ಕನಕದಾಸರ ಆದರ್ಶ ತತ್ವಗಳು ಮೈಗೂಡಿಸಿಕೊಳ್ಳಿ - ಡಾ. ಮಲ್ಲಿಕಾರ್ಜುನ ಪಾಲಾಮೂರ

ಕನಕದಾಸರ ಆದರ್ಶ ತತ್ವಗಳು ಮೈಗೂಡಿಸಿಕೊಳ್ಳಿ - ಡಾ. ಮಲ್ಲಿಕಾರ್ಜುನ ಪಾಲಾಮೂರ

ಕನಕದಾಸರ ಆದರ್ಶ ತತ್ವಗಳು ಮೈಗೂಡಿಸಿಕೊಳ್ಳಿ - ಡಾ. ಮಲ್ಲಿಕಾರ್ಜುನ ಪಾಲಾಮೂರ

ಚಿಂಚೋಳಿ : ಇಂದಿನ ವಿದ್ಯಾರ್ಥಿಗಳು ಕಠಿಣ ಅಭ್ಯಾಸದ ಜೊತೆಗೆ ಕನಕದಾಸರ ಮೌಲ್ಯಯುತ ಕೃತಿಗಳನ್ನು ಓದುವುದರ ಜೊತೆಗೆ ಅವರ ಆದರ್ಶ ತತ್ವಗಳು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಅವರು ಕನಕದಾಸರ ಸಂದೇಶಗಳನ್ನು ಯುವ ಸಮೂಹಕ್ಕೆ ಮುಟ್ಟಿಸುವ ಕೆಲಸ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಪಾಲಮೂರೆ ಹೇಳಿದರು. 

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಕನ್ನಡದ ಸ್ವಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದರು.

ಹಿರಿಯ ಪತ್ರಕರ್ತರಾದ ಜಗನ್ನಾಥ ಶೇರಿಕಾರ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ಕೀರ್ತನೆಗಳು ರಚಿಸುವುದರ ಮೂಲಕ ಭಕ್ತಿ ಪಂಥ ಮತ್ತು ಸಾಮಾಜಿಕ ಸುಧಾರಣೆಯ ಜೊತೆಗೆ ಕನಕದಾಸರ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಬಣ್ಣಿಸಿದರು, ಮೋಹನ ತರಂಗಣಿ,ನಳಚರಿತ್ರೆ, ರಾಮಧ್ಯಾನ ಚರಿತೆ,ಹರಿಭಕ್ತಿಸಾರ ಹರಿಚರಿತೆ ಎಂಬ ಈ ಕೃತಿಗಳು ರಚಿಸಿ ನಾಡಿಗೆ ಪರಿಚಯಿಸಿದ್ದಾರೆ ಎಂದು ಹೇಳಿದರು,ಇವರ ಕೃತಿಗಳಲ್ಲಿ ಜ್ಞಾನ,ಭಕ್ತಿ,ವೈರಾಗ್ಯ, ಅರ್ಥೈಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯ ಅತಿಥಿಗಳಾದ ಧೂಳಪ್ಪ ಮಾಳೇನೂರು ಮಾತನಾಡಿ ಕ್ರೂರವಾದ ಜಾತಿ ಹೋಗಲಾಡಿಸಲು ಅದ್ಭುತವಾದ ಸಾಹಿತ್ಯ ಮತ್ತು ಅನೇಕ ಕೀರ್ತನೆ ರಕ್ಷಿಸುವುದರ ಜೊತೆಗೆ ನಾಡಿಗೆ ಒಳ್ಳೆಯ ಸಂದೇಶ ಸಾರಿದ ಭಕ್ತ ಶ್ರೇಷ್ಠ ಕನಕದಾಸರ ಬದುಕು ಪ್ರತಿಯೊಬ್ಬರಿಗೂ ಪ್ರೇರಣೆ ಎಂದು ನುಡಿದರು 

ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸಲು,ಜಗದ ಉದ್ಧಾರಕ್ಕೆ ದೃಢ ಸಂಕಲ್ಪ ಮಾಡಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕನ್ನಡದ ಸ್ವಂತ ಕವಿ ಕನಕದಾಸರು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು

ಈ ಸಮಾರಂಭದ ವೇದಿಕೆಯ ಮೇಲೆ ಕುರುಬ ಸಮಾಜದ ಹಿರಿಯ ಮುಖಂಡರಾದ ಹಣಮಂತ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಕು.ಗೌತಮಿ ಮತ್ತು ಅಮೂಲ್ಯ ಪ್ರಾರ್ಥಿಸಿದರು,ಕಲಾನಿಕೇತನ ಟ್ರಸ್ಟಿನ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕದ ಕನಕ ದರ್ಶನ ಕಾರ್ಯಕ್ರಮದ ಸಂಚಾಲಕರಾದ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯಕ್ರಮವನ್ನು ಮಧುಕರ ನಿರೂಪಿಸಿ ವಂದಿಸಿದರು.