜನಪರ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು,” ಎಂದು ಮಾತನಾಡಿದರು

ಇದೇ ಸಮಯದಲ್ಲಿ ಸಭೆ ಕುರಿತು “ಸಭೆಯಲ್ಲಿ ಸಂಘದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸದಸ್ಯರ ಸಮಸ್ಯೆಗಳನ್ನು ಚರ್ಚಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಹಾಗೂ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಬೇಕಾದ ವಿವಿಧ ಜನಪರ ಕಾರ್ಯಕ್ರಮಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸಂಘದ ಪ್ರತಿಯೊಬ್ಬ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಸಂಘದ ಉದ್ದೇಶಗಳನ್ನು ಯಶಸ್ವಿಯಾಗಿ ಈಡೇರಿಸಬೇಕು. ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಹಿತಾಸಕ್ತಿಗಾಗಿ ಸದಾ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು,” ಎಂದು ಗಜೇಂದ್ರಗಡ ತಾಲೂಕಿನ ಕಾರ್ಯಕಾರಿಣಿ ಸದಸ್ಯರಾದ ಪ್ರಶಾಂತ್ ಇಟಗಿ ಹಾಗೂ ಮಂಜುನಾಥ್ ಬಂಡಿವಡ್ಡರ್ ಹೇಳಿದರು.

ಹಾಗೆ ಅಬ್ದುಲ್ ಸಾಬ್ ಹುಡೇದ ಸಹ ಸಭೆ ಕುರಿತು “ಸಭೆಯಲ್ಲಿ ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಸಮಸ್ಯೆಗಳ ಕುರಿತು ಚರ್ಚಿಸಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಸಂಘವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ಮಾಡಲಾಯಿತು,” ಎಂದು ಹೇಳಿದರು.

ಗದಗ್ ಜಿಲ್ಲೆಯ ಕಾ ನಿ ಪ ದ್ವನಿ ಸಂಘ ದ ಪ್ರಧಾನ ಕಾರ್ಯದರ್ಶಿ ಎಸ್ ವಿ ಸಂಕನಗೌಡ್ರರವರು “ಸಭೆಯು ಸಂಘದ ಸಂಘಟನೆ ಬಲಪಡಿಸಲು ಹಾಗೂ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹತ್ವದ ವೇದಿಕೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಸದಸ್ಯರ ಹಿತಾಸಕ್ತಿಗೆ ಸದಾ ಆದ್ಯತೆ ನೀಡಲಾಗುವುದು,” ಎಂದು ಹೇಳಿದರು.

ಸಭೆ ಕುರಿತು ಗದಗ್ ಜಿಲ್ಲೆಯ ಕಾ ನಿ ಪ ಧ್ವನಿ ಸಂಘದ ಅಧ್ಯಕ್ಷರಾದ ಅಂದಪ್ಪ ಮಾದರ್ ಸಭೆಯ ಕುರಿತು ಇಂದು ಹಮ್ಮಿಕೊಳ್ಳಲಾದ ನಮ್ಮ ಸಂಘದ ಸಭೆಯು ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿದೆ. ನಮ್ಮ ಸಂಘಟನೆಯ ಬಲವರ್ಧನೆ ಮತ್ತು ಸದಸ್ಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಗಂಭೀರವಾದ ಹಾಗೂ ದೂರಗಾಮಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಲ್ಲಾ ಮಾಧ್ಯಮ ಮಿತ್ರರು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಮಾತನಾಡಿದರು 

ಕಾರ್ಯಕ್ರಮದ ಕೊನೆಗೆ ಎಲ್ಲ ಸದಸ್ಯರು ಸಂಘದ ಬೆಳವಣಿಗೆ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಾಗೂ ಸಲಹೆ ಸೂಚನೆಗಳನ್ನು ನೀಡಿದರು 

ಕಾರ್ಯಕ್ರಮದ ಕೊನೆಗೆ ಗದಗ್ ಜಿಲ್ಲೆಯ ಕಾ ನಿ ಪ ದ್ವನಿ ಸಂಘದ ಸಹ ಕಾರ್ಯದರ್ಶಿಯಾದ ಎಚ್ ವಿ ಈಟಿ ವಂದನಾರ್ಪಣೆ ಮಾಡಿ ಸಭೆಯನ್ನು ಮುಕ್ತಾಯಗೊಳಿಸಿದರು 

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ ಜಿಲ್ಲಾ ವರದಿಗಾರರು