ಪಾಮ್‌ ಮರಗಳ ಬೆಳೆ ವೀಕ್ಷಿಸಿ ಕೃಷಿಕರೊಂದಿಗೆ ಚರ್ಚೆ

ಪಾಮ್‌ ಮರಗಳ ಬೆಳೆ ವೀಕ್ಷಿಸಿ ಕೃಷಿಕರೊಂದಿಗೆ ಚರ್ಚೆ

ಪಾಮ್‌ ಮರಗಳ ಬೆಳೆ ವೀಕ್ಷಿಸಿ ಕೃಷಿಕರೊಂದಿಗೆ ಚರ್ಚೆ

ಕಲಬುರಗಿ: ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ ಮಾಲಿ ಪಾಟೀಲ್, ಕಲಬುರಗಿ ಜಿಲ್ಲಾ ಕೃಷಿ ಸಮಾಜದ ನಿರ್ದೇಶಕ ರಾಜಶೇಖರ್ ರಾಮಪುರ, ಎಪಿಎಂಸಿ ಮಾಜಿ ನಿರ್ದೇಶಕ ಇಬ್ರಾಹಿಂ ಹಾಗೂ ಕಮಲಾಪುರದ ಸುರೇಶ್ ಅವರು ಹಾಪ್‌ಕಾಮ್ಸ್ ನಿರ್ದೇಶಕ ರಾಜಕುಮಾರ ಕೋಟಿ ಅವರ ತೋಟಕ್ಕೆ ಭೇಟಿ ನೀಡಿ ಪಾಮ್‌ ಮರಗಳ ಬೆಳೆಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪಾಮ್‌ ಮರಗಳ ಬೆಳೆಯ ವಿಧಾನ, ನಿರ್ವಹಣೆ, ಇಳುವರಿ ಹಾಗೂ ಕೃಷಿಕರಿಗೆ ದೊರೆಯುವ ಪ್ರಯೋಜನಗಳ ಕುರಿತು ಚರ್ಚಿಸಿ, ಅಗತ್ಯ ಸಲಹೆಗಳನ್ನು ನೀಡಿದರು.

ತಮ್ಮ ತೋಟಕ್ಕೆ ಭೇಟಿ ನೀಡಿ ಬೆಳೆ ವೀಕ್ಷಿಸಿ, ಕೃಷಿ ಚಟುವಟಿಕೆಗಳ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದ ಬಸವರಾಜ ಮಾಲಿ ಪಾಟೀಲ್ ಹಾಗೂ ಗಣ್ಯರಿಗೆ ರಾಜಕುಮಾರ ಕೋಟಿ ಅವರು ಕೃತಜ್ಞತೆ ಸಲ್ಲಿಸಿದರು.